virat kohli test retire : ಕ್ರಿಕೆಟ್ ಜಗತ್ತಿನಲ್ಲಿ ಕಿಂಗ್ ಎಂದೆ ಖ್ಯಾತಿಗಳಿಸಿರುವ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಶಾಕ್ ಒಂದನ್ನು ನೀಡಿದ್ದಾರೆ. ಅದೇನೆಂದರೆ ವಿರಾಟ್ ಕೊಹ್ಲಿ ಇಂದು ತಮ್ಮ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, ಆ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟರ್ ಎಂದನ್ನು ಶೇರ್ಮಾಡಿದ್ದಾರೆ.
ಈ ಹಿಂದೆ ರೋಹಿತ್ ಶರ್ಮಾ ತಮ್ಮ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೊಷಿಸಿದ್ದರು. ಅದರಿಂದಾಗಿ ಕ್ರೀಡಾಭಿಮಾನಿಗಳು ಬೇಸರಗೊಂಡಿದ್ದರು. ಇದರ ನಡುವೆ ವಿರಾಟ್ ಕೊಹ್ಲಿಯ ನಿವೃತ್ತಿ ನಿರ್ಧಾರ ಎಲ್ಲರಿಗೂ ಶಾಕ್ ನೀಡಿದೆ
2014 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ ಟೆಸ್ಟ್ನಲ್ಲಿ ಇದುವರೆಗೂ 30 ಶತಕಗಳನ್ನು ಸಿಡಿಸಿದ್ದಾರೆ. 254 ಅವರು ಟೆಸ್ಟ್ನಲ್ಲಿ ಗಳಿಸಿದ ಅತ್ಯದಿಕ ರನ್ಗಳಾಗಿವೆ.
virat kohli test retire : ವಿರಾಟ್ ಕೊಹ್ಲಿ ಪೋಸ್ಟ್ನಲ್ಲಿ ಏನಿದೆ.
ಈ ಕುರಿತು ಟೆಸ್ಟ್ನ ಬಟ್ಟೆ ಧರಿಸಿ ಭಾವನಾತ್ಮಕ ಪೋಸ್ಟ್ ಹಾಕಿರುವ ವಿರಾಟ್ ಕೊಹ್ಲಿ ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಜೋಲಾಡುವ ನೀಲಿ ಬಣ್ಣದ ಜೆರ್ಸಿಯನ್ನು ಧರಿಸಿ 14 ವರ್ಷಗಳಾಗಿವೆ ಎಂದು ಬರೆದಿದ್ದಾರೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಸ್ವರೂಪವು ನನ್ನನ್ನು ಇಂತಹ ಪ್ರಯಾಣಕ್ಕೆ ಕರೆದೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಅದು ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು ಮತ್ತು ನನ್ನ ಜೀವನದುದ್ದಕ್ಕೂ ನಾನು ನನ್ನೊಂದಿಗೆ ಸಾಗಲು ಬೇಕಾದ ಪಾಠಗಳನ್ನು ಕಲಿಸಿತು ಎಂದು ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ್ದಾರೆ.
ಬಿಳಿ ಬಟ್ಟೆಯಲ್ಲಿ ಆಡುವುದು ತುಂಬಾ ವೈಯಕ್ತಿಕ ಅನುಭವ. ಶಾಂತವಾದ ಕಠಿಣ ಪರಿಶ್ರಮ, ದೀರ್ಘ ದಿನಗಳು, ಯಾರೂ ನೋಡದ ಆದರೆ ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುವ ಸಣ್ಣ ಕ್ಷಣಗಳು. ನಾನು ಈ ಸ್ವರೂಪದಿಂದ ದೂರ ಸರಿಯುತ್ತಿರುವ ಈ ನಿರ್ಧಾರ ಸುಲಭವಲ್ಲ. ಆದರೆ ಅದು ಸರಿ ಎಂದು ಅನಿಸುತ್ತದೆ ಎಂದು ವಿರಾಟ್ ಬರೆದುಕೊಂಡಿದ್ದಾರೆ.

