Shivamogga Shocking incident : ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದೊಳಗೆ ಖೈದಿಯೊಬ್ಬರಿಗೆ ಬಾಕ್ಸ್‌ನಲ್ಲಿ ಸ್ವೀಟ್ ತೆಗೆದುಕೊಂಡು ಹೋಗಿದ್ದವರನ್ನ ಅಲ್ಲಿನ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ತಪಾಸಣೆ ವೇಳೆ ಸ್ವೀಟ್ ಬಾಕ್ಸ್‌ನಲ್ಲಿ ಗಾಂಜಾ ಪತ್ತೆಯಾಗಿರುವುದು ಇದಕ್ಕೆ ಕಾರಣ. ಸೋಮಿನಕೊಪ್ಪ ನಿವಾಸಿಯಾದ ಸೈಯದ್ ವಾಸಿಂ (25) ಬಂಧಿತ ಆರೋಪಿ.
ಮೆಹಬೂಬ್ ಖಾನ್ ಎಂಬ ಕೈದಿಯ ಭೇಟಿಗೆ ಬಂದಿದ್ದ ಈತ ,ಬೇಕರಿಯಿಂದ ತಂದಿದ್ದ ಸಿಹಿ ಖಾದ್ಯದ ಬಾಕ್ಸ್‌ನಲ್ಲಿ ಗಾಂಜಾವನ್ನು ಬಚ್ಚಿಟ್ಟಿದ್ದ. ಆದರೆ, ಜೈಲಿನ ಮುಖ್ಯ ದ್ವಾರದಲ್ಲಿಯೇ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ಕಾರಾಗೃಹ ಇಲಾಖೆ ಅಧಿಕಾರಿಗಳು ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಯುವತಿಯ ಕೊರಳಿಂದ ಚಿನ್ನದ ಸರ ಎಗರಿಸಿದ ಕಳ್ಳರು
ನಗರದ ಶಾರದ ನಗರ ಬಡಾವಣೆಯಲ್ಲಿ, ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಹೋದ ಬಗ್ಗೆ ಕಂಪ್ಲೆಂಟ್ ದಾಖಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯ ಲಿಮಿಟ್ನಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಕಾರ,. ಸಂಘದ ಹಣವನ್ನು ಕಟ್ಟುವ ಉದ್ದೇಶದಿಂದ ಯುವತಿಯು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಳ್ಳರು ಯುವತಿಯನ್ನು ಹಿಂಬಾಲಿಸಿ ಬಂದು, ಅವಳ ಕುತ್ತಿಗೆಯಲ್ಲಿದ್ದ ಸುಮಾರು 9 ಗ್ರಾಂ ಮೌಲ್ಯದ ಚಿನ್ನದ ಸರವನ್ನು ತಕ್ಷಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿಯೇ ಎಸ್ಐಟಿಯಿಂದ ಚಿನ್ನಯ್ಯ ನ ವಿಚಾರಣೆ, ಕಾರಣ..?

ಅಕ್ಸಾಲುಕೊಪ್ಪದಲ್ಲಿ ಐದು ತಿಂಗಳ ಬಾಣಂತಿ ಆತ್ಮಹತ್ಯೆ
ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಕ್ಸಾಲುಕೊಪ್ಪ ಮಜರೆ ಗ್ರಾಮದಲ್ಲಿ ಐದು ತಿಂಗಳ ಗಂಡು ಮಗುವಿನ ತಾಯಿ ರಮ್ಯಾ (28) ಎಂಬುವವರು ವಿಷ ಸೇವಿಸಿ ಶುಕ್ರವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಕುಡಿದಿರುವ ವಿಷಯ ತಿಳಿಯುತ್ತಲೇ ಬಾಣಂತಿಯನ್ನು ತಕ್ಷಣವೇ ಅವರನ್ನು ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೆಚ್ಚಿನ ಮತ್ತು ಸೂಕ್ತ ಚಿಕಿತ್ಸೆಗಾಗಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಮೂಲತಃ ಬಾಳೆಹೊನ್ನೂರಿನವರಾದ ರಮ್ಯಾ ಅವರು ನಾಲ್ಕು ವರ್ಷಗಳ ಹಿಂದೆ ಅಕ್ಸಾಲುಕೊಪ್ಪದ ಮಣಿಕಂಠ ಎಂಬುವವರೊಂದಿಗೆ ವಿವಾಹವಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಸಾಗರದಲ್ಲಿ ಕರ್ತವ್ಯನಿರತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೃದಯಾಘಾತದಿಂದ ಸಾವು
