ಟ್ರಾಫಿಕ್ ಫೈನ್ ವಸೂಲಿ ವೇಳೆ , ವಾಹನ ಸವಾರರಿಗೆ ಕಿರಿಕಿರಿ ! ಎಸ್​ಪಿಗೆ ಮನವಿ

While collecting traffic fines, motorists are annoyed! Appeal to SPಟ್ರಾಫಿಕ್ ಫೈನ್ ವಸೂಲಿ ವೇಳೆ , ವಾಹನ ಸವಾರರಿಗೆ ಕಿರಿಕಿರಿ ! ಎಸ್​ಪಿಗೆ ಮನವಿ

ಟ್ರಾಫಿಕ್ ಫೈನ್  ವಸೂಲಿ ವೇಳೆ , ವಾಹನ ಸವಾರರಿಗೆ ಕಿರಿಕಿರಿ ! ಎಸ್​ಪಿಗೆ ಮನವಿ

KARNATAKA NEWS/ ONLINE / Malenadu today/ Aug 20, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯಲ್ಲಿ ಟ್ರಾಫಿಕ್ ಪೊಲೀಸರು  ವಾಹನ ತಪಾಸಣೆಯ ಸಲುವಾಗಿ ನಡೆಸ್ತಿರುವ ಪ್ರಯತ್ನಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದು ಜಿಲ್ಲಾ ಎಸ್​ಪಿ ಮಿಥುನ್ ಕುಮಾರ್​ರವರಿಗೆ  ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮನವಿ ಸಲ್ಲಿಸಿದೆ 

ಅಪಾಯಕಾರಿ ತಿರುವುಗಳಲ್ಲಿ, ಸಂಧಿಗಳಲ್ಲಿ, ಆಟೋ ನಿಲ್ದಾಣದ ಮರೆಯಲ್ಲಿ, ಟ್ಯಾಕ್ಸಿ ಸ್ಟಾಂಡ್ ಗಳ ಒಳಗೆ, ಸಾರ್ವಜನಿಕರ ಆಸ್ಪತ್ರೆ ತಿರುವು, ಹೀಗೆ ಮುಂತಾದ ಅಪಾಯಕಾರಿ ತಿರುವುಗಳಲ್ಲಿ ಪೊಲೀಸರು ದಂಡ ವಿಧಿಸಲು ನಿಂತಿರುತ್ತಾರೆ. ಅವರನ್ನು ನೋಡುವ ವಾಹನ ಸವಾರರು, ತಪ್ಪಿಸಿಕೊಳ್ಳುವ ಬರದಲ್ಲಿ ವಾಹನ ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ. ಇನ್ನೂ ಯೇಕಾಯೇಕಿ  ಪೊಲೀಸ್ ಸಿಬ್ಬಂದಿಗಳು ರಸ್ತೆಯ ಮಧ್ಯ ಬರುವುದರಿಂದ ಹಿಂದೆ ಬರುವ ವಾಹನ ಸವಾರರುಗಳಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸದಸ್ಯರು ಮನವಿ ಸಲ್ಲಿಸಿದ್ದಾರೆ. 


ರೈತರ ಮಾಹಿತಿ ಕೇಂದ್ರ ಪ್ರಾರಂಭ ಮತ್ತು ತಾಂತ್ರಿಕ ಮಾಹಿತಿ ಕಾರ್ಯಗಾರ

ದಿನಾಂಕ 17.08.2023 ರಂದು ಶಿವಮೊಗ್ಗ ಜಿಲ್ಲಾ ಸಹಕಾರ ಮಾರಾಟ ಒಕ್ಕೂಟ ನಿ., ಮತ್ತು ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ(ಅ) ಶಿವಮೊಗ್ಗ ಇವರ ಸಹಯೋಗದಲ್ಲಿರೈತರ ಮಾಹಿತಿ ಕೇಂದ್ರ ಪ್ರಾರಂಭ ಮತ್ತು ತಾಂತ್ರಿಕ ಮಾಹಿತಿ ಕಾರ್ಯಗಾರವನ್ನು ನೆಡಸಲಾಯಿತು 

ಈ ಕಾಯ೯ಕ್ರಮವನ್ನು ಬಿ.ವೈರಾಘವೇಂದ್ರ, ಲೋಕಸಭಾ ಸದಸ್ಯರು ಶಿವಮೊಗ್ಗ ರವರು ಉದ್ಘಾಟಿಸಿ ಮಾತನಾಡುತ್ತಾ ಈ ಮಾಹಿತಿ ಕೇಂದ್ರದ ಸಂಪೂಣ೯  ಪ್ರಯೋಜನವನ್ನು ನಮ್ಮ ಜಿಲ್ಲೆಯ ರೈತರು ಪಡೆಯಬೇಕು ಎಂದರು ಕಾಯ೯ಕ್ರಮದ ಅದ್ಯಕ್ಷತೆಯನ್ನು  ಮೋಹನ್ ಉಂಬೈಬೈಲು, ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಸಹಕಾರ ಮಾರಾಟ ಒಕ್ಕೂಟ ನಿ.ಶಿವಮೊಗ್ಗ ವಹಿಸಿದ್ದರು  , ಶಾಸಕ  ಎಸ್.ಎನ್​ ಚನ್ನಬಸಪ್ಪ, ಶಾಸಕಿ ಶಾರದಾ ಪೂರಾನಾಯ್ಕ ಹೆಚ್.ಎಲ್‌ಷಡಾಕ್ಷರಿ, ಅಧ್ಯಕ್ಷರು (ಪ್ರಭಾರ), ಎಸ್.ಡಿ.ಸಿ.ಸಿಬ್ಯಾಂಕ್, ಶಿವಮೊಗ್, ಡಿ.ಎಂ. ಶಂಕರಪ್ಪ, ಅಧ್ಯಕ್ಷರು, ಅಡಿಕೆ ಮಾರಾಟ ವರ್ತಕರ ಸಂಘ (ನೊ), ಶಿವಮೊಗ್ಗ ,  ಪಿಶರತ್ ಗೌಡ, ಡಿಡಿಎಂ, ನಬಾರ್ಡ್, ಶಿವಮೊಗ್ಗ, ಸೇರಿದಂಥೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು 



ಬಿಕ್ಕೋನಹಳ್ಳಿಯಲ್ಲಿ ಸಿಕ್ಕಿದ್ದು ನರಭಕ್ಷಕ ಚಿರತೆ ಎಂದು ಗೊತ್ತಾಗಿದ್ದು ಹೇಗೆ? MAN EATER ಸಿಕ್ಕಿಬಿದ್ದಿದ್ದೇಗೆ?

ಕಳ್ಳತನ ಕೇಸ್​ ಬೆನ್ನಲ್ಲೆ ಚಂದ್ರಗುತ್ತಿಗೆ ಎಸ್​ಪಿ ಭೇಟಿ! 12 ಸೂಚನೆ ನೀಡಿದ ಮಿಥುನ್ ಕುಮಾರ್!

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು