MALENADUTODAY.COM |SHIVAMOGGA| #KANNADANEWSWEB
ಶಿವಮೊ್ಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಅಶೋಕ್ ನಾಯ್ಕ್ರ ವಿರುದ್ಧ ನಿನ್ನೆ ಚೆನ್ನ ಮುಂಬಾಪುರದ ಜನರು ಬೀದಿಗಿಳಿದಿದ್ದರು. ಅಷ್ಟೆಅಲ್ಲದೆ ಹೆದ್ಧಾರಿಯ ಮಧ್ಯೆ ಕುಳಿತು ರಸ್ತೆ ಬಂದ್ ಮಾಡಿ ಪ್ರತಿಭಟನೆಗಿಳಿದಿದ್ದರು. ಅವರ ಆಕ್ರೋಶಕ್ಕೆ ಕಾರಣವಾಗಿದ್ದು ಚೆನ್ನಮುಂಬಾಪುರದ ಕೆರೆಯ ದಡದಲ್ಲಿ ಅನಾದಿ ಕಾಲದಿಂದಲೂ ಪೂಜಿಸಿಕೊಂಡು ಬಂದಿದ್ದ ಬೂತಪ್ಪನ ಗುಡಿ.
ನಡೆದಿದ್ದೇನು?
ಗ್ರಾಮಸ್ಥರು ಆರೋಪಿಸುವ ಪ್ರಕಾರ, ಚೆನ್ನಮುಂಬಾಪುರದ ಗ್ರಾಮಸ್ಥರು ಕೆರೆಯ ದಡದಲ್ಲಿದ್ದ ಬೂತಪ್ಪನ ಕಲ್ಲಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಅಲ್ಲಿರುವ ಮರವನ್ನು ದೇವರ ಮರವೆಂದು ನಂಬಿದ್ದ ಜನರು, ಬೂತಪ್ಪನ ಆರಾಧನೆಯನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದರು. ಆದರೆ, ಈ ಮಧ್ಯೆ ದಿಡೀರ್ ಎಂಬಂತೆ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರು ತಮ್ಮ ಪ್ರಭಾವ ಬಳಸಿ ಬೂತಪ್ಪ ದೇವರನ್ನು ಅಲ್ಲಿಂದ ದ್ವಂಸಗೊಳಿಸಿ ಕೆರೆಗೆ ಬಿಸಾಡಿದ್ದಾರೆ ಎಂಬುದು ಆರೋಪ.
ಶಾಸಕರು ಹಾಗೂ ಹೊಳೆಹೊನ್ನೂರಿನ ವ್ಯಕ್ತಿಯೊಬ್ಬ ಕೆರೆಯ ಜಾಗದಲ್ಲಿ 2 ಎಕೆರೆ ಒತ್ತುವರಿ ಮಾಡಿದ್ಧಾರೆ ಎಂಬುದು ಸ್ಥಳೀಯರ ಆರೋಪವಾಗಿದ್ದು, ಆ ಜಾಗದಲ್ಲಿ ವಿದ್ಯಾಸಂಸ್ಥೆಯೊಂದನ್ನ ನಿರ್ಮಿಸಲಾಗಿದ್ದು, ಅದಕ್ಕೆ ತೊಂದರೆ ಆಗುತ್ತೆ ಅಂತಾ ಬೂತಪ್ಪನ ಗುಡಿಯನ್ನು ಧ್ವಂಸಗೊಳಿಸಲಾಗಿದೆ ಎಂದು ಸ್ತಳೀಯರು ದೂರಿದ್ದಾರೆ. ಈ ಸಂಬಂಧ ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದ ಗ್ರಾಮಸ್ಥರ ಆಕ್ರೋಶ ಒಂದು ಹಂತ ವಿಪರೀತಕ್ಕೆ ತಲುಪಿತ್ತು. ಅಂತಿಮವಾಗಿ ತಹಶೀಲ್ದಾರ್ ಮನವಿ ಸಲ್ಲಿಸಿದ ಗ್ರಾಮಸ್ಥರು, ಗ್ರಾಮದ ಬೂತಪ್ಪನ ಗುಡಿ ಕೆರೆದಂಡೆಯ ಮೇಲೆ ಮತ್ತೆ ಪ್ರತಿಷ್ಟಾಪನೆ ಆಗಬೇಕು! ಒತ್ತುವರಿ ತೆರವು ಆಗಬೇಕು ಎಂದು ಒತ್ತಾಯಿಸಿದ್ರು. ಚುನಾವಣೆ ಸಂದರ್ಭದಲ್ಲಿ ದೇವರ ಧ್ವಂಸ ಪ್ರಕರಣ ಇನ್ನೆಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಪ್ರಕರಣ ಮುಚ್ಚಿ ಹಾಕಲು ಯತ್ನ
ಇನ್ನೊಂದೆಡೆ ಇದೇ ಘಟನೆಯ ಹಿಂದೆ ಯಾರ್ಯಾರು ಇದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಜನರ ಆರೋಪ ನೇರವಾಗಿ ಶಾಸಕರ ಮೇಲೆಯೇ ಮಾಡುತ್ತಿದ್ದಾರೆ. ಇದಕ್ಕಾಗಿಯೇ ನಿನ್ನೆ ಹೆದ್ದಾರಿ ಬಂದ್ ಮಾಡಿ, ಪ್ರತಿಭಟಿಸಿದ್ದರು. ಆದಾಗ್ಯು ಪ್ರಕರಣವನ್ನು ಮುಚ್ಚಿ ಹಾಕುವಂತಹ ಪ್ರಯತ್ನಗಳನ್ನ ನಡೆಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ.
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
