ಮತ್ತೆ ಆಕ್ಟೀವ್ ಆಯ್ತಾ ಶಿವಮೊಗ್ಗ ರೌಡಿಸಂ! ಫ್ರೀಡಂ ಪಾರ್ಕ್ ಬಳಿ ಹಳೇ ರೌಡಿಗಳ ಕಿರಿಕ್! ಓರ್ವನ ಮೇಲೆ ಹಲ್ಲೆ!
SHIVAMOGGA | Dec 25, 2023 | ಶಿವಮೊಗ್ಗದ ಫ್ರೀಡಂಪಾರ್ಕ್ ಆಟೋ ಸ್ಟ್ಯಾಂಡ್ ಬಳಿಯಲ್ಲಿ ಓರ್ವ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಶಿವಮೊಗ್ಗದ ಜಟ್ ಪಟ್ ನಗರ ನಿವಾಸಿ ಶಶಿ ಎಂಬಾತನ ಮೇಲೆ ಹಲ್ಲೆಯಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಇದೊಂದು ರೌಡಿ ವಲಯದ ಹಲ್ಲೆ ಪ್ರಕರಣ ಎಂದು ತಿಳಿದುಬಂದಿದೆ. ಕನ್ನಡ ರಾಜ್ಯೋತ್ಸವದ ವಿಚಾರದಲ್ಲಿ ನಡೆದ ಕಿರಿಕ್ ವಿಚಾರವಾಗಿ ನಾಲ್ವರು ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಫ್ರೀಡಂ ಪಾರ್ಕ್ ಬಳಿಯಲ್ಲಿ ಶಶಿಯ ಮೆಲೆ ಹಲ್ಲೆ … Read more