shivamogga top news today ಸುದ್ದಿ 1
ರಾಶಿ ಮಾಡಿಟ್ಟಿದ್ದ ಮೆಕ್ಕೆಜೋಳವನ್ನು ಕದ್ದ ಆರೋಪಿಗಳನ್ನು ಶಿರಾಳಕೊಪ್ಪ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಳಗಿ ತಾಂಡದ ನಿವಾಸಿಗಳು ಒಣಗಿಸಿದ್ದ 25 ಕ್ವಿಂಟಾಲ್ ತೂಕದ ಹಸಿ ಮೆಕ್ಕೆ ಜೋಳವನ್ನು ಕಳವು ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳು ವಾಹನ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಸುದ್ದಿ 2

ಇತ್ತ ಶಿವಮೊಗ್ಗದ ಸವಳಂಗ ರೋಡ್ನಲ್ಲಿ ಅಂಗಡಿಯ ಮಾಲೀಕರೊಬ್ಬರ ವಿರುದ್ಧ ವಿಗಾರ್ಡ್ ಕಂಪನಿ ಹೆಸರಿನಲ್ಲಿ ನಕಲಿ ವಸ್ತುಗಳ ಮಾರಾಟದ ಆರೋಪ ಕೇಳಿಬಂದಿದೆ. ಈ ಸಂಬಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಗಡಿಯಲ್ಲಿ ಖರೀದಿಸಿದ್ದ ವಸ್ತುಗಳು ನಕಲಿ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಈ ದೂರನ್ನು ನೀಡಲಾಗಿದ್ದು ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.
ಸುದ್ದಿ 3
ಇತ್ತ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಟೂರ್ ಆಂಡ್ ಟ್ರಾವೆಲ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪ್ರವಾಸಿಗರ ಟಿಕೆಟಿನ ಹಣವನ್ನು ಲಪಟಾಯಿಸಿದ ಆರೋಪ ಕೇಳಿಬಂದಿದೆ. 3.80 ಲಕ್ಷ ರೂ ಹಣ ಪಡೆದು ಸಿಬ್ಬಂದಿ ಎಸ್ಕೇಪ್ ಆಗಿರುವ ಬಗ್ಗೆ ಟ್ರಾವೆಲ್ಸ್ನ ಮಾಲೀಕ ಕಂಪ್ಲೆಂಟ್ ನೀಡಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಸುದ್ದಿ 4 shivamogga top news today
ರಿಪ್ಪನ್ಪೇಟೆ ಸಮೀಪದ ಹರತಾಳು ಗ್ರಾಮದಲ್ಲಿ ರೈತರೊಬ್ಬರು ವಿಷ ಕುಡಿದು ಸಾವನ್ನಪ್ಪಿದ್ದಾರೆ. ನಡೆದಿದೆ.ಹರತಾಳು ಗ್ರಾಮದ ಮಂಜಪ್ಪ ಬಿನ್ ನಾಗನಾಯ್ಕ್ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.ಕೃಷಿಯಲ್ಲಿ ನುಕ್ಸಾನ್ ಅನುಭವಿಸಿದ್ದ ಇವರು, ಹೆಚ್ಚು ಸಾಲ ಮಾಡಿಕೊಂಡಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸುದ್ದಿ 5
ಶಿವಮೊಗ್ಗದ ಗಾಜನೂರಿನಲ್ಲಿ ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದ್ದು, ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.