ಮೇಗರವಳ್ಳಿಯ ಆರೇಕಲ್ ಬಳಿ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ನಡೆದಿದೆ.
ಮೇಗರವಳ್ಳಿಯ ಆರೇಕಲ್ನಿಂದ ಶಿವಮೊಗ್ಗದ ಕಡೆ ಸಾಗುತ್ತಿದ್ದ ಕಾರು ಚಾಕಲನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ, ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
heavy rain in shivamogga : ಮನೆಯ ಮೇಲೆ ಬಿದ್ದ ಮರ | ಹಂಚುಗಳು ಪುಡಿಪುಡಿ
ತೀರ್ಥಹಳ್ಳಿಯ ಜೂನಿಯರ್ ಕಾಲೇಜ್ ಬಳಿ ಮನೆಯ ಮೇಲೆ ಹಲಸಿನ ಮರ ಬಿದ್ದಿದ್ದು ಮನೆಯ ಹಂಚುಗಳು ಪುಡಿಯಾಗಿದೆ.

ತೀರ್ಥಹಳ್ಳಿ ಸೇರಿದಂತೆ ಇತರೆ ಭಾಗಗಳಲ್ಲಿ ಕಳೆದ ಎರಡು ಮೂರಿದಿನಗಳಿಂದ ವಿಪರೀತ ಮಳೆಯಾಗಿದೆ. ಈ ಹಿನ್ನಲೆ ಮಳೆಯಿಂದಾಗಿ ವಿಪರೀತ ಗಾಳಿಯೂ ಬೀಸಿದ್ದು. ಜೂನಿಯರ್ ಕಾಲೇಜು ಹಿಂಭಾಗದಲ್ಲಿರುವ ಮಾಲಿನಿ ಎಂಬುವರ ಮನೆಯ ಮೇಲೆ ಹಲಸಿನ ಮರ ಬಿದ್ದು ಹಂಚುಗಳು ಪುಡಿಯಾಗಿವೆ.
