ಪೆಟ್ರೋಲಿಂಗ್​​ ವೇಳೆ ಸಿಕ್ತು ಅರ್ಧ ಕೆ.ಜಿ ಒಣ ಗಾಂಜಾ

SHIVAMOGGA/  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತ್ಯಾಗರ್ತಿ ಬಳಿಯಲ್ಲಿ ಒಣಗಾಂಜಾ ಮಾರುತ್ತಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ಮಾಲು ಸಮೇತ ಹಿಡಿದಿದ್ದಾರೆ.  ಇಲ್ಲಿನ ದೊಡ್ಡಬ್ಯಾಣ ಗ್ರಾಮದ ಬಳಿಯಲ್ಲಿ  ಪೆಟ್ರೋಲಿಂಗ್​ ಮಾಡುತ್ತಿದ್ದ ವೇಳೇ ದ್ವಿಚಕ್ರವಾಹನವೊಂದನ್ನ ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ.  ಈ ವೇಳೆ ಆತನ ಬಳಿ ಅರ್ಧ ಕೆ.ಜಿ ಒಣ ಗಾಂಜಾ ಪತ್ತೆಯಾಗಿದೆ. ಸುಮಾರು 115000  ಮೌಲ್ಯದ ಗಾಂಜಾ ಇರಬಹುದು ಎಂದು ಅಂದಾಜಿಸಿದ್ದು, ಅದನ್ನ ಜಪ್ತಿ ಮಾಡಿದ ಅಬಕಾರಿ ಸಿಬ್ಬಂದಿ , ಆರೋಪಿ ವಿರುದ್ಧ ಎನ್​ಡಿಪಿಎಸ್​ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. … Read more