ಗುರುಪುರದ ಚೇತನ್​ ಹಾಗೂ ರಾಗಿಗುಡ್ಡದ ರಾಬಿಯಾ ಕಾಣೆ, ಇವರುಗಳು ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಡಿಶಿವಮೊಗ್ಗ :  ಶಿವಮೊಗ್ಗದ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಕಾಣೆಯಾಗಿದ್ದಾರೆ. ಈ ಹಿನ್ನೆಲೆ  ಪೊಲೀಸರು ಕಾಣೆಯಾದವರ ಸುಳಿವು ಎಲ್ಲಾದರೂ ಕಂಡರೆ ಮಾಹಿತಿ ನೀಡುವಂತೆ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಶಿವಮೊಗ್ಗದಲ್ಲಿ ಮಲೆನಾಡು ಕರಕುಶಲ ಉತ್ಸವ, ಯಾವಾಗ, ಏನೆಲ್ಲಾ ವಿಶೇಷತೆ ಇರಲಿದೆ 

  1.  ಗುರುಪುರದ ಚೇತನ್​ ನಾಪತ್ತೆ 

ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಗುರುಪುರ 1ನೇ ಕ್ರಾಸ್, ನಂಜುಂಡೇಶ್ವರ ದೇವಸ್ಥಾನದ ಹತ್ತಿರ ವಾಸಿ ವೆಂಕಟೇಶ್ ಎಂಬುವವರ ಮಗ 28 ವರ್ಷದ ಚೇತನ್ ಎಂಬುವವರು ಡಿ. 15 ರಿಂದ ಕಾಣೆಯಾಗಿದ್ದಾರೆ. ಅವರು ಮಾನಸಿಕ ಅಸ್ವಸ್ಥರಾಗಿದ್ದು  

ಅವರ ಚಹರೆ 5.6 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತಾನಾಡುತ್ತಾರೆ. ಮನೆಯಿಂದ ಹೋಗುವಾಗ ಸಿಮೆಂಟ್ ಬಣ್ಣದ ಪ್ಯಾಂಟದ, ಕೆಂಪು ಬಣ್ಣದ ಶರ್ಟ್ ಧರಿಸಿರುತ್ತಾರೆ.

  1.  ರಾಗಿ ಗುಡ್ಡದ ರಾಬಿಯಾ ಬಾನು ಕಾಣೆ

Two Reported Missing ಇನ್ನೊಂದು ಪ್ರಕರಣದಲ್ಲಿ ರಾಗಿಗುಡ್ಡ 3 ನೇ ಕ್ರಾಸ್ ಬಲಭಾಗ ವಾಸಿ ಮುಬಾರಕ್ ಎಂಬುವವರ ಪತ್ನಿ 30 ವರ್ಷದ ರಾಬಿಯಾ ಬಾನು ಎಂಬುವವರು ಡಿ. 31 ರಂದು ಮನೆ ಕೆಲಸಕ್ಕೆಂದು ಹೊರಗೆ ಹೋದವರು ಕಾಣೆಯಾಗಿದ್ದಾರೆ.

ಈಕೆಯ ಚಹರೆ 4.5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದು, ಉರ್ದು ಮತ್ತು ಕನ್ನಡ ಭಾಷೆ ಮಾತಾನಾಡುತ್ತಾರೆ. 

ಈ ಇಬ್ಬರು ಕಾಣೆಯಾದವರ ಬಗ್ಗೆ ಸುಳಿವು ದೊರೆತಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂ. 100, ದೂ.ಸಂ.: 08182-261400/ 261418/ 9480803332/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿರುತ್ತಾರೆ.

Two Reported Missing in Shivamogga Rural Limits
Two Reported Missing in Shivamogga Rural Limits

Two Reported Missing in Shivamogga Rural Limits