agumbe accident : ನವ ದಂಪತಿಗಳು ಕಾರಿನಲ್ಲಿ ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದ್ದು, ಮೂವರು ಗಾಯಗೊಂಡಿರುವ ಘಟನೆ ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಅರೇಕಲ್ ಕ್ರಾಸ್ ಬಳಿ ಘಟನೆ ಸಂಭವಿಸಿದೆ.
ಘಟನೆಯಲ್ಲಿ ನವವಧು ನಾಗರತ್ನ, ಅವರ ತಾಯಿ ಗೀತಾ, ಅಜ್ಜಿ ರಾಧಮ್ಮ ಗಾಯಗೊಂಡವರು
agumbe accident : ಹೇಗಾಯ್ತು ಅಪಘಾತ
ನಾಗರತ್ನ ಮತ್ತು ಸುಬ್ರಹ್ಮಣ್ಯ ಅವರು ಇತ್ತೀಚೆಗೆ ವಿವಾಹವಾಗಿದ್ದರು. ಹಾಗಾಗಿ ಕುಟುಂಬದವರ ಜೊತೆಗೆ ಮಂದಾರ್ತಿಗೆ ತೆರಳುತ್ತಿದ್ದರು. ಆ ವೇಳೆ ಸುಬ್ರಹ್ಮಣ್ಯ ಅವರು ಕಾರು ಚಲಾಯಿಸುತ್ತಿದ್ದು, ಮೇಘರವಳ್ಳಿ ಅರೇಕಲ್ ಕ್ರಾಸ್ ಸಮೀಪ ಎದುರಿನಿಂದ ಬಂದ ರಿಟ್ಜ್ ಕಾರು, ಸುಬ್ರಹ್ಮಣ್ಯರವರ ಕಾರ್ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.ಈ ಘಟನೆ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
