KARNATAKA NEWS/ ONLINE / Malenadu today/ Jun 21, 2023 SHIVAMOGGA NEWS ಶಿವಮೊಗ್ಗದಲ್ಲಿ ನಿನ್ನೆ ಒಂದೇ ದಿನ ಬಿದ್ದ ಸಣ್ಣ ಮಳೆಗೇ ನಗರದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿರುವುದು ಶಿವಮೊಗ್ಗ ಮಹಾನಗರ ಪಾಲಿಕೆ ಕೈಗೊಂಡ ಕಾಮಗಾರಿಗಳೆಲ್ಲಾ ಕಳಪೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಪಾಲಿಕೆಯ ಆಡಳಿತಾರೂಢ ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಸಾಬೀತಾಗಿದೆ ಎಂದು ಶಿವಮೊಗ್ಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ಮಾರ್ಟ್‍ಸಿಟಿ ಯೋಜನೆಯಡಿ ಶಿವಮೊಗ್ಗ ನಗರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ಹರಿದು ಬಂದಿದೆ. ಯೋಜನೆಯ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದ್ದು, ಯಾವುದೇ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸದೇ ಅವೈಜ್ಞಾನಿಕವಾಗಿ ಅರೆಬರೆಯಾಗಿ ನಡೆಸಲಾಗಿದೆ.
ಜನರಿಗೆ ತೊಂದರೆ
ಯುಜಿಡಿ, ಚರಂಡಿ ವ್ಯವಸ್ಥೆಯನ್ನು ಹಾಳುಮಾಡಲಾಗಿದೆ. ನಿನ್ನೆ ಬಿದ್ದ ಒಂದು ಸಣ್ಣ ಮಳೆಗೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿರುವುದನ್ನು ನೋಡಿದರೆ, ಪಾಲಿಕೆಯ ಬಿಜೆಪಿ ಆಡಳಿತ ಜನೋಪಯೋಗಿ ಕೆಲಸ ಮಾಡುವುದಕ್ಕಿಂತ ಜನರಿಗೆ ತೊಂದರೆ ಕೊಡಲೆಂದೇ ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ನಡೆಸಿದಂತಾಗಿದೆ ಎಂದು ದೂರಿದ್ದಾರೆ.
ಸ್ಮಾರ್ಟ್‍ಸಿಟಿ ಕಾಮಗಾರಿಗಳಿಂದ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು ಎಂದು ಕಾಂಗ್ರೆಸ್ ಹೇಳುತ್ತಲೇ ಬಂದಿತ್ತು. ವೈಜ್ಞಾನಿಕವಾಗಿ ಜನರಿಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಲು ಒತ್ತಾಯಿಸಿತ್ತು. ಆದರೆ, ಸ್ಮಾರ್ಟ್‍ಸಿಟಿ ಅಧಿಕಾರಿಗಳು, ಪಾಲಿಕೆ ಆಡಳಿತ ಜನರ ಹಿತ ಮರೆತು ಮನಸೋ ಇಚ್ಛೆ ಕಾಮಗಾರಿ ನಡೆಸಿರುವುದರಿಂದ ಜನತೆ ಈಗ ಸಂಕಷ್ಟ ಅನುಭವಿಸುವಂತಾಗಿದೆ. ಇನ್ನೂ ಮಳೆ ಆರಂಭವಾಗುವ ಮುನ್ನವೇ ಇಂತಹ ಅವಾಂತರಗಳಾದರೆ ಮುಂದಿನ ದಿನಗಳಲ್ಲಿ ಜನರ ಗತಿ ಏನು ಎಂದು ಅವರು ಪ್ರಶ್ನಿಸಿದ್ದಾರೆ.ಕೂಡಲೇ ಪಾಲಿಕೆಯ ಆಡಳಿತಾರೂಢ ಬಿಜೆಪಿ ಎಚ್ಚೆತ್ತುಕೊಳ್ಳಬೇಕು. ಅವೈಜ್ಞಾನಿಕ ಕಾಮಗಾರಿ ನಡೆಸಿದವರ ವಿರುದ್ಧ ತನಿಖೆ ನಡೆಸಬೇಕು. ಇಲ್ಲವಾದರೆ ಮುಂದಿನ ಪಾಲಿಕೆಯ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಸಣ್ಣ ಮಳೆಗೆ ಸ್ಮಾರ್ಟ್ ಸಿಟಿಯಲ್ಲಿ ಹರಿಯಲಿಲ್ಲ ನೀರು! ಶಿವಮೊಗ್ಗದಲ್ಲಿ ನಿನ್ನೆ ಮಳೆಯ ಆರ್ಭಟಕ್ಕೆ ಕಥೆ ಪಡ್ಚಾ! pic.twitter.com/1zONo96P9j
— malenadutoday.com (@CMalenadutoday) June 21, 2023
ಪುರುಷರೇ ಹುಷಾರ್! ಅನಾಥಳೆಂದು ಹೇಳಿ ಲಗ್ನವಾಗಿ ಯುವಕನಿಗೆ ಬೆದರಿಕೆ !7 ವರ್ಷಗಳ ನಂತರ ಬಯಲಾಯ್ತು 4 ಮಕ್ಕಳ ತಾಯಿ ಮದುವೆ. ಸಂಸಾರ, ಮೋಸ
ಭದ್ರಾವತಿ ತಾಲ್ಲೂಕಿನಲ್ಲಿ ಮಹಿಳೆಯೊಬ್ಬಳ ಟ್ರ್ಯಾಪ್ನಲ್ಲಿ ಸಿಲುಕಿದ ಯುವಕನೊಬ್ಬ ಇದೀಗ ತನಗಾದ ಮೋಸದ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದಷ್ಟೆ ಅಲ್ಲದೆ ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಸ್ಠೇಷನ್ನಲ್ಲಿ ದೂರು ನೀಡಿದ್ಧಾರೆ.
ಏನಿದು ಪ್ರಕರಣ!
2015 ರಲ್ಲಿ ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರ ಕಾಳಿಂಗೇಶ್ವರ ದೇವಾಲಯದಲ್ಲಿ ಯುವಕನೊಬ್ಬ ಮದುವೆಯಾಗಿದ್ದರು. ಅನಾಥ ಹುಡುಗಿಯನ್ನು ಯಾವುದೇ ಡಿಮ್ಯಾಂಡ್ ಇಲ್ಲದೇ ಮದುವೆಯಾದ ಯುವಕ, ಮದುವೆ ಖರ್ಚನ್ನ ಕೂಡ ಖುದ್ಧಾಗಿ ವ್ಯಯಿಸಿದ್ರು. ಆದರೆ ಅನಾಥಳು ಎಂದು ಹೇಳಿ ಮದುವೆಯಾದ ಯುವತಿಯ ವರ್ತನೆ ಮದುವೆಯಾದ ಮೇಲೆ ಬದಲಾಗಿದೆ. ಅತ್ತೆಯೊಂದಿಗೆ ಜಗಳ ತೆಗೆಯುತ್ತಿದ್ದ ಆಕೆ, ಅತ್ತೆ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದಳಂತೆ.
ಮೂಡಿತು ಅನುಮಾನ
ಈ ಮಧ್ಯೆ ಪತ್ನಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಂದು ತನ್ನ ಅಕ್ಕನ ಮಕ್ಕಳು ಎಂದು ಗಂಡನಿಗೆ ಪರಿಚಯ ಮಾಡಿದ್ಧಾಳೆ. ಆನಂತರ ಕೆಲದಿನಗಳ ನಂತರ ಪತಿಗೆ ಒಂದೊಂದೆ ಅನುಮಾನಗಳು ಆರಂಭವಾಗಿದೆ. ಅದರ ನಡುವೆ ಮಹಿಳೆ ತನಗೆ ಅಪೆಂಡಿಕ್ಸ್ ಆಪರೇಷನ್ ಆಗುವಾಗ , ಸಂತಾನ ಹರಣ ಚಿಕಿತ್ಸೆ ಆಗಿದೆ ತನಗೆ ಎಂದು ಹೇಳಿದ್ದಾಳೆ. ಇದನ್ನ ಕೇಳಿದ ಯುವಕ , ತನಗೆ ಗೊತ್ತಿರುವ ಡಾಕ್ಟರ್ನ್ನ ಸಂಪರ್ಕಿಸಿದ್ಧಾನೆ.ಅಲ್ಲಿ ಆಕೆಯನ್ನು ಪರೀಕ್ಷೆಗೆ ಒಳಪಡಿಸಿ, ಮಕ್ಕಳಾಗುವಂತೆ ಚಿಕಿತ್ಸೆ ಕೊಡಿಸಿ ಎಂದಿದ್ಧಾನೆ. ಆದರೆ ವೈದ್ಯರು ಇರುವ ವಿಚಾರ ಹೇಳಿದ್ದು, ಆಕೆಗೆ ಅದಾಗಲೇ ಮಕ್ಕಳಾಗಿದ್ದು, ಆಕೆಯೇ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದಾಳೆ ಎಂದು ತಿಳಿಸಿದ್ದಾರೆ.
ಪ್ರಶ್ನಿಸಿದ್ದಕ್ಕೆ ಬೆದರಿಕೆ
ಇನ್ನೂ ಈ ಬಗ್ಗೆ ಯುವಕ , ಮಹಿಳೆಯನ್ನು ಪ್ರಶ್ನಿಸಿದ್ಧಾನೆ. ಅಷ್ಟೆ ಅಲ್ಲದೆ, ಆಕೆಯ ಪೂರ್ವ ಪರ ವಿಚಾರಸಿದ್ದಾನೆ. ಆಗ ಅಕ್ಕನ ಮಕ್ಕಳು ಎಂದು ಕರೆದುಕೊಂಡು ಬಂದವರು, ಈಕೆಯದ್ದೆ ಮಕ್ಕಳು ಎಂಬುದು ಗೊತ್ತಾಗಿದೆ. ತನ್ನ ಬಂಡವಾಳ ಆಚೆ ಬರುತ್ತೆ ಎಂಬ ಭಯದಲ್ಲಿ ಮಹಿಳೆ ತಾನು ಕರೆದುಕೊಂಡು ಬಂದ ತನ್ನ ಮಗಳ ಜೊತೆ ಯುವಕನಿಗೆ ಸಂಬಂಧ ಕಲ್ಪಿಸಿ ಮಾತನಾಡಿ, ಬೆದರಿಕೆ ಹಾಕಿದ್ಧಾಳೆ. ಅಂತಿಮವಾಗಿ ಬೇಸತ್ತ ಯುವಕ ಕೋರ್ಟ್ನಲ್ಲಿ ಪಿಸಿಆರ್ ಸಲ್ಲಿಸಿ ತನಗೆ ನ್ಯಾಯಕೊಡಿಸಿ ಎಂದು ತನಗೆ ಲಭ್ಯವಿರುವ ಸಾಕ್ಷ್ಯಗಳನ್ನ ಒದಗಿಸಿದ್ದಾನೆ. ಕೋರ್ಟ್ ಸೂಚನೆಯಂತೆ ಪೇಪರ್ ಟೌನ್ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ.
ಶಿವಮೊಗ್ಗಕ್ಕೆ ಅಂತಾ ಚಾಮರಾಜನಗರದಿಂದ ಬಂದಿದ್ದ ಯುವತಿಗೆ ಚಿಕ್ಕಮಗಳೂರಿನ ತರಿಕೆರೆಯಲ್ಲಿ ಎದುರಾಗಿತ್ತು ವಿದಿ! ಭೀಕರ ಘಟನೆಯಲ್ಲಿ ಬೈಕ್ನಲ್ಲಿದ್ದ ಅಪರಿಚಿತರ ಸಾವು!
ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲ್ಲೂಕಿನ ಕಟ್ಟೆಹೊಳೆ ಗೇಟ್ ಬಳಿ ವಿಚಿತ್ರವಾದ ದುರ್ಘಟನೆಯೊಂದು ಸಂಭವಿಸಿದೆ. ಇಬ್ಬರು ಅಪರಿಚಿತ ಯುವಕ, ಯುವತಿಯರು ಬೈಕ್ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ಧಾರೆ. ಈ ಪೈಕಿ ಒಬ್ಬರು ಶಿವಮೊಗ್ಗಕ್ಕೆ ಬರಬೇಕು ಎಂದು ಬಂದವರು, ಇನ್ನೊಬ್ಬರು ಸ್ನೇಹಿತನ ಫ್ರೆಂಡ್ ಎಂಬ ಕಾರಣಕ್ಕೆ ಅವರಿಗೆ ಡ್ರಾಪ್ ಕೊಡಲು ಬಂದವರು. ಇಬ್ಬರು ಸಾಗುತ್ತಿದ್ದಾಗ, ಬೈಕ್ಗೆ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಏನಿದು ಘಟನೆ?
ಚಾಮರಾಜನಗರ ಜಿಲ್ಲೆ ತರೀಕೆರೆ ತಾಲ್ಲೂಕು ಬೇಲೇನಹಳ್ಳಿ ನಿವಾಸಿ ದೀಪಿಕಾ ಎಂಬವರು ತಮ್ಮ ಗಳತಿಯ ಜೊತೆ ಶಿವಮೊಗ್ಗದಲ್ಲಿ ವೃತ್ತಿಪರ ಕೆಲಸಕ್ಕಾಗಿ ಹೊರಟಿದ್ದರು. ಈ ಮಧ್ಯೆ ತರಿಕೆರೆಯಲ್ಲಿ ಕಾರ್ತಿಕ್ ಎಂಬ ಸ್ನೇಹಿತನ ಭೇಟಿಗೆ ಹೊರಟಿದ್ದರು. ತರಿಕೆರೆಯಿಂದ ಬೇಲನಹಳ್ಳಿಯಲ್ಲಿರುವ ನಿವಾಸಕ್ಕೆ, ಅವರನ್ನ ಕರೆದುಕೊಂಡು ಬರಲು ಕಾರ್ತಿಕ್ ತನ್ನ ಸ್ನೇಹಿತ ವಿಶ್ವಾಸ್ನನ್ನ ಸಹ ಕರೆದುಕೊಂಡು ಹೋಗಿದ್ದ. ಹೀಗೆ ಎರಡು ಬೈಕ್ನಲ್ಲಿ ಹೋಗಿದ್ದವರು ಇಬ್ಬರನ್ನ ಕೂರಿಸುಕೊಂಡು ವಾಪಸ್ ಬರುವಾಗ ಆಕ್ಸಿಡೆಂಟ್ ಆಗಿದೆ. ಬೈಕ್ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ವಿಶ್ವಾಸ್ ಹಾಗೂ ದೀಪಿಕಾ ಸಾವನ್ನಪ್ಪಿದ್ದಾರೆ. ಈ ಸಂಬಂಧ ತರಿಕೆರೆ ಪೊಲೀಸ್ ಸ್ಟೆಷನ್ನಲ್ಲಿ ಕಂಪ್ಲೆಂಟ್ ಆಗಿದ್ದು ಕೇಸ್ ದಾಖಲಾಗಿದೆ.
