shivamogga Today Horoscope 28 | ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ ಕಾಲ, ಶಿಶಿರ ಋತು ಹಾಗೂ ಮಾಘ ಮಾಸದ ಇಂದು ಶುಕ್ಲ ಪಕ್ಷದ ದಶಮಿ ತಿಥಿಯು ಮಧ್ಯಾಹ್ನ 2.35 ರವರೆಗೆ ಇದ್ದು, ತದನಂತರ ಏಕಾದಶಿ ಆರಂಭವಾಗಲಿದೆ. ಕೃತ್ತಿಕಾ ನಕ್ಷತ್ರವು ಬೆಳಿಗ್ಗೆ 7.51 ರವರೆಗೆ ಇರಲಿದ್ದು, ನಂತರ ರೋಹಿಣಿ ನಕ್ಷತ್ರವು ನಾಳೆ ಮುಂಜಾನೆ 6.09 ರವರೆಗೆ ಇರಲಿದೆ. ಅಮೃತ ಘಳಿಗೆಯು ರಾತ್ರಿ 3.10 ರಿಂದ 4.39 ರವರೆಗೆ ಇರಲಿದೆ ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದ್ದು, ಯಮಗಂಡ ಕಾಲವು ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ


ಇವತ್ತಿನ ರಾಶಿಫಲ
ಮೇಷ | ಆಪ್ತರೊಂದಿಗೆ ಭಿನ್ನಾಭಿಪ್ರಾಯ. ದೂರ ಪ್ರಯಾಣ ಹಾಗೂ ಆಸ್ತಿಗೆ ಸಂಬಂಧಿಸಿದ ವಿವಾದ ಎದುರಾಗಬಹುದು. ಆಲೋಚನೆಗಳಲ್ಲಿ ಸ್ಥಿರತೆ ಇರುವುದಿಲ್ಲ ಮತ್ತು ಆರೋಗ್ಯದಲ್ಲಿ ಏರುಪೇರಾಗುವ ಮುನ್ಸೂಚನೆ ಇದೆ. ಉದ್ಯೋಗ ಮತ್ತು ವೃತ್ತಿ ಜೀವನದಲ್ಲಿ ಕೆಲವು ಅಡೆತಡೆಗ ಎದುರಾಗಲಿವೆ.
ವೃಷಭ | ಹೊಸ ವಿಷಯ ಕಲಿಯುವ ಅವಕಾಶ ಸಿಗಲಿದೆ. ಶಿಕ್ಷಣ ಮತ್ತು ಉದ್ಯೋಗದ ದೃಷ್ಟಿಯಿಂದ ಉತ್ತಮ ಅವಕಾಶ ದೊರೆಯಲಿವೆ. ಹೊಸ ಸಂಪರ್ಕ, ಹಳೆಯ ಸ್ನೇಹಿತರ ಭೇಟಿ. ವ್ಯಾಪಾರ ಮತ್ತು ಉದ್ಯೋಗದ ಪರಿಸ್ಥಿತಿ ಅನುಕೂಲಕರವಾಗಿರಲಿವೆ.
ಮಿಥುನ | ವಿಘ್ನಗಳು ಎದುರಾಗಲಿದ್ದು, ಸಾಲದಾತರಿಂದ ಒತ್ತಡ ಬರಲಿದೆ. ಧಾರ್ಮಿಕ ಕೇಂದ್ರಗಳಿಗೆ ಭೇಟಿ ಮತ್ತು ಕುಟುಂಬದ ಜವಾಬ್ದಾರಿ ಹೆಚ್ಚಾಗಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ.
shivamogga Today Horoscope 28 January 2026
ಕರ್ಕಾಟಕ | ಕುಟುಂಬದಲ್ಲಿ ಸುಖ ಶಾಂತಿ, ಆರ್ಥಿಕವಾಗಿ ಪ್ರಗತಿ. ಹೊಸ ಯೋಜನೆಗ ಕೈಗೆತ್ತಿಕೊಳ್ಳಲಿದ್ದು, ದೇವಸ್ಥಾನಗಳಿಗೆ ಭೇಟಿ ನೀಡುವಿರಿ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ಸಾಹದಾಯಕ ದಿನ
ಸಿಂಹ | ಹೊಸ ವ್ಯಕ್ತಿಗಳ ಪರಿಚಯ, ಸಮಾಜ ಸೇವೆಯಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಬಾಕಿ ಹಣ ವಸೂಲಾಗಲಿದ್ದು, ವಾಹನ ಅಥವಾ ವಸ್ತುಗಳ ಲಾಭವಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶ ಸಿಗಲಿದೆ
ಕನ್ಯಾ | ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು ಮತ್ತು ಆರ್ಥಿಕ ಸ್ಥಿತಿ ಅಸ್ಥಿರವಾಗಿರಲಿದೆ. ಮಾತಿನ ಚಕಮಕಿ ಹಾಗೂ ಅನಾರೋಗ್ಯ. ಅನಿರೀಕ್ಷಿತ ಪ್ರಯಾಣ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ.
ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆಗೆ ಸಿದ್ಧತೆ, ಅಮ್ಮನವರ ವಿಸರ್ಜನಾ ಮೂರ್ತಿ ಕೆತ್ತನೆ ಕಾರ್ಯಕ್ಕೆ ಚಾಲನೆ
ತುಲಾ | ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ. ಹೊಸ ಜವಾಬ್ದಾರಿ, ಪ್ರಯಾಣ ಮುಂದೂಡಬೇಕಾಗಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲವಿರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ.
ವೃಶ್ಚಿಕ | ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು, ಶುಭ ವಾರ್ತೆ ಕೇಳಲಿದ್ದೀರಿ. ಆಸ್ತಿ ಖರೀದಿ, ಹಿತೈಷಿಗಳಿಂದ ಹಣಕಾಸಿನ ನೆರವು ಸಿಗಲಿದೆ. ವ್ಯಾಪಾರದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಮುನ್ನಡೆ.
ಧನು | ಹೊಸ ಕಾರ್ಯ ಆರಂಭಿಸಲಿದ್ದು, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಪರ ಬದಲಾವಣೆ.

ಮಕರ | ಕುಟುಂಬದಲ್ಲಿ ಒತ್ತಡ, ದೂರ ಪ್ರಯಾಣ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ ಹಾಗೂ ಕೆಲಸದಲ್ಲಿ ಅತಿಯಾದ ಶ್ರಮ ಮತ್ತು ಅವಸರ ಮಾಡಬೇಡಿ. ಉದ್ಯೋಗ ಮತ್ತು ವ್ಯವಹಾರ ಸಾಮಾನ್ಯವಾಗಿರಲಿವೆ.
ಕುಂಭ | ಸ್ನೇಹಿತರು ಮತ್ತು ಆಪ್ತರಿಂದ ಒತ್ತಡ ಮತ್ತು ಕೆಲಸಗಳಲ್ಲಿ ಅಡೆತಡೆ ಕಂಡುಬರಲಿವೆ. ಸಮಸ್ಯೆಗಳು ಎದುರಾಗಲಿದ್ದು, ದೈವ ದರ್ಶನದಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಉದ್ಯೋಗ ಮತ್ತು ವೃತ್ತಿ ಜೀವನದಲ್ಲಿ ಕೆಲವು ಇಕ್ಕಟ್ಟು ಕಾಣಿಸಿಕೊಳ್ಳಲಿವೆ.
ಮೀನ | ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಂಡುಬರಲಿದ್ದು, ಆಸ್ತಿ ಖರೀದಿಸುವ ಯೋಗವಿದೆ. ಆಪ್ತರಿಂದ ಸಹಕಾರ ಮತ್ತು ಪ್ರಮುಖ ವ್ಯಕ್ತಿಗಳ ಒಡನಾಟ ದೊರೆಯಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಇದ್ದ ತೊಂದರೆ ನಿವಾರಣೆಯಾಗಲಿದೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
ಇಂದಿನ ರಾಶಿಫಲ: 28 ಜನವರಿ 2026ರ ದ್ವಾದಶ ರಾಶಿಗಳ ಭವಿಷ್ಯ ಮತ್ತು ಪಂಚಾಂಗ – Malenadu Today
shivamogga Today Horoscope 28 January 2026 Daily Astrology and Panchanga Details – Malenadu Today

