SHIVAMOGGA | Dec 27, 2023 | ಅಜ್ಜನೊಂದಿಗೆ ಬಸ್ ನಲ್ಲಿ ತರಿಕೆರೆಗೆ ಹೊರಟಿದ್ದ ಮಗುವೊಂದು ತಪ್ಪಿಸಿಕೊಂಡ ಘಟನೆ ಸುಖಾಂತ್ಯ ಕಂಡಿದೆ. ಚಿಕ್ಕಮಗಳೂರು ಜಿಲ್ಲೆ ತರಿಕರೆ ತಾಲ್ಲೂಕು ತಣಿಗೇಬೈಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವೃದ್ದರೊಬ್ಬರು ತಮ್ಮ ಮೊಮ್ಮಗನನ್ನ ಕರೆದುಕೊಂಡು ತರೀಕೆರೆ ಗೆ ಹೊರಟಿದ್ದರು. ಬಸ್ ಹತ್ತಿ ಕುಳಿತಿದ್ದ ವೃದ್ಧರು ಅಲ್ಲಿ ನಿದ್ರೆಗೆ ಜಾರಿದ್ದಾರೆ. ಮೂರು ವರ್ಷದ ಮೊಮ್ಮಗ ಬಸ್ನಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ. ಈ ನಡುವೆ ಬಸ್ ನಿಲ್ದಾಣವೊಂದರಲ್ಲಿ ಬಸ್ ನಿಂತಿದೆ. ಆಗ ಮೊಮ್ಮಗ ಬಸ್ ನಿಂದ ಇಳಿದಿದ್ದಾನೆ. ಇದು ಬಸ್ನಲ್ಲಿರುವವರಿಗೆ ಗೊತ್ತಾಗಲಿಲ್ಲ.
READ : ಐಶಾರಾಮಿ ಕಾರಿನಲ್ಲಿ ಬಂದು ದನ ಕದ್ದೊಯ್ಯುತ್ತಿದ್ದಾರೆ ಎಚ್ಚರ! ತೀರ್ಥಹಳ್ಳಿ ಘಟನೆ ಕ್ಯಾಮರಾದಲ್ಲಿ ಸೆರೆ
ಈ ಮಧ್ಯೆ ಅದೇ ವೇಳೆ ಅಲ್ಲಿಗೆ ತರೀಕೆರೆಗೆ ಹೋಗುವ ಇನ್ನೊಂದು ಬಸ್ ಅಲ್ಲಿಗೆ ಬಂದಿದೆ. ಆ ಬಸ್ನ್ನ ಹತ್ತಿದ ಬಾಲಕ ಬಸ್ನಲ್ಲಿ ತನ್ನ ಅಜ್ಜನನ್ನ ಹುಡುಕಾಡಿ ಸಿಗದಿದ್ದಾಗ ಅಳಲು ಆರಂಭಿಸಿದ್ದಾನೆ. ಇದರಿಂದ ಬಸ್ ನಲ್ಲಿದ್ದವರೆಲ್ಲಾ ಕೆಲಕಾಲ ಗಾಬರಿಯಾದರು. ಬಳಿಕ ಸ್ಥಳೀಯ ಪೊಲೀಸ್ ಸ್ಟೇಷನ್ಗೆ ಮಗುವನ್ನ ಒಪ್ಪಿಸಿದ್ದಾರೆ, ಅಲ್ಲಿಂದ ಸೋಶಿಯಲ್ ಮೀಡಿಯಾಗಳ ಮೂಲಕ ಮಗುವಿನ ಫೋಟೋ ಮಾಹಿತಿಯನ್ನು ಹಂಚಿಕೊಂಡ ನಂತರ ಪೋಷಕರಿಗೆ ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದಾರೆ. ಪ್ರಕರಣ ಸುಖಾಂತ್ಯ ಕಂಡಿದೆ.
