ಸಹ್ಯಾದ್ರಿ ವಿಜ್ಞಾನ ಕಾಲೇಜಿನ 1993 ರ ಸಾಲಿನ ವಿದ್ಯಾರ್ಥಿಗಳ ಗುರವಂದನೆಗೆ ಎಲ್ಲರೂ ಫಿದಾ ! ಇದು ಚರಿತ್ರೆ ಬರೆದ ಇತಿಹಾಸ....ಹೇಗಂತಿರಾ?

ಕಂಗಳು ವಂದನೆ ಹೇಳಿದೆ,,ಹೃದಯವು ತುಂಬಿ ಹಾಡಿದೆ..ಆಡದೆ ಉಳಿದಿಹ ಮಾತು ನೂರಿದೆ ! ಗುರುಶಿಷ್ಯರ ಸಮಾಗಮದಲ್ಲಿ ನೂರೆಂಟು ನೆನಪುಗಳೊಂದಿಗೆ ವಾಪಸ್ಸಾಗುವಾಗ ಆ ಹಾಡು ಗುನುಗುವಂತೆ ಮಾಡಿತು!. -ಸಹ್ಯಾದ್ರಿ ವಿಜ್ಞಾನ ಕಾಲೇಜಿನ 1993 ರ ಸಾಲಿನ ವಿದ್ಯಾರ್ಥಿಗಳ ಗುರವಂದನೆಗೆ ಎಲ್ಲರೂ ಫಿದಾ ! ಇದು ಚರಿತ್ರೆ ಬರೆದ ಇತಿಹಾಸ....ಹೇಗಂತಿರಾ?

ಸಹ್ಯಾದ್ರಿ ವಿಜ್ಞಾನ ಕಾಲೇಜಿನ 1993 ರ ಸಾಲಿನ ವಿದ್ಯಾರ್ಥಿಗಳ ಗುರವಂದನೆಗೆ ಎಲ್ಲರೂ ಫಿದಾ ! ಇದು ಚರಿತ್ರೆ ಬರೆದ ಇತಿಹಾಸ....ಹೇಗಂತಿರಾ?

MALENADUTODAY.COM | SHIVAMOGGA NEWS

ಹಿರಿಯ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿತು. 27 ವರ್ಷಗಳ ನಂತರದ ಬೇಟಿಯ ಅಮೃತ ಘಳಿಗೆ ಅದು. ಆ ದಿನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಹಿರಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದೆಡೆ ಸೇರಿದಾಗ..ಅಲ್ಲಿ ಭಾವುಕ ಲೋಕವೇ ಸೃಷ್ಟಿಯಾಯಿತು. ಅಂದುಕೊಂಡಂತೆ ಆ ದಿನ  ನೂರಾರು ಸಂಖ್ಯೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಬೆಟ್ಟದಷ್ಟು ನೆನಪಿನ ಬುತ್ತಿಹೊತ್ತು ಬಂದೇ ಬಿಟ್ಟರು.ಶಿಷ್ಯರ ಕರೆಯೋಲೆಗೆ ಓಗೊಟ್ಟು ಬಂದ ಗುರುಗಳನ್ನು ನೋಡಿದ ತಕ್ಷಣವೇ ವಿದ್ಯಾರ್ಥಿಗಳು ಕಾಲಿಗೆ ನಮಸ್ಕರಿಸಿ, ಆಶಿರ್ವಾದ ಪಡೆದ ಸನ್ನಿವೇಶ ಮನಕಲುಕವಂತಿತ್ತು. ಎಲ್ಲರೂ ಕಾಲೇಜು ದಿನಗಳ ತಮ್ಮ ನೆನಪಿನಂಗಳಕ್ಕೆ ಜಾರಿದರು.

ಕಿಮ್ಮನೆ ರತ್ನಾಕರ್​ ಮತ್ತು R.M. ಮಂಜುನಾಥ್ ಗೌಡರ ಕೈಗಳನ್ನು ಕಾಂತಾರ ಸ್ಟೈಲ್​ನಲ್ಲಿ ಹಿಡಿದು ಒಂದು ಮಾಡಿದ್ರಾ ಕಾರ್ಯಕರ್ತರು!?

ಹೌದು 04-02-23 ರಂದು ಗಾಜನೂರಿನ ತುಂತುರು ಫಾರಂ ಹೌಸ್ ನಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಹೊಸಲೋಕವನ್ನೇ ಸೃಷ್ಟಿಸಿತು. 27 ವರ್ಷಗಳ ನಂತರ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ 1993 ರ ಸಾಲಿನಲ್ಲಿ ಓದಿದ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು. ತರಲೆ ಹುಡುಗರ ಬ್ಯಾಚ್ ಎಂದು ಹೆಸರಾಗಿದ್ದ 1993 ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಪಾದಪೂಜೆ ಮಾಡಿದಾಗ ಗುರುಶಿಷ್ಯರ ಕಣ್ಣಾಲಿಗಳು ಒದ್ದೆಯಾಗಿದ್ದವು. 

ಸಹ್ಯಾದ್ರಿ ವಿಜ್ಞಾನ ಕಾಲೇಜಿನ 1993 ರ ಬ್ಯಾಚ್ ಎಂದ್ರೆ ಅದು ತರಲೆ ಹುಡುಗರ ಬ್ಯಾಚ್ ಎಂದೇ ಹೆಸರಾಗಿತ್ತು. ಪಿಸಿಎಂ ನಿಂದ ಹಿಡಿದು ಸಿಬಿಝಡ್ ವಿಭಾಗದವರೆಗೂ ಎಲ್ಲಾ ತರಗತಿಗಳಲ್ಲಿ ತರಲೇ ಹುಡುಗರಿದ್ರು. ಅದ್ಯಾಪಕರಿಗೆ ಪಾಠ ಮಾಡಲು ಬಿಡದೆ, ಸತಾಯಿಸಿದ ಹುಡುಗರಿದ್ರು. ಇವರ ಕಿರಿಕ್...ಯಾವ ಕಿರಿಕ್ ಪಾರ್ಟಿ ..ತ್ರೀ ಈಡಿಯೇಟ್ ಸಿನಿಮಾಕ್ಕೇನು ಕಡಿಮೆ ಇರಲಿಲ್ಲ..ಅಂದು ಕಾಲೇಜಿನಲ್ಲಿ ಪ್ರತಿ ದಿನ ತಮ್ಮ ತರಲೆ  ಕಿಕ್ ಗಾಗಿ  ಎನಾದರೊಂದು ಕ್ಯಾತೆ ತೆಗೆಯುತ್ತಿದ್ದ ಹುಡುಗರ ವರ್ತನೆಗೆ ಹುಡುಗಿಯರು ಕೂಡ ಹೈರಾಣಾಗಿ ಹೋಗಿದ್ರು..ಗುರುಗಳಂತೂ ತರಲೆ ಹುಡುಗರಿಂದ ರೋಸೆತ್ತು ಹೋಗಿದ್ರು. ಪ್ರತಿದಿನ ಕಾಲೇಜಿನಲ್ಲಿ ಕಿರಿಕ್ ಗಲಾಟೆ..ಬ್ಯಾಚ್ ಗಳ ನಡುವೆ ಹೊಡೆದಾಟ..ಬಡಿದಾಟ ಎಂಬುದು ಸಾಮಾನ್ಯ ಎಂಬಂತಾಗಿತ್ತು. ಇನ್ನು ಮನದಲ್ಲಿ ಪ್ರಿತಿಸಿದ ಹುಡುಗಿಗೆ ತಮ್ಮ ಭಾವನೆ ಹೇಳಿಕೊಳ್ಳಲಾಗದೆ ಮೂರು ವರ್ಷ ಹಾಗೆಯೇ ಕಾಲ ಕಳೆದು ಕಾಲೇಜು ತೊರೆದ ಹುಡುಗರು ಹ್ಯಾಪ್ ಮೊರೆ ಮಾಡಿಕೊಂಡ ದೃಶ್ಯ ಇನ್ನು ಹಸಿರಾಗಿಯೇ ಇದೆ.

ಟ್ರಾಫಿಕ್​ ಫೈನ್​ ಕಟ್ಟಲು 50 ಪರ್ಸೆಂಟ್ ಡಿಸ್ಕೌಂಟ್! ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ದಂಡ ಕಟ್ಟಲು ಇದೆ ಅವಕಾಶ! ವಿವರ ಇಲ್ಲಿದೆ

ಸಹ್ಯಾದ್ರಿ ಕಾಲೇಜಿನಲ್ಲಿ ಓದಿದಷ್ಟು ದಿನವೂ ಗುರುಗಳಿಗೆ ಗೋಳು ಹೊಯ್ಕಳುತ್ತಿದ್ದ ಹುಡುಗರು ಕಾಲೇಜು ತೊರೆದಾಗ. ಬಹಳಷ್ಟು ಮಂದಿಯ .ಬದುಕಿನ ದಾರಿ ಕತ್ತಲಾಗಿ ಹೋಗಿತ್ತು...ಬಹಳಷ್ಟು ಮಂದಿ ಬಡತನದಿಂದಲೇ ಬಂದ ವಿದ್ಯಾರ್ಥಿಗಳಾದ್ದರಿಂದ ಉದ್ಯೋಗ ಅರಸಿಕೊಂಡು ಹೊರಟರು. ಚೆನ್ನಾಗಿ ಓದಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸರ್ಕಾರಿ ಹುದ್ದೆಯನ್ನು ಗಿಟ್ಟಿಸಿಕೊಂಡ್ರು...ಹೊಸ ಬದುಕು ಕಟ್ಟಿಕೊಳ್ಳಲು ತವಕಿಸಿದ ಹುಡುಗರು ಮತ್ತೆ ಕಾಲೇಜಿನತ್ತ ಮುಖ ಮಾಡಲು ಸಾಧ್ಯವಾಗಿರಲಿಲ್ಲ..ಸಹ್ಯಾದ್ರಿ ಕಾಲೇಜು ನೆನೆದಾಗಲೆಲ್ಲಾ..ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಿದ್ದರು..ಬಿಟ್ಟರೆ..ಮತ್ತೆ ಆ ಗೆಳೆಯರು ಸೇರಲೂ ಎಲ್ಲೂ ಕೂಡ ಅವಕಾಶ ಇರಲಿಲ್ಲ. ಎಲ್ಲರೂ 47 ರ ಆಸುಪಾಸಿನ ಹಿರಿಯ ವಿದ್ಯಾರ್ಥಿಗಳು....ಎಲ್ಲರೂ ತಮ್ಮ ಬದುಕನ್ನು ಚೆನ್ನಾಗಿಯೇ ಕಟ್ಟಿಕೊಂಡಿದ್ದಾರೆ 

ನಾವು ಕಾಲೇಜಿನಲ್ಲಿ ಓದುವಾಗ ಗುರುಗಳಿಗೆ ಬಹಳ ಕಿರಿಕಿರಿ ಮಾಡಿದ್ದೀವಿ ಅನ್ನೋ ಅಳಕು ಮಾತ್ರ ಆ ಹಿರಿಯ ವಿದ್ಯಾರ್ಥಿಗಳನ್ನು ಕಾಡುತ್ತಿತ್ತು. ಹೇಗಾದ್ರೂ ಮಾಡಿ 1993 ನೇ ಸಾಲಿನ ಪಿಸಿಎಂ, ಸಿಬಿಜೆಡ್,ಪಿಎಂಇ, ಪಿಎಂಜಿ, ಸಿಜೆಡ್ಎಸ್,  ವಿಭಾಗದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಒಂದೆಡೆ ಸೇರಬೇಕು..ನಮ್ಮ ಬದುಕನ್ನು ಹಸನಾಗಿಸಿದ ಗುರುಗಳಿಗೆ  ಗುರುವಂದನೆ ಮಾಡಬೇಕೆಂದು ತೀರ್ಮಾನ ಮಾಡಿದ್ರು. ಶಿವಮೊಗ್ಗದಲ್ಲಿದ್ದ ಗೆಳೆಯರ ಗುಂಪು ಗುರುಶಿಷ್ಯರ ಸಮಾಗಮಕ್ಕೆ ಟೊಂಕಕಟ್ಟಿ ನಿಂತಿತು. ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ 1993 ನೇ ಸಾಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರನ್ನು ಒಂದೆಡೆ ಸೇರಿಸುವ ಪ್ರಯತ್ನದಲ್ಲಿ ಯಶಸ್ಸು ಸಾದಿಸಿದ್ರು. ಇನ್ನು 27 ವರ್ಷಗಳ ಹಿಂದೆ ಪಾಠ ಮಾಡಿದ ಗುರುಗಳು ನಿವೃತ್ತಿಯಾಗಿ, ರಾಜ್ಯದ ವಿವಿಧೆಡೆ ನೆಲೆಸಿದ್ದಾರೆ. ಅವರನ್ನು ಖುದ್ದಾಗಿ ಸಂಪರ್ಕಿಸುವ ಸಾಹಸಕ್ಕೆ ಶಿಷ್ಯವೃಂದ ಕೈಹಾಕಿತು.

ಕಿಮ್ಮನೆ ರತ್ನಾಕರ್​ ಮತ್ತು R.M. ಮಂಜುನಾಥ್ ಗೌಡರ ಕೈಗಳನ್ನು ಕಾಂತಾರ ಸ್ಟೈಲ್​ನಲ್ಲಿ ಹಿಡಿದು ಒಂದು ಮಾಡಿದ್ರಾ ಕಾರ್ಯಕರ್ತರು!?

ಶಿವಮೊಗ್ಗ, ಧಾರವಾಡ ಬೆಳಗಾಂ, ಚಿತ್ರದುರ್ಗ, ಬೆಂಗಳೂರು ಸೇರಿದಂತೆ. ಎಲ್ಲಾ ಕಡೆಗಳಿದ್ದ ಗುರುಗಳನ್ನು ಖುದ್ದಾಗಿ ಸಂಪರ್ಕಿಸಿ, ಆಹ್ವಾನ ಪತ್ರಿಕೆ ನೀಡಿ ಆಮಂತ್ರಣ ನೀಡಿದ್ದರು. ಗುರುಗಳು ಕಾರ್ಯಕ್ರಮಕ್ಕೆ ಬಂದೇ ಬರುತ್ತೇವೆ ಎಂಬ ಭರವಸೆ ನೀಡಿದ್ರು.  ಇನ್ನು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಬೇಕೆಂಬ ಉದ್ದೇಶದಿಂದ ಶಿವಮೊಗ್ಗದ ಶಿಷ್ಯ ವೃಂದದವರು ಗುರುವಂದನಾ ಸಮತಿಯನ್ನು ರಚಿಸಿದ್ರು. ಎಲ್ಲಾ ಹಿರಿಯ ವಿದ್ಯಾರ್ಥಿಗಳಿಂದ ಸಮಿತಿಗೆ ಉತ್ತಮ ಸ್ಪಂಧನೆ ಸಿಕ್ಕಿತು. ಎಲ್ಲರೂ ಹಣಕಾಸಿನ ನೆರವು ನೀಡಿದ್ರು, 1993 ನೇ ಸಾಲಿನಲ್ಲಿ ಪ್ರಾಂಶುಪಾಲರಾಗಿದ್ದ ಎ.ಎಸ್.ಚಂದ್ರಶೇಖರ್ ರನ್ನು ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರನ್ನಾಗಿ ಮಾಡಿದ್ರು..ಎಲ್ಲವೂ ಅಂದುಕೊಂಡಂತೆ ಗುರುಗಳಿಗೆ ವಂದಿಸುವ ಆ ದಿನ ಬಂದಾಗ ತುಂತುರು ಫಾರಂ ಹೌಸ್ ನಲ್ಲಿ  ಭಾವ ಲೋಕವೇ ಸೃಷ್ಟಿಯಾಯ್ತು.

ತಮ್ಮ ನೆಚ್ಚಿನ ಗುರುಗಳು ಬರುತ್ತಿದ್ದಂತೆ ಓಡೋಡಿ ಬಂದ ವಿದ್ಯಾರ್ಥಿಗಳು ಕಾಲಿಗೆ ನಮಸ್ಕರಿಸಿ ಆಶಿರ್ವಾದ ಪಡೆದರು. ಶಿಷ್ಯರನ್ನು ಬಿಗಿದಪ್ಪಿದ್ದ ಗುರುಗಳು ಹೇಗಿದ್ದೀಯಾ..ಏನ್ ಮಾಡ್ಕೊಂಡಿದ್ದೀಯ..ಎಂದು ಹಸಸ್ಮುಖಿಯಾಗಿ ಕೇಳುವಾಗ. ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸವೇ ಮೂಡಿತ್ತು. ಗುರುಗಳಿಗೆ ಅಂದು ಕೊಡುತ್ತಿದ್ದ ಕೀಟಲೆಗಳನ್ನು ಮೆಲಕು ಹಾಕಿದ್ರು, ಶಿಷ್ಯರ ಎಲ್ಲಾ ಆಟಾಟೋಪಗಳನ್ನು ಹತ್ತಿರದಿಂದ ಕಂಡಿದ್ದ ಗುರುಗಳು, ಕೂಡ ಹಳೆ ನೆನಪುಗಳಿಗೆ ಫಿದಾ ಆದ್ರು.  57 ಗುರುಗಳನ್ನು ಒಂದೆಡೆ ಸೇರಿಸುವ ಹಾಗು 1993 ನೇ ಸಾಲಿನ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಸಾಮಾನ್ಯ ಸಂಗತಿ ಏನಲ್ಲ..ಆದ್ರೆ 1993 ರ ಕಿರಿಕ್ ಬ್ಯಾಚ್ ನ ಹುಡುಗರು ಆ ಬಿಗ್ ಟಾಸ್ಕ್ ಸವಾಲಾಗಿ ತೆಗೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಫಲರಾಗಿದ್ರು.

ಶಿವಮೊಗ್ಗದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ! ಪೇಜ್​ ಪ್ರಮುಖ್​ ಸಭೆಯಲ್ಲಿ ಈಶ್ವರಪ್ಪರವರ ಗೆಲುವಿನ ಮಾತು! ಪ್ರತಿಪಕ್ಷಗಳ ವಿರುದ್ಧ ನಳಿನ್​ ಕುಮಾರ್ ಕಟೀಲ್​ರ ವಾಗ್ದಾಳಿ

ಹೃದಯಸ್ಪರ್ಷಿಯಾಗಿದ್ದ ಪಾದಪೂಜೆ

ತಂತ್ರಜ್ಞಾನದ ಯುಗದಲ್ಲಿ ಭಾವನೆಗಳಿಗೆ ಬೆಲೆ ಅಷ್ಟಕಷ್ಟೆ. ಮನೆ ಒಂದಾಗಿದ್ರು. ಮನಸ್ಸುಗಳು ಒಂದಾಗಿರದೆ..ಮನೆಯೊಂದು ಮೂರು ಬಾಗಿಲಾಗಿರುತ್ತೆ. ಪ್ರೀತಿ ಸ್ನೇಹ ಸಂಬಂಧ, ಸಂಸ್ಕಾರ ಗಳು ಮಾಯವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅಂದು ಹಿರಿಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಮಾಡಿದ ಪಾದಪೂಜೆ ನಿಜಕ್ಕೂ ಗುರುಶಿಷ್ಯರ ಸಂಬಂಧವನ್ನು ಸಾರಿ ಹೇಳಿತು. ಬಹಳಷ್ಟು ಗುರುಗಳು ಪಾದಪೂಜೆ ಬೇಡಪ್ಪ ಎಂದರೂ, ಪಟ್ಟು ಬಿಡದ ವಿದ್ಯಾರ್ಥಿಗಳು ಒತ್ತಾಯಪೂರ್ವಕವಾಗಿ ಅವರನ್ನು ಒಪ್ಪಿಸಿದ್ರು..ಶಿಷ್ಯರ ಪ್ರೀತಿಯ ಮುಂದೆ ಗುರುಗಳು ತಲೆಬಾಗಲೇ ಬೇಕಾಯ್ತು. ಹಿರಿಯ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರು ಪಾದಪೂಜೆ ಮಾಡುವಾಗ ಗುರುಗಳ ಕಣ್ಣುಗಳು ಒದ್ದೆಯಾದವು. ಮನಪೂರ್ವಕವಾಗಿ ಪಾದಪೂಜೆ ಮಾಡಿದ ವಿದ್ಯಾರ್ಥಿಗಳಲ್ಲಿ ಸಾರ್ಥಕ ಭಾವ ಎದ್ದು ಕಾಣುತ್ತಿತ್ತು. ಕ್ಷಣಕಾಲ ಏನೋ ಕಳೆದುಕೊಂಡಿದ್ದನ್ನು ಮತ್ತೆ ಪಡೆದ ಭಾವನೆ ಮೂಡಿಸಿತು.

ನಂತರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಎಲ್ಲಾ ಗುರುಗಳನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಎಲ್ಲೂ ವ್ಯತ್ಯಾಸವಾಗದಂತೆ, ವಿದ್ಯಾರ್ಥಿಗಳು ನೋಡಿಕೊಂಡರು. ಕಾರ್ಯಕ್ರಮದ ಗೌರವ ಅಧ್ಯಕ್ಷತೆವಹಿಸಿದ್ದ ಅಂದಿನ ಪ್ರಿನ್ಸಿಪಾಲ್ ಎ.ಎಸ್. ಚಂದ್ರಶೇಖರ್ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುರುಗಳು ತಮ್ಮ ಅನಿಸಿಕೆಗಳನ್ನು ಹೇಳುವಾಗ ಭಾವುಕರಾದ್ರು...

ಕನ್ನಡ ಪ್ರೊಫೆಸರ್ ಮಂಜುಳರವರು ತಮ್ಮ ಶಿಷ್ಯರಿಗೆ ಹಾಡಿನ ಮೂಲಕವೇ...ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಕಂಗಳು ವಂದನೆ ಹೇಳಿದೆ,,ಹೃದಯವು ತುಂಬಿ ಹಾಡಿದೆ..ಆಡದೆ ಉಳಿದಿಹ ಮಾತು ನೂರಿದೆ..ಎಂದು ಹಾಡಿದ ಹಾಡು,,,ಕಾರ್ಯಕ್ರಮ ಮುಗಿಸಿಕೊಂಡು ಹೋಗುವಾಗ ಮಾರ್ಧನಿಸುವಂತೆ ಮಾಡಿತು. ಬೆಳಿಗ್ಗೆ ಸಂತೋಷದಿಂದ ಕಾರ್ಯಕ್ರಮಕ್ಕೆ ಬಂದ ಗುರು ಶಿಷ್ಯರು ಸಂಜೆ ಹೋಗುವಾಗ  ಭಾರವಾದ ಮನಸ್ಸಿನೊಂದಿಗೆ ನೂರೆಂಟು ನೆನಪುಗಳೊಂದಿಗೆ ವಾಪಸ್ಸಾದರು.

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com