ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ದೊಡ್ಡಪೇಟೆ ಪೊಲೀಶ್ ಠಾಣೆಯ ವ್ಯಾಪ್ತಿಯಲ್ಲಿ ಸಾಲ ವಾಪಸ್ ಕೇಳಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಲಾಗಿದೆ. ಪರಿಣಾಮ ಹಲ್ಲೆಗೊಳಗಾದ ವ್ಯಕ್ತಿ ಕೋಮಾಕ್ಕೆ ತೆರಳಿದ್ದಾರೆ. ಘಟನೆಯಲ್ಲಿ ಆರೋಪಿಗಳು ಯುವಕನ ಮೇಲೆ ಹಲ್ಲೆ ಮಾಡಿದ್ದಷ್ಟೆ ಅಲ್ಲದೆ, ಆತನನ್ನು ಮನೆಗೆ ಕರೆತಂದು ನಾಟಕವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸ್ನೇಹಿತರಿಂದ ತೆಗೆದುಕೊಂಡಿದ್ದ ಕೇವಲ 300 ರೂಪಾಯಿ ಸಾಲವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ, ಹುಟ್ಟುಹಬ್ಬದ ದಿನವೇ ಯುವಕನ ಮೇಲೆ ಆತನ ಇಬ್ಬರು ಸ್ನೇಹಿತರು ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದ್ದು, ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಕಲಂ 352, 115(2), 109(1), 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ‘

ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ
ಏನಿದು ಘಟನೆ
ಬಟ್ಟೆ ವ್ಯಾಪಾರಿಯೊಬ್ಬರ ಮಗನ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ಯುವಕ ಡಿಸೆಂಬರ್ 2 ರಂದು ತಮ್ಮ ಹುಟ್ಟುಹಬ್ಬದ ನಿಮಿತ್ತ ಸ್ನೇಹಿತರಿಬ್ಬರ ಜೊತೆಗೆ ಹೊರಗಡೆ ಹೋಗಿದ್ದ. ಬಳಿಕ ರಾತ್ರಿ ಈತನ ಸ್ನೇಹಿತರು ಸಂತ್ರಸ್ತನನ್ನು ಆತನ ಚಿಕ್ಕಪ್ಪನ ಮನೆಯ ಬಳಿ ಬಿಟ್ಟು ಹೋಗಿದ್ದಾರೆ. ಈ ವೇಳೆಗಾಗಲೇ ಸಂತ್ರಸ್ತ ಪ್ರಜ್ಞೆ ಕಳೆದುಕೊಂಢಿದ್ದನಷ್ಟೆ ಅಲ್ಲದೆ ಆತನ ತಲೆಗೆ ಗಂಭೀರವಾದ ಏಟು ಬಿದ್ದಿತ್ತು. ಇದನ್ನ ಮನೆಯವರು ಪ್ರಶ್ನಿಸಿದ್ದಕ್ಕೆ ಸಂತ್ರಸ್ತನ ಸ್ನೇಹಿತರು ಬೈಕ್ನಿಂದ ಬಿದ್ದು ಏಟಾಗಿದೆ ಎಂದಿದ್ದರು. Shivamogga Youth
ಮರುದಿನ ಪ್ರಜ್ಞೆ ಬಂದ ತಕ್ಷಣ ಸಂತ್ರಸ್ತ ತನ್ನ ಮನೆಯವರಿಗೆ ನಡೆದಿದ್ದನ್ನ ಹೇಳಿದ್ದ. ತನ್ನ ಸ್ನೇಹಿತರಿಗೆ ಈ ಹಿಂದೆ ನೀಡಿದ್ದ ಮೂನ್ನೂರು ರೂಪಾಯಿ ವಾಪಸ್ ಕೇಳಿದ್ದಕ್ಕೆ ಗೆಳೆಯರೇ ಹಲ್ಲೆ ನಡೆಸಿದ್ದರು ಎಂದು ಸಂತ್ರಸ್ತ ಹೇಳಿದ್ದ. ಬಳಿಕ ಆತನನ್ನು ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಅಲ್ಲಿ ಕೋಮಾಕ್ಕೆ ಜಾರಿದ್ಧಾನೆ. ಸದ್ಯ ಸಂತ್ರಸ್ತನ ತಾಯಿ ನೀಡಿದ ದೂರಿನನ್ವಯ ಕಳೆದ ಡಿಸೆಂಬರ್ 05 ರಂದು ಎಫ್ಐಆರ್ ದಾಖಲಾಗಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!