tunga river : ಮುಳುಗಿದ ಕೊರ್ಪಾಲಯ್ಯನ ಮಂಟಪ | ತುಂಗಾ ನದಿಯಲ್ಲಿ ಎಷ್ಟು ಕ್ಯೂಸೆಕ್ ನೀರು ಹರಿತಿದೆ ಗೊತ್ತಾ
ಜಿಲ್ಲಾಧ್ಯಂತ ಕಳೆದ 2-3 ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಇದರಿಂದಾಗಿ ತುಂಗಾ ಜಲಾಶಯದ ಒಳ ಹರಿವು ಹೆಚ್ಚಾಗಿದೆ.
tunga river : ತುಂಗಾ ಜಲಾಶಯದಲ್ಲಿ ಇಂದು 31 ಸಾವಿರ ಕ್ಯೂಸೆಕ್ ಒಳ ಹರಿವು ಇದ್ದು. ಇಂದು 27 ಸಾವಿರ ಕೂಸೆಕ್ ನೀರನ್ನು ಹೊರಗೆ ಬಿಡಲಾಗಿದೆ. ತುಂಗಾ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಶಿವಮೊಗ್ಗ ನಗರದ ಕೊರ್ಪಾಲಯ್ಯನ ಮಂಟಪ ಮುಕ್ಕಾಲು ಭಾಗ ಮುಳುಗಿದೆ.
ತೀರ್ಥಹಳ್ಳಿಯಲ್ಲಿ ರಾಮಮಂಟಪ ಮುಳುಗಿದರೆ ತುಂಗಾ ಜಲಾಶಯ ಭರ್ತಿಯಾಗಿದೆ ಎಂಬ ಮಾತಿದ್ದರೆ. ಇತ್ತ ಶಿವಮೊಗ್ಗದಲ್ಲಿ ಕೊರ್ಪಾಲಯ್ಯನ ಮಂಟಪ ಮುಳುಗಿತೆಂದರೆ ತುಂಗಾ ನದಿ ಭರ್ತಿಯಾಗಿದೆ ಎಂಬುವುದು ಪ್ರತೀತಿ. ಇದೀಗ ಕೊರ್ಪಾಲಯ್ಯನ ಮಂಟಪ ಮುಕ್ಕಾಲು ಭಾಗ ಮುಳುಗಿದ್ದು, ಇದೀಗ ಅದನ್ನು ನೋಡಲು ಜನರು ಆಗಮಿಸುತ್ತಿದ್ದಾರೆ.
