thirthahalli : ಬೆಜ್ಜವಳ್ಳಿ ಬಸ್ಟ್ಯಾಂಡ್​ನಲ್ಲಿ  ಬೈಕ್​ ನಿಲ್ಲಿಸಿ ಮಲಗಿದ್ದ ವ್ಯಕ್ತಿಗೆ ಬೆಳಗೆದ್ದು ನೋಡಿದಾಗ ಕಾದಿತ್ತು ಶಾಕ್​.!

thirthahalli :  ​ಪೆಟ್ರೋಲ್​ ಖಾಲಿಯಾಯ್ತು ಎಂದು ನಿಲ್ಲಿಸಿದ್ದ ಬೈಕ್​​ನ್ನು ಕಳ್ಳರು ಕದ್ದಿರುವ ಘಟನೆ​ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಬುಧವಾರ ನಡೆದಿದೆ. 

thirthahalli : ಏನಿದು ಘಟನೆ

ದಿಲೀಪ್​ ಕುಮಾರ್ ಕುಂದಾಪುರ ಹಂಚಿನ ಕಾರ್ಖಾನೆಯಲ್ಲಿ ಕೆಲಸಮಾಡಿಕೊಂಡಿದ್ದರು. ಯಾವುದೋ ಕೆಲಸದ ಸಲುವಾಗಿ ಶಿವಮೊಗ್ಗಕ್ಕೆ ಹೋಗಬೇಕಾಗಿದ್ದರಿಂದ ಹೊಸಂಗಡಿ ಮಾರ್ಗವಾಗಿ ತೀರ್ಥಹಳ್ಳಿಗೆ ಬಂದು ಅಲ್ಲಿಂದ ತಮ್ಮ ಬೈಕ್​ನಲ್ಲಿ ಶಿವಮೊಗ್ಗಕ್ಕೆ ಹೋಗುತ್ತಿದ್ದರು. ಆ ವೇಳೆ ಬೆಜ್ಜವಳ್ಳಿಯಲ್ಲಿ ದಿಲೀಪ್​ ರವರ ಬೈಕ್​ನ​ ಪೆಟ್ರೋಲ್​ ಖಾಲಿಯಾಗಿದೆ. ಆಗ ರಾತ್ರಿ 9:30 ಆಗಿದ್ದರಿಂದ ಬೆಳಿಗ್ಗೆ ಹೋದರೆ ಆಯಿತೆಂದು ದಿಲೀಪ್ ತಮ್ಮ ಬೈಕ್​ನ್ನು ಬೆಜ್ಜವಳ್ಳಿ ಸರ್ಕಲ್​ನಲ್ಲಿ ನಿಲ್ಲಿಸಿ ಬಸ್ಟ್ಯಾಂಡ್​ನಲ್ಲಿ ಮಲಗಿದ್ದಾರೆ. ಆದರೆ ಬೆಳಿಗ್ಗೆ ಎದ್ದು ನೋಡಿದಾಗ ಅವರಿಗೆ ಶಾಕ್​ ಎದುರಾಗಿದ್ದು, ಅವರ ಬೈಕ್​ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಹಿನ್ನಲೆ ದಿಲೀಪ್​ ಮಾಳೂರು ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು