rapido driver hit woman 16-06-25 : ಮಹಿಳೆಯ ಮೇಲೆ ಹಲ್ಲೆ ಮಾಡಿದ ರ್ಯಾಪಿಡೋ ಚಾಲಕ | ವೈರಲ್ ವಿಡಿಯೋಗೆ ವ್ಯಾಪಕ ಆಕ್ರೋಶ

rapido driver hit woman :  ಬೆಂಗಳೂರಿನ ಜಯನಗರದಲ್ಲಿ ರ್ಯಾಪಿಡೋ ಬೈಕ್​ ಚಾಲಕನೊಬ್ಬ ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾನೆ. ಚಾಲಕ ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು,ಘಟನೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. 

rapido driver hit woman : ಏನಿದು ಘಟನೆ

ಪೊಲೀಸರ ಮಾಹಿತಿಯಂತೆ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಪ್ರಯಾಣಕ್ಕಾಗಿರ್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್​ ಮಾಡಿದ್ದಾರೆ. ಚಾಲಕ ಬಂದು ಮಹಿಳೆಯನ್ನು ಪಿಕಪ್​ ಮಾಡಿದ್ದಾನೆ. ಆಗ ಮಹಿಳೆ ವಾಹನವನ್ನು ಅತಿವೇಗವಾಗಿ ಚಲಾವಣೆ ಮಾಡುತ್ತಿದ್ದೀರಿ ನಿಲ್ಲಿಸಿ ಎಂದು ಚಾಲಕನಿಗೆ ಬೈಕನ್ನು ನಿಲ್ಲಿಸಲು ಸೂಚಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಗ ಮಹಿಳೆ ಚಾಲಕನಿಗೆ ಪ್ರಯಾಣದ ದರವನ್ನು ಹಾಗೂ ಹೆಲ್ಮೆಟ್​ನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ. ಆದ್ದರಿಂದ ಕೋಪಗೊಂಡ ಚಾಲಕ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ರಬಸಕ್ಕೆ ಮಹಿಳೆ ಕೆಳಗೆ ಬಿದ್ದಿದ್ದಾರೆ.ಈ ಹಿನ್ನಲೆ ಚಾಲಕನ ಮೇಲೆ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Leave a Comment