Vande Bharat Train Shivamogga ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು: ಜನವರಿಯಿಂದ 4 ಪ್ರಮುಖ ನಗರಗಳಿಗೆ ಸಂಪರ್ಕ

ಹಂಚಿಕೊಳ್ಳಿ
WhatsApp Facebook X Telegram
Game Changer Shivamogga Vande Bharat Train Shivamogga
Vande Bharat Train Shivamogga

Vande Bharat Train Shivamogga ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು: ಜನವರಿಯಿಂದ 4 ಪ್ರಮುಖ ನಗರಗಳಿಗೆ ಸಂಪರ್ಕ

ಶಿವಮೊಗ್ಗ, ಜುಲೈ 9, 2025: ಮುಂದಿನ ವರ್ಷ ಜನವರಿ ತಿಂಗಳಿನಿಂದ ಶಿವಮೊಗ್ಗದಿಂದ ದೇಶದ ಪ್ರಮುಖ ನಗರಗಳಿಗೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ವಿಭಾಗ ಮಟ್ಟದ ಪ್ರಬುದ್ಧರ ಸಭೆಯಲ್ಲಿ ಅವರು ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Vande Bharat Train Shivamogga ಕೋಟೆಗಂಗೂರಿನ ರೈಲ್ವೆ ಕೋಚಿಂಗ್ ಡಿಪೋ ಜನವರಿ ತಿಂಗಳಿಗೂ ಮುನ್ನವೇ ಉದ್ಘಾಟನೆಗೊಳ್ಳಲಿದೆ. ಇದರ ನಂತರವೇ ಶಿವಮೊಗ್ಗದಿಂದ ವಂದೇ ಭಾರತ್ ರೈಲುಗಳ ಸಂಚಾರ ಪ್ರಾರಂಭವಾಗಲಿದೆ ಎಂದು ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ. ಈ ಹೊಸ ರೈಲು ಸಂಪರ್ಕದಿಂದ ಶಿವಮೊಗ್ಗವು ಬೆಂಗಳೂರು, ಕೇರಳದ ಎರ್ನಾಕುಲಂ, ಬಿಹಾರದ ಭಗಲ್ಪುರ್ ಮತ್ತು ಚಂಡೀಗಢದೊಂದಿಗೆ ನೇರ ಸಂಪರ್ಕವನ್ನು ಪಡೆಯಲಿದೆ. ಇದು ಶಿವಮೊಗ್ಗದ ಜನರಿಗೆ ಅನುಕೂಲಕರ ಪ್ರಯಾಣವನ್ನು ಒದಗಿಸಲಿದೆ.

ರೈಲ್ವೆ ಯೋಜನೆಗಳ ಪ್ರಗತಿಯ ಕುರಿತು ಮಾತನಾಡಿದ ರಾಘವೇಂದ್ರ, ತಾಳಗುಪ್ಪ-ಶಿರಸಿ ರೈಲ್ವೆ ಮಾರ್ಗದ ಸರ್ವೇ ಕಾರ್ಯ ಮುಕ್ತಾಯಗೊಂಡಿದೆ. ಆದರೆ, ತಾಳಗುಪ್ಪ-ಹೊನ್ನಾವರ ರೈಲ್ವೆ ಯೋಜನೆಗೆ            ಶೇ.73ರಷ್ಟು ಅರಣ್ಯ ಪ್ರದೇಶ ಬರುವುದರಿಂದ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಬೀರೂರು-ಶಿವಮೊಗ್ಗ ನಡುವಿನ ಡಬ್ಲಿಂಗ್ ಕಾರ್ಯಕ್ಕೆ ಈಗಾಗಲೇ ಹಣ ಬಿಡುಗಡೆಯಾಗಿದೆ.

ಇದರ ಜೊತೆಗೆ, ತಾಳಗುಪ್ಪದಿಂದ ಹುಬ್ಬಳ್ಳಿಗೆ 150 ಕಿ.ಮೀ ದೂರಕ್ಕೆ ರೈಲು ವ್ಯವಸ್ಥೆಯ ಸರ್ವೇ ಕೂಡ ನಡೆದಿದ್ದು, ಈ ಯೋಜನೆಗಳಿಗೆ ಪರ್ಯಾಯ ಜಮೀನು ಹೊಂದಿಸಬೇಕಿದೆ. ಭದ್ರಾವತಿ ಮತ್ತು ಚಿಕ್ಕಜಾಜೂರು ನಡುವೆ ಹೊಸ ರೈಲ್ವೆ ಸಂಪರ್ಕ ಏರ್ಪಡಲಿದೆ ಎಂದೂ ಅವರು ಪ್ರಸ್ತಾಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛಾಶಕ್ತಿಯಿಂದ ಇಂತಹ ಕ್ರಾಂತಿಕಾರಕ ಅಭಿವೃದ್ಧಿಗಳು ದೇಶಾದ್ಯಂತ ಸಾಧ್ಯವಾಗುತ್ತಿವೆ ಎಂದು ರಾಘವೇಂದ್ರ ಹೇಳಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor