Shivamogga | Jan 29, 2024 | shimoga smart city, Bommana Katte resident, ಮುಚ್ಚಿದ್ದ ಸ್ಲ್ಯಾಬ್ ಕುಸಿದು ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ನಗರದ ವಿನೋಬನಗರದ ರಸ್ತೆಯೊಂದರಲ್ಲಿ ಚರಂಡಿಗೆ ಹಾಕಲಾಗಿದ್ದ ಸ್ಲ್ಯಾಬ್ ಕುಸಿದು ಮುತ್ತಪ್ಪ (45) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇವರು ಶಿವಮೊಗ್ಗ ನಗರದ ಬೊಮ್ಮನಕಟ್ಟೆ ನಿವಾಸಿಯಾಗಿದ್ದಾರೆ. ಗುಜರಿ ವ್ಯಾಪಾರ ಮಾಡುತ್ತಿದ್ದ ಮುತ್ತಪ್ಪ ಮೂತ್ರ ವಿಸರ್ಜಿಸುತ್ತಿದ್ದ ವೇಳೆ ಸ್ಲ್ಯಾಬ್ ಕುಸಿದಿದೆ. ಪರಿಣಾಮ ಅವರು ಚರಂಡಿಗೆ ಬಿದ್ದಿದ್ದಾರೆ
Bommana Katte resident dies after drain slab collapses in smartcityshivamogga #shivamgoga pic.twitter.com/jz5Z4ciXpC
— malenadutoday.com (@malnadtoday) January 29, 2024
ಸುಮಾರು ಹತ್ತು ಅಡಿ ಆಳದ ಚರಂಡಿಗೆ ಬಿದ್ದ ಮುತ್ತಪ್ಪರವರ ಮೇಲೆ ಮತ್ತೊಂದು ಕಾಂಕ್ರೀಟ್ ಸ್ಲ್ಯಾಬ್ ಮೈಮೇಲೆ ಬಿದ್ದಿದೆ. ಪರಿಣಾಮ ಸ್ಥಳದಲ್ಲಿಯೇ ಅವರು ಪ್ರಾಣ ಬಿಟ್ಟಿದ್ದಾರೆ.