Trivikram bigg boss | ಬಿಗ್‌ ಬಾಸ್‌ ಸೀಸನ್‌ 11 | ಇವರೇನಾ ವಿನ್ನರ್‌ !? | ಏನಾಗ್ತಿದೆ!?

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 24, 2025 ‌‌ 

ಬಿಗ್ ಬಾಸ್ ಕನ್ನಡ 11 ಫೈನಲ್‌ ಹಂತಕ್ಕೆ ಬಂದಿದೆ. ಕೊನೆವಾರದಲ್ಲಿ ಲೀಡಿಂಗ್‌ನಲ್ಲಿರೋ ಕಂಟೆಸ್ಟೆಂಟ್‌ ಬಗ್ಗೆ ಸಾಕಷ್ಟು ಕುತೂಹಲ ಮೂಡಿದ್ದು, ಇದರ ನಡುವೆ ತ್ರಿವಿಕ್ರಮ್‌ ಹೆಸರು ಸಖತ್‌ ವೈರಲ್‌ ಆಗುತ್ತಿದೆ. ಮೇಲಾಗಿ ಅವರೆ ಈ ಸಲದ ಬಿಗ್‌ಬಾಸ್‌ ವಿನ್ನರ್‌ ಎಂಬ ಮಾತುಗಳು ಸುದ್ದಿ ಚಾನಲ್‌ಗಳ ಅಂತರಾಳದಿಂದ ಹೊರಬೀಳುತ್ತಿದೆ. ಅಧಿಕೃತ ನ್ಯೂಸ್‌ ಇಲ್ಲದಿದ್ದರೂ, ನ್ಯೂಸ್‌ ಮಂದಿಯ ಮಾತುಗಳಲ್ಲಿ, ಈ ಸಲ ಅವರೇ ವಿನ್‌ ಆಗೋದು ಎಂಬಂತಹ ಸೋರ್ಸ್‌ ಸುದ್ದಿಗಳು ಹರಿದಾಡುತ್ತಿದೆ. ಇನ್ನೊಂದೆಡೆ ಕೆಲವರು ಈಗಾಗಲೇ ವಿಕಿಪಿಡಿಯಾ ಸೇರಿದಂತೆ ಕೆಲವು ಸೋಶಿಯಲ್‌ ಮೀಡಿಯಾ, ಮಾಹಿತಿ ವೆಬ್‌ಸೈಟ್‌ಗಳಲ್ಲಿ ತ್ರಿವಿಕ್ರಮ್‌ರನ್ನ ಈಗಾಗಲೇ ವಿನ್ನರ್‌ ಎಂದು ಘೋಷಿಸಿದ್ದಾರೆ. 

trivikram bigg boss

ಅಂದ ಹಾಗೆ ಬಿಗ್ ಬಾಸ್ ಕನ್ನಡ ಸೀಸನ್‌ 11 ರ ಗ್ರ್ಯಾಂಡ್ ಫಿನಾಲೆ ನಾಡಿದ್ದು ಅಂದರೆ ಗಣರಾಜ್ಯೋತ್ಸವದ ದಿನ ಜನವರಿ 26, 2025 ರಂದು ನಡೆಯಲಿದೆ. ಅವತ್ತು ಹಾರುವ ಹಕ್ಕಿಯ ರೆಕ್ಕೆಯ ಟ್ರೋಫಿಯನ್ನು ಹಿಡಿದು ಯಾರು ಆಗಸಕ್ಕೆ ಹಾರುತ್ತಾರೆ ಎಂದು ನೋಡಬೇಕಿದೆ. ಕೊನೆಯ ಹಾಗೂ ಫಿನಾಲೆ ವೀಕ್‌ನಲ್ಲಿ ಉಗ್ರಂ ಮಂಜು, ರಜತ್‌ , ಮೋಕ್ಷಿತ , ಭವ್ಯ, ಹಾಗೂ ಹನುಮಂತು ಮತ್ತು ತ್ರಿವಿಕ್ರಮ್‌ ಕೊನೆ ಕ್ಷಣದ ಟಾಸ್ಕ್‌ಗಳನ್ನು ಪೂರೈಸುತ್ತಿದ್ದಾರೆ. ಈ ಪೈಕಿ ನಾಳೆ ಯಾರಾದರೂ ಎಲಿಮೇಷನ್‌ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರ ಹೊರತಾಗಿ ಈ ಸಲ ಬಿಗ್‌ ಬಾಸ್‌ ಹೊಸನನ್ನೇನೋ ಪ್ಲಾನ್‌ ಮಾಡಿದೆ ಎಂದು ಸಹ ಹೇಳಲಾಗುತ್ತಿದೆ.ಇವೆಲ್ಲದರ ನಡುವೆ ಕಿಚ್ಚ ಸುದೀಪ್‌ ನಡೆಸಿಕೊಡಲಿರುವ ಕೊನೆಯ ಸೀಸನ್‌ನ ಕೊನೆಯ ಎಪಿಸೋಡ್‌ ಬೇರೆಯದ್ದೆ ಆದ ರೆಂಜ್‌ನಲ್ಲಿ ಇರಲಿದೆ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.  

SUMMARY |  trivikram bigg boss

KEY WORDS | trivikram bigg boss

Share This Article