pib fact check : ದೇಶದಾದ್ಯಂತ 3 ದಿನ ಬಂದ್ ಆಗಲಿದೆಯಾ ಎಟಿಎಂ | PIB ಹೇಳಿದ್ದೇನು
pib fact check ಮುಂದಿನ ಎರಡು ಮೂರು ದಿನಗಳ ಕಾಲ ಎಟಿಎಂ ಬಂದ್ ಆಗಲಿದೆ ಎಂಬ ಸುದ್ದಿ ಫೇಸ್ಬುಕ್ ವ್ಯಾಟ್ಸ್ಪ್ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹಿನ್ನಲೆ ಈ ಸಂದೇಶವನ್ನು ಪತ್ರಿಕಾ ಮಾಹಿತಿ ಬ್ಯೂರೋ (pbi) ನಕಲಿ ಎಂದು ಹೇಳಿದೆ.

ಈ ಕುರಿತು ಟ್ವೀಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಪತ್ರಿಕಾ ಮಾಹಿತಿ ಬ್ಯೂರೋ ಎಟಿಎಂಗಳು 2-3 ದಿನಗಳವರೆಗೆ ಮುಚ್ಚಲ್ಪಡುತ್ತವೆ ಎಂಬ ಸಂದೇಶಗಳು ಎಲ್ಲಡೆ ವೈರಲ್ ಆಗುತ್ತಿವೆ. ಆದರೆ ಈ ಸುದ್ದಿ ಸುಳ್ಳು. ಈ ಸುದ್ದಿಯನ್ನು ಯಾರೂ ಕೂಡ ಎಲ್ಲಿಯೂ ಹಂಚಿಕೊಳ್ಳಬೇಡಿ. ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂಬ ಭರವಸೆಯನ್ನು ನಾಗರೀಕರಿಗೆ ನೀಡಿದೆ.
Are ATMs closed⁉️
A viral #WhatsApp message claims ATMs will be closed for 2–3 days.
🛑 This Message is FAKE
✅ ATMs will continue to operate as usual#IndiaFightsPropaganda #OperationSindoor https://t.co/Uca59itgFv
— PIB India (@PIB_India) May 9, 2025