thirthahalli car accident in bejjavalli / ತೀರ್ಥಹಳ್ಳಿ ರಸ್ತೆಯಲ್ಲಿ ಗುಂಡಿಗೆ ಬಿದ್ದು ತೇಲುತ್ತಿರುವ ಕಾರು! ಎಂತಾಯ್ತು!

Malenadu Today

thirthahalli car accident in bejjavalli

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಕೆರೆಯೊಂದರಲ್ಲಿ ಮುಳುಗಿದ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿದೆ. ಇವತ್ತು ಬೆಳಗಿನ ಜಾವ ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಕಾರು ಇಲ್ಲಿನ ಕೆರೆಯಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಮಲೆನಾಡು ಟುಡೆ ಈ ಸಂಬಂಧ ಪೊಲೀಸರನ್ನು ಮಾಹಿತಿ ಸಂಪರ್ಕಿಸುವ ಪ್ರಯತ್ನ ಮಾಡಿದೆಯಾದರೂ ಹೆಚ್ಚಿನ ಮಾಹಿತಿ ಇನ್ನಷ್ಟ ಲಭ್ಯವಾಗಬೇಕಿದೆ.

ಬಾಳಗಾರು ಬಳಿಯಲ್ಲಿ, ರಸ್ತೆಯ ಪಕ್ಕದಲ್ಲಿಯೇ ಸಣ್ಣ ಗುಂಡಿಯಂತಿರುವ ಕೆರೆಯಲ್ಲಿ ಕಾರು ಬಿದ್ದಿದೆ. ಜನರು ಇದನ್ನು ಗಮನಿಸಿ, ಕಾರಿನ ಒಳಗಡೆ ಯಾರಾದರೂ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇವತ್ತು ಬೆಳಗಿನ ಜಾವ ಟರ್ನಿಂಗ್​ನಲ್ಲಿ ಗೊತ್ತಾಗದೇ, ಚಾಲಕನ ನಿಯಂತ್ರಣ ತಪ್ಪಿಗೆ ಕಾರು ಕೆರೆಗೆ ಉರುಳಿರಬಹುದು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಕ್ರೈಂ ಸೀನ್​ಗಳ ಕಥೆಗಳನ್ನು ಹೇಳುತ್ತಿದ್ದು, ಪೊಲೀಸರಿಂದಲೇ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಬೇಕಿದೆ. 

thirthahalli car accident in bejjavalli
thirthahalli car accident in bejjavalli

Share This Article