shivamogga top news today / ಟಿಕೆಟ್ ಕಳ್ಳ, ಜೋಳ ಜಾಗ್ರತೆ, ಸುದ್ದಿ ಕೊಟ್ಟಿದ್ದಕ್ಕೆ ಏಟು! ಇನ್ನಷ್ಟು ಸಖತ್​ ಸುದ್ದಿಗಳು!

shivamogga top news today  ಸುದ್ದಿ  1

ರಾಶಿ ಮಾಡಿಟ್ಟಿದ್ದ ಮೆಕ್ಕೆಜೋಳವನ್ನು ಕದ್ದ ಆರೋಪಿಗಳನ್ನು  ಶಿರಾಳಕೊಪ್ಪ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಕೊಳಗಿ ತಾಂಡದ ನಿವಾಸಿಗಳು ಒಣಗಿಸಿದ್ದ 25 ಕ್ವಿಂಟಾಲ್ ತೂಕದ ಹಸಿ ಮೆಕ್ಕೆ ಜೋಳವನ್ನು ಕಳವು ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳು ವಾಹನ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. 

ಸುದ್ದಿ  2

ಇತ್ತ ಶಿವಮೊಗ್ಗದ ಸವಳಂಗ ರೋಡ್​ನಲ್ಲಿ ಅಂಗಡಿಯ ಮಾಲೀಕರೊಬ್ಬರ ವಿರುದ್ಧ  ವಿಗಾರ್ಡ್ ಕಂಪನಿ ಹೆಸರಿನಲ್ಲಿ ನಕಲಿ ವಸ್ತುಗಳ ಮಾರಾಟದ ಆರೋಪ ಕೇಳಿಬಂದಿದೆ. ಈ ಸಂಬಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಗಡಿಯಲ್ಲಿ ಖರೀದಿಸಿದ್ದ ವಸ್ತುಗಳು ನಕಲಿ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಈ ದೂರನ್ನು ನೀಡಲಾಗಿದ್ದು ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ. 

ಸುದ್ದಿ  3

ಇತ್ತ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಟೂರ್​ ಆಂಡ್ ಟ್ರಾವೆಲ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪ್ರವಾಸಿಗರ ಟಿಕೆಟಿನ ಹಣವನ್ನು ಲಪಟಾಯಿಸಿದ ಆರೋಪ ಕೇಳಿಬಂದಿದೆ.  3.80 ಲಕ್ಷ ರೂ ಹಣ ಪಡೆದು ಸಿಬ್ಬಂದಿ ಎಸ್ಕೇಪ್ ಆಗಿರುವ ಬಗ್ಗೆ ಟ್ರಾವೆಲ್ಸ್​ನ ಮಾಲೀಕ ಕಂಪ್ಲೆಂಟ್​ ನೀಡಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ. 

ಸುದ್ದಿ  4 shivamogga top news today 

ರಿಪ್ಪನ್​ಪೇಟೆ ಸಮೀಪದ  ಹರತಾಳು ಗ್ರಾಮದಲ್ಲಿ ರೈತರೊಬ್ಬರು ವಿಷ ಕುಡಿದು ಸಾವನ್ನಪ್ಪಿದ್ದಾರೆ. ನಡೆದಿದೆ.ಹರತಾಳು ಗ್ರಾಮದ ಮಂಜಪ್ಪ ಬಿನ್ ನಾಗನಾಯ್ಕ್ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.ಕೃಷಿಯಲ್ಲಿ ನುಕ್ಸಾನ್ ಅನುಭವಿಸಿದ್ದ ಇವರು, ಹೆಚ್ಚು ಸಾಲ ಮಾಡಿಕೊಂಡಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.  

ಸುದ್ದಿ  5

ಶಿವಮೊಗ್ಗದ ಗಾಜನೂರಿನಲ್ಲಿ ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಂಬಂಧ  ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಆಗಿದ್ದು, ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. 

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು