ಗೊಂಬೆ ಭವಿಷ್ಯದಲ್ಲಿ ರಾಜಕಾರಣದ ಬಲಾವಣೆಯ ಸುಳಿವು! ಬಿಎಸ್​ವೈರ ಅಧಿಕಾರದ ಬಗ್ಗೆಯು ತಿಳಿಸಿದ್ದ ಯುಗಾದಿ ಅಮಾವಾಸ್ಯೆಯ ಹೇಳಿಕೆ!

Malenadu Today

ಧಾರವಾಡ ಜಿಲ್ಲೆ ಉಪ್ಪಿನ ಬೆಟಗೇರಿಯ ಹತ್ತಿರ ಹನುಮನಕೊಪ್ಪ ಎಂಬ ಊರೊಂದಿದೆ. ಅಲ್ಲಿದೆ ಪ್ರತಿವರ್ಷ ಯುಗಾದಿ ದಿನ ಗೊಂಬೆ ಭವಿಷ್ಯವನ್ನು ನೋಡಲಾಗುತ್ತದೆ. ಈ ಸಲ ಈ ಗೊಂಬೆ ಭವಿಷ್ಯದಲ್ಲಿ ರಾಜ್ಯ ರಾಜಕಾರಣದ ಬದಲಾವಣೆ ಕಂಡು ಬಂದಿದೆಯಂತೆ. 

ನೂರಾರು ವರ್ಷಗಳ ಇತಿಹಾಸದ ಗೊಂಬೆ ಭವಿಷ್ಯ

ಇಲ್ಲಿನ ವರದಿಯಂತೆ, ಹನುಮನಕೊಪ್ಪದ ಗೊಂಬೆ ಭವಿಷ್ಯಕ್ಕೆ ನೂರಾರು ವರ್ಷದ ಇತಿಹಾಸವಿದ್ಯಂತೆ. ಅಂದಿನಿಂದ ವರ್ಷವರ್ಷ ಸಿಗುವ ಸೂಚಕಗಳು ಸತ್ಯವಾಗಿದೆ ಎನ್ನುತ್ತಾರೆ ಊರಿನವರು. ಅಷ್ಟೆಅಲ್ಲದೆ ರಾಜ್ಯ ಪ್ರಮುಖ ಘಟನೆಗಳನ್ನ ಈ ಗೊಂಬೆ ಭವಿಷ್ಯ ಮೊದಲೇ ತಿಳಿಸಿದ್ದು, ಸಾಬೀತಾಗಿದೆ ಎನ್ನುತ್ತಾರೆ. 

Malenadu Today

ಏನಿದು ಗೊಂಬೆ ಭವಿಷ್ಯ

ಯುಗಾದಿಯ ಅಮವಾಸ್ಯೆ ದಿನ, ಇಲ್ಲಿನ ತುಪ್ಪರಿ ಹಳ್ಳದ ದಂಡೆಯ ಬಳಿ ಗ್ರಾಮಸ್ಥರೆಲ್ಲರು ಸೇರುತ್ತಾರೆ.  ಅಲ್ಲಿ ಮೊದಲು ಒಂದು ಆಯತಾಕಾರದ ಆಕೃತಿಯನ್ನು ನಿರ್ಮಿಸುತ್ತಾರೆ. ಅದರ ನಾಲ್ಕು ದಿಕ್ಕಿಗೆ ಕೋಲುಗಳನ್ನ ನೆಡುತ್ತಾರೆ. ಈ ನಾಲ್ಕು ಕೋಲು ಸೇನಾದಿಪತಿ ಗೊಂಬೆ ಎಂದು ಕರೆಯಲಾಗುತ್ತದೆ. ಆನಂತರ ಆಯತಾಕಾರದ ಆಕೃತಿಯ ಒಳಗೆ ರೈತರು, ಸೈನಿಕರು ಇತ್ಯಾದಿ ಹೆಸರಿನ ಗೊಂಬೆಗಳನ್ನ ಇಡಲಾಗುತ್ತದೆ. ಬಳಿಕ ಅಲ್ಲಿಂದ ಗ್ರಾಮಸ್ಥರು ತೆರಳುತ್ತಾರೆ. ಮರುದಿನ ಬಂದು ಆಕೃತಿಯ ಹೇಗೆ ವಿರೂಪಗೊಂಡಿದೆ ಎಂಬುದನ್ನ ನೋಡುತ್ತಾರೆ. ಆಕೃತಿಯಲ್ಲಿ ಆದ ಬದಲಾವಣೆ ಹಾಗೂ ಅದು ತೋರಿಸುವ ದಿಕ್ಕಿಗೆ ಅನುಗುಣವಾಗಿ ಮುಂದಾಗುವುದನ್ನ ಅಂದಾಜು ಮಾಡಲಾಗುತ್ತದೆ.

Malenadu Today

ಈ ಸಲದ ಭವಿಷ್ಯ

ಈ ವರ್ಷ ಸೇನಾದಿಪತಿ ಗೊಂಬೆಗೆ ಪೆಟ್ಟಾಗಿದ್ದು, ರಾಜಕೀಯದ ಗೊಂಬೆಯ ಬಲಗಾಲಿಗೆ ಪೆಟ್ಟಾಗಿದೆ. ಹಾಗಾಗಿ ಈ ಸಲ ರಾಜಕೀಯದ ನಾಯಕತ್ವ ಬದಲಾವಣೆ ಆಗಬಹುದು ಎಂದು ಜನರು ಹೇಳುತ್ತಿದ್ದಾರೆ. ಅನೇಕ ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಈ ಪದ್ದತಿ ಕುತೂಹಲವನ್ನು ಮೂಡಿಸುತ್ತಿದ್ದು, ಎಲ್ಲೆಡೆ ಸುದ್ದಿಯಾಗುತ್ತಿದೆ. 

ಇತಿಹಾಸದ ಸಾಕ್ಷಿ    

ಇಂದಿರಾ ಗಾಂಧಿಯವವರು ಪ್ರಧಾನಿಯಾಗಿದ್ದಾಗ, ಹನುಮನಕೊಪ್ಪ ಗ್ರಾಮಸ್ಥರು ಮಾಡಿದ್ದ ಈ ಆಚರಣೆಯಲ್ಲಿ ರಾಷ್ಟ್ರನಾಯಕರ ಬೊಂಬೆಯೊಂದು ಉರುಳಿ ಬಿದ್ದಿತ್ತು. ರಾಷ್ಟ್ರನಾಯಕರಿಗೆ ಆಪತ್ತು ಎದುರಾಗಬಹದು ಎಂದು ಅರ್ಥೈಸಿಲಾಗಿತ್ತಂತೆ. ಆ ನಂತರ  ಇಂದಿರಾ ಗಾಂಧಿ ಹತ್ಯೆ ಸಂಭವಿಸಿತ್ತು. ಆನಂತರ ರಾಜಶೇಖರರೆಡ್ಡಿ ವಿಮಾನ ಅಪಘಾತದ ಸಂದರ್ಭದಲ್ಲಿ ಇದೇ ರೀತಿಯ ಭವಿಷ್ಯ ಹೊರಬಿದ್ದಿತ್ತಂತೆ. ಇನ್ನೂ ಯಡಿಯೂರಪ್ಪ ಸಿಎಂ ಆಗಿದ್ದಾಗ ಈಗ ಧಕ್ಕೆಯಾಗಿರುವ ಕರ್ನಾಟಕ ದಿಕ್ಕಿನ ಗೊಂಬೆ ಕಾಲಿಗೆ ಪೆಟ್ಟಾಗಿತ್ತು. ಅದಾದ ನಾಲ್ಕು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದಿದ್ದರು ಎನ್ನುತ್ತಾರೆ ಊರಿನವರು

Missing / ಕಾಣೆಯಾಗಿದ್ದಾರೆ/ ಹಾಸ್ಟೆಲ್​ನಿಂದ ನಾಪತ್ತೆ/ ಮಗುವಿನಿನೊಂದಿಗೆ ತಾಯಿ ಕಾಣೆ/ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಿ!

Malenadu Today

ಪೌರಾಣಿಕ ವಿವರ

ಹಿಂದೊಮ್ಮೆ ಈ ಗ್ರಾಮದಲ್ಲಿ ಬರಗಾಲ ಬಂದಿದ್ದಾಗ ಗ್ರಾಮದಲ್ಲಿದ್ದ ಚಿದಂಬರ ಶಾಸ್ತ್ರಿ ಎನ್ನುವವರು ಶೃಂಗ ಋಷಿಯ ಮಣ್ಣಿನ ಮೂರ್ತಿ ಮಾಡಿ ತಪಸ್ಸು ಮಾಡಿದ್ದರಂತೆ ಆಗ ಗ್ರಾಮದ ಸುತ್ತಮುತ್ತ ಮಳೆ ಆಗಿತ್ತು. ಬಳಿಕ ವರ್ಷಕ್ಕೊಮ್ಮೆ ಯುಗಾದಿ ಅಮಾವಾಸ್ಯೆ ದಿನ ಹೀಗೆ ಮಾಡುತ್ತ ಬನ್ನಿ ಎಂಬ ಸಂಪ್ರದಾಯ ಹೇಳಿಕೊಟ್ಟಿದ್ದರಂತೆ. ಅದನ್ನೇ ಈಗ ಗ್ರಾಮಸ್ಥರು ಪಾಲಿಸಿಕೊಂಡು ಬಂದಿದ್ದಾರಂತೆ. 

ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

MALENADUTODAY.COM  |SHIVAMOGGA| #KANNADANEWSWEBಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today,

Share This Article