snake rescue : ದಿಂಬಿನ ಅಡಿ ಬೆಚ್ಚಗೆ ಅಡಗಿ ಕುಳಿತಿದ್ದ ನಾಗರಹಾವು | ವಿಡಿಯೋ ವೈರಲ್
ಮಳೆಗಾಲದ ಸಮಯದಲ್ಲಿ ಹಾವುಗಳು ಬೆಚ್ಚಗಿನ ಪ್ರದೇಶವನ್ನು ಹುಡುಕುವುದು ಸಾಮಾನ್ಯ. ಕೆಲವೊಮ್ಮೆ ನಾವು ಮನೆಯ ಬಾಗಿಲು ತೆರೆದಿಟ್ಟಾಗ ಮನೆಯ ಒಳಗೆ ಪ್ರವೇಶಿಸಿ ಶೂ ಸೇರಿದಂತೆ ಇತರೆ ವಸ್ತುಗಳ ಒಳಗೆ ಬೆಚ್ಚಗೆ ಅಡಗಿ ಕುಳಿತಿರುತ್ತವೆ.ಅದರಂತೆ ನಾಗಪುರದ ವ್ಯಕ್ತಿಯೊಬ್ಬರ ಮನೆಯಲ್ಲಿ ನಾಗರ ಹಾವೊಂದು ಬೆಡ್ನ ದಿಂಬಿನ ಕೆಳಗೆ ಅವಿತು ಕುಳಿತಿದೆ. ಈ ಭಯಾನಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
snake rescue : ದಿಂಬಿನ ಕೆಳಗೆ ಅವಿತು ಕುಳಿತ್ತಿದ್ದ ನಾಗರ ಹಾವನ್ನು ಕಂಡು ಗಾಬರಿಯಾದ ಮನೆಯವರು ತಕ್ಷಣ ಉರಗರಕ್ಷಕರಿಗೆ ಫೊನ್ ಮಾಡಿದ್ದಾರೆ. ಉರಗ ರಕ್ಷಕರು ತಕ್ಷಣ ಸ್ಥಳಕ್ಕೆ ಧಾವಿಸಿ ಹಾವನ್ನು ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಮಳೆಗಾಲದಲ್ಲಿ ಹಾವುಗಳು ಬೆಚ್ಚಗಿನ ಪ್ರದೇಶ ಹುಡುಕುವುದು ಸಾಮಾನ್ಯ. ಈ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ನಾವು ಕಿಟಕಿ ಬಾಗಿಲುಗಳನ್ನು ಮುಚ್ಚಿಡಬೇಕು. ಹಾಗೆಯೇ ನಮ್ಮ ಮನೆಯ ಸುತ್ತಮುತ್ತಲಿನಲ್ಲಿ ಹೂವಿನ ಪಾಟ್ ಸೇರಿದಂತೆ ಇನ್ನತರೇ ಮುಚ್ಚಿಗೆಯ ವಸ್ತುಗಳನ್ನು ಇಡಬಾರದು. ಇದರಿಂದ ಹಾವುಗಳು ಮನೆಯೊಳಗೆ ಪ್ರವೇಶಿಸುದನ್ನು ತಡೆಯಬಹುದು ಎಂಬುವುದು ಉರಗ ತಜ್ಞರ ಅಭಿಪ್ರಾಯ.

#WATCH | Viral Video Shows Poisonous Snake Under Pillow In Nagpur#Maharashtra #nagpur #snake #maharashtranews pic.twitter.com/cMVHDdtjTM
— Free Press Journal (@fpjindia) May 30, 2025