Tunga Dam Levels Rise Relief Farmers 09 ತುಂಗಾ ಜಲಾಶಯ ಭರ್ತಿ: ಶಿವಮೊಗ್ಗಕ್ಕೆ ಹರಿದುಬಂದ ಸಮೃದ್ಧಿ, ರೈತರಲ್ಲಿ ಸಂತಸ!
ಶಿವಮೊಗ್ಗ, ಜುಲೈ 9, 2025: ಶಿವಮೊಗ್ಗದಲ್ಲಿ ಮಳೆ ಕಡಿಮೆಯಾಗಿದೆ. ಆದಾಗಿಯೂ ತುಂಗಾ ಜಲಾಶಯದಿಂದ ನೀರನ್ನು ನಿರಂತರವಾಗಿ ಬಿಡಲಾಗುತ್ತಿದೆ. ಜಲಾಶಯದ ಒಳಹರಿವು ಕಡಿಮೆ ಇದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜಲಾಶಯದ ನೀರಿನ ಮಟ್ಟದ ವಿವರ ಹೀಗಿದೆ.

ತುಂಗಾ ಡ್ಯಾಂ ನೀರಿನ ಮಟ್ಟ ಜುಲೈ 9, 2025
ಜಲಾಶಯದ ಗರಿಷ್ಠ ಮಟ್ಟ (FRL): 588.24 ಮೀಟರ್

ಇಂದಿನ ನೀರಿನ ಮಟ್ಟ: 588.05 ಮೀಟರ್
ಒಟ್ಟು ಸಂಗ್ರಹ ಸಾಮರ್ಥ್ಯ (Gross Capacity): 3.128 ಟಿಎಂಸಿ
ಜಲಾಶಯದಲ್ಲಿ ಪ್ರಸ್ತುತ ಸಂಗ್ರಹವಿರುವ ನೀರಿನ ಪ್ರಮಾಣ: 2.299 ಟಿಎಂಸಿ
ಒಳಹರಿವು 28013.0 ಕ್ಯೂಸೆಕ್ಸ್
ಹೊರಹರಿವು 26867.0 ಕ್ಯೂಸೆಕ್ಸ್ ‘
ಕಳೆದ ವರ್ಷ ಇದೇ ದಿನಾಂಕದಂದು (ಜುಲೈ 9, 2024) ತುಂಗಾ ಜಲಾಶಯವು ತನ್ನ ಗರಿಷ್ಠ ಮಟ್ಟ 588.24 ಮೀಟರ್‌ಗೆ ತಲುಪಿತ್ತು. ಆ ಸಮಯದಲ್ಲಿ ಒಳಹರಿವು 17668.0 ಕ್ಯೂಸೆಕ್ಸ್ ಇತ್ತು.