ಆರ್ ಎಂ ಮಂಜುನಾಥ ಗೌಡರಿಗೆ ಬಿಗ್ ರಿಲೀಫ್ ! ಮನವಿಗೆ ಅಸ್ತು ಎಂದ ಹೈಕೋರ್ಟ್

Malenadu Today

KARNATAKA NEWS/ ONLINE / Malenadu today/ Oct 11, 2023 SHIVAMOGGA NEWS

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಹಾಗೂ ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್​ಎಂ ಮಂಜುನಾಥ್ ಗೌಡರಿಗೆ ಸೇರಿದ ನಿವಾಸಗಳ ಮೇಲೆ ಇತ್ತೀಚೆಗೆಷ್ಟೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರೇಡ್ ನಡೆಸಿದ್ದರು. ಇದರ ಬೆನ್ನಲ್ಲೆ ಅವರನ್ನು ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳು ಹೆಚ್ಚಿದ್ದವು. ಈ ಬಡುವೆ  ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುವ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.  

ಆರ್.ಎಂ.ಮಂಜುನಾಥಗೌಡರ ನಿವಾಸಗಳ ಮೇಲೆ ಆಕ್ಟೋಬರ್ 5 ರಂದು ಇಡಿ ದಾಳಿ ನಡೆಸಿತ್ತು. ನಕಲಿ ಬಂಗಾರಪ ಅಡಮಾನ ಪ್ರಕರಣ ಸಂಬಂಧ ಕೆಲವೊಂದು ದಾಖಲೆ ಪತ್ರಗಳ ಪರಿಶೀಲನೆ ನಡೆಸಿತ್ತು. ಆನಂತರ. ಅದಾದ ನಂತರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರು ಎನ್ನಲಾಗಿದೆ. 

ಈ  ಸಂಬಂಧ ಆರ್.ಎಂ.ಮಂಜುನಾಥ ಗೌಡರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ಮಂಜುನಾಥ್ ಗೌಡರನ್ನು ವಿಚಾರಣೆಗೆ ಒಳಪಡಿಸುವ ವಿಚಾರದಲ್ಲಿ ತಡೆ ನೀಡಿದೆ ಎನ್ನಲಾಗಿದೆ.  

ಅರ್ಜಿದಾರರ ಪರವಾಗಿ ನ್ಯಾಯವಾದಿಗಳಾದ ಕಿರಣ್ ಕುಮಾರ್ ಹಾಗೂ ಜಯಕುಮಾರ್‌ ಎಸ್ ಪಾಟೀಲ್ ವಾದ ಮಂಡಿಸಿದ್ದರು. 


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

Share This Article