Sagara town police news today 16 / ರಸ್ತೆ ಬದಿ ಸಿಕ್ಕ ಶವ​/ ಪತಿ ವಿರುದ್ಧವೇ ದೂರು / ಸಾಗರ ಪೊಲೀಸರಿಂದ ಗ್ರಾಮ ಲೆಕ್ಕಿಗ ಸೇರಿ ಮೂವರ ಬಂಧನ ! ಏನಿದು

Malenadu Today

Sagara town police news today 16 / ಸಾಗರ ಟೌನ್​ನಲ್ಲಿ ನಿನ್ನೆ ಬೆಳಗ್ಗೆ ಪತ್ತೆಯಾಗಿದ್ದ ವ್ಯಕ್ತಿಯ ಶವದ ವಿಚಾರದಲ್ಲಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಷ್ಟೆ ಅಲ್ಲದೆ ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.  

ನಿನ್ನೆ ವಿಜಯನನಗರ ಬಡಾವಣೆಯ ಸಮೀಪ ಸಿಕ್ಕ ಮೃತದೇಹ  ಶಿವಪ್ಪನಾಯಕ ನಗರದ ಹೊಸ ಬಡಾವಣೆಯ ನಿವಾಸಿ, 44 ವರ್ಷದ ಸದಾನಂದ ಅವರದ್ದು ಎಂಬುದು ಗೊತ್ತಾಗಿತ್ತು. ಅವರ ಸಾವಿನ ಬಗ್ಗೆ ಅನುಮಾನಗೊಂಡಿದ್ದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರದಂದೇ ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಗ್ರಾಮ ಲೆಕ್ಕಿಗ ಕೂಡ ಸೇರಿದ್ದಾರೆ.  ಸಾಗರ ನಗರ ಠಾಣೆ ಪೊಲೀಸರು ಈ  ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

Sagara town police news today Sagara town police news sagara town police news
sagara town police news

ನಗರದ ವಿಜಯನಗರ ಬಡಾವಣೆಯಲ್ಲಿರುವ ಈಜುಕೊಳದ ಬಳಿ ನಿನ್ನೆ ಭಾನುವಾರ ಬೆಳಿಗ್ಗೆ ಸದಾನಂದ ಅವರ ಮೃತದೇಹ ಪತ್ತೆಯಾಗಿತ್ತು.  ಈ ಘಟನೆ ಸಂಬಂಧ ಸದಾನಂದರವರ ಅಕ್ಕನ ಮಗಳು ರಶ್ಮಿ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ಸದಾನಂದ ಅವರ ಸಾವಿಗೆ ತಮ್ಮ ಪತಿ ವೆಂಕಟೇಶ್ ಆಚಾರಿ ಹಾಗೂ ಇತರೆ ವ್ಯಕ್ತಿಗಳು ಕಾರಣ ಎಂದು ಆರೋಪಿಸಿದ್ದರು. 

ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಗ್ರಾಮ ಲೆಕ್ಕಿಗ ವೆಂಕಟೇಶ್ ಆಚಾರಿ,  ರಿಯಲ್ ಎಸ್ಟೇಟ್ ಉದ್ಯಮಿಗಳಾದ ರವೀಂದ್ರ ಕಾಮತ್ ಮತ್ತು ಪ್ರದೀಪ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ  ರಶ್ಮಿ ಅವರು ತಮ್ಮ ಪತಿಯ ಮನೆಯನ್ನು ಬಿಟ್ಟು ಸದಾನಂದ ಅವರ ಮನೆಯಲ್ಲಿ ವಾಸವಿದ್ದರು.  ಇದೇ ಕಾರಣಕ್ಕೆ ಆರೋಪಿಗಳು ಸದಾನಂದ ಅವರನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಅನುಮಾನಿಸಲಾಗಿದೆ.  ಈ ಕುರಿತು ಸಾಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

More Local Crime News from Shivamogga: Read More

Karnataka Police Department Website: Official Website

Indian Penal Code (IPC) Sections on Murder: Explore IPC

More Local Crime News from sagara : Read More

Sagara town police news today 16

Share This Article