ಚಪ್ಪಲಿ ಜಾಗ್ರತೆ! ಬೆಳಗಿನ ಜಾವ ಬರುತ್ತಾನೆ ಮೆಟ್ಟು ಕಳ್ಳ! ಏನಿದು ಶಿವಮೊಗ್ಗದಲ್ಲಿ!

A thief was caught on CCTV camera stealing slippers from Gopalagowda layout in Shivamogga. Shivamogga City News, Shivamogga District,

ಚಪ್ಪಲಿ ಜಾಗ್ರತೆ! ಬೆಳಗಿನ ಜಾವ ಬರುತ್ತಾನೆ  ಮೆಟ್ಟು ಕಳ್ಳ!  ಏನಿದು ಶಿವಮೊಗ್ಗದಲ್ಲಿ!

SHIVAMOGGA NEWS / ONLINE / Malenadu today/ Nov 21, 2023 NEWS KANNADA

Shivamogga |  Malnenadutoday.com | ಮನೆಗೆ ನುಗ್ಗಿ ಚಿನ್ನ ಕದ್ದರೆ ಒಂದು ಮಾತು, ಅಡಿಕೆ ಕದ್ದರೇ ಅದು ದೊಡ್ಡ ಮಾತು! ಆದರೆ ಮನೆ ಮುಂದಿನ ಚಪ್ಪಲಿ ಕದ್ದರೇ ಇದೆಂತಾ ಕಳ್ಳತನ ಎನ್ನಬಹುದು..!

ಹೀಗೊಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮತ್ತು ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗ ನಗರದ  ಗೋಪಾಲಗೌಡ ಬಡಾವಣೆಯಲ್ಲಿ ವ್ಯಕ್ತಿಯೊಬ್ಬ ಮನೆಯೊಂದರ ಮುಂದಿದ್ದ ಚಪ್ಪಲಿಗಳನ್ನ ಕದ್ದೊಯ್ದಿದ್ದಾನೆ. 

READ :ತೀರ್ಥಹಳ್ಳಿಯಲ್ಲಿ ಒಂದೇ ದಿನ 2 ಘಟನೆ | ಕುಪ್ಪಳ್ಳಿಯ ಹತ್ತಿರ ಮರಕ್ಕೆ ಕಾರು ಡಿಕ್ಕಿ

ಮನೆಯ ಕಾಂಪೌಂಡ್ ಒಳಗೆ ಬಂದ ಕಳ್ಳ, ಜಿತೇಂದ್ರ ಗೌಡ ಎಂಬವರ ಮನೆಯ ಮುಂದಿದ್ದ ಚಪ್ಪಲಿಗಳನ್ನು ಶೂಗಳನ್ನು ಕದ್ದೊಯ್ದಿದ್ದಾನೆ.  ಬೆಳಗಿನ ಜಾವ ಸುಮಾರು 3 ಗಂಟೆಯ ಹೊತ್ತಿಗೆ ಬಿಳಿ ಜರ್ಕಿನ್ ಹಾಕಿಕೊಂಡ ವ್ಯಕ್ತಿಯೋರ್ವ ಈ ಕೃತ್ಯವೆಸಗಿದ್ದಾನೆ

READ :ಬಿರಿಯಾನಿ ತಿಂದು 17 ಮಂದಿ ಅಸ್ವಸ್ಥ! ಏನಿದು ಘಟನೆ! ಹೇಗಾಯ್ತು! ವಿವರ ಇಲ್ಲಿದೆ

ಇನ್ನೂ ವಿಶೇಷ ಅಂದರೆ, ಈ ಭಾಗದಲ್ಲಿ  ಚಪ್ಪಲಿಗಳನ್ನು ಕಾಯುವುದೇ ಇಲ್ಲಿನ ನಿವಾಸಿಗಳಿಗೆ ದೊಡ್ಡ ಸವಾಲಾಗಿದೆಯಂತೆ. ಕಾಸ್ಟ್ಲಿ ಚಪ್ಪಲಿಗಳು, ಶೂಗಳನ್ನ ಕಳ್ಳರು ಕದ್ದೊಯ್ಯುತ್ತಿದ್ದು,ಅಂತಹ ಕಳ್ಳರನ್ನು ಪತ್ತೆ ಮಾಡುವುದು ಸಹ ಕಷ್ಟವಾಗಿ ಪರಿಣಮಿಸಿದೆ.