sn channabasappa : ಶಿವಮೊಗ್ಗದಲ್ಲಿ ಭಾರತ ಧ್ವಜ ಹಿಡಿದು ಸೀತಾರಾಮಾಂಜನೆಯ ಸ್ವಾಮಿಗೆ ಪೂಜೆ

prathapa thirthahalli
Prathapa thirthahalli - content producer

sn channabasappa : ಶಿವಮೊಗ್ಗದಲ್ಲಿ ಭಾರತ ಧ್ವಜ ಹಿಡಿದು ಸೀತಾರಾಮಾಂಜನೆಯ ಸ್ವಾಮಿಗೆ ಪೂಜೆ

sn channabasappa :  ಭಯೋತ್ಪಾದಕರನ್ನು ಹೊಡೆದುರುಳಿಸಿ ಪಾಕಿಸ್ತಾನದ ನಿದ್ದೆಗೆಡಿಸುತ್ತಿರುವ ಭಾರತ ದೇಶದ ಸೈನಿಕರ ಸುರಕ್ಷತೆಗಾಗಿ ಶಾಸಕ ಎಸ್ ಎನ್​ ಚೆನ್ನಬಸಪ್ಪ ನೇತೃತ್ವದಲ್ಲಿ ನಗರದ ಕೋಟೆ ರಸ್ತೆಯಲ್ಲಿರುವ ಸೀತಾರಾಮಾಂಜನೆಯ ದೇವಾಲಯ ಪೂಜೆಯನ್ನು ಸಲ್ಲಿಸಲಾಗಿದೆ.

ಮುಜರಾಯಿ ಇಲಾಖೆ ವತಿಯಿಂದ ಬಂದ ಆದೇಶದ ಹಿನ್ನೆಲೆ ದೇವಾಲಯದಲ್ಲಿ ಶಾಸಕರು ಇಂದು ತ್ರಿವರ್ಣ ಧ್ವಜ ಹಿಡಿದು ಸೀತಾರಾಮಾಂಜನೆಯ ಹಾಗೂ ದುರ್ಗಾ ದೇವಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಕಾರ್ಯಕರ್ತರು  ಜೈ ಜೈ ಮಾತಾ ಭಾರತ್​ ಮಾತಾ ಭಜರಂಗಿ, ಭಜರಂಗಿ ಎಂದು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್ ಕೆ, ನಗರಾಧ್ಯಕ್ಷರಾದ, ಮೋಹನ್ ರೆಡ್ಡಿ, ಜಿಲ್ಲಾ ಹಾಗೂ ನಗರದ ಪ್ರಮುಖರು, ಮೋರ್ಚಾಗಳ ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

 

Share This Article