ಮನೆಗೆ ಬೀಗ ಹಾಕುವ ಮುನ್ನ ಇರಲಿ ಎಚ್ಚರ, ಇಂತಹ ಮನೆಗಳೇ ಕಳ್ಳರ ಟಾರ್ಗೇಟ್

ಶಿವಮೊಗ್ಗ | ಶಿವಮೊಗ್ಗ ನಗರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸರಣಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ನಾಗರಿಕರು  ಭಯದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ವಿವೇಕಾನಂದ ಬಡಾವಣೆಯ ನಿವಾಸಿಯೊಬ್ಬರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕಳ್ಳರು ದೋಚಿದ್ದಾರೆ. 

Shivamogga Robbery 15 Lakh Looted in Vivekananda Layout  
15 Lakh Looted in Vivekananda Layout  

ಮನೆ ಮಾಲೀಕರು ಶಿವಮೊಗ್ಗದಲ್ಲಿದ್ದಾಗ ಆನವಟ್ಟಿಯಲ್ಲಿ ನಡೀತು ಈ ಘಟನೆ

ವಿಜಯಲಕ್ಷ್ಮಿ ಎಂಬುವರ ಮನೆಯ ಬೀಗ ಒಡೆದು ಒಳನುಗ್ಗಿದ ಖದೀಮರ ಗ್ಯಾಂಗ್, ಬರೋಬ್ಬರಿ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಲೂಟಿ ಮಾಡಿದೆ. ಮನೆಯಲ್ಲಿ ಯಾರು ಇಲ್ಲದ ಸಮಯವನ್ನೇ ಹೊಂಚು ಹಾಕಿದ್ದ ಕಳ್ಳರು ಕಳ್ಳತನ ಎಸಗಿದ್ದಾರೆ.

Shivamogga Robbery ದುರಂತವೆಂದರೆ, ಸಂತ್ರಸ್ತ ವಿಜಯಲಕ್ಷ್ಮಿ ಅವರು ಇತ್ತೀಚೆಗಷ್ಟೇ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಇದೇ ದುಃಖದಲ್ಲಿದ್ದ ಅವರು ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಈ ಕೃತ್ಯವೆಸಗಿದ್ದಾರೆ. ಕೇವಲ ಮನೆಯನ್ನಷ್ಟೇ ಲೂಟಿ ಮಾಡದ ಕಳ್ಳರು, ಪಕ್ಕದ ಮನೆಯ ಬೈಕ್ ಅನ್ನು ಸಹ ಕದ್ದಿದ್ದಾರೆ. ಬೈಕನ್ನು ಸ್ವಲ್ಪ ದೂರದವರೆಗೆ ತಳ್ಳಿಕೊಂಡು ಹೋಗಿ, ಬಳಿಕ ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ

Shivamogga Robbery ಇನ್ನೂ ಪೊಲೀಸ್​ ಮೂಲಗಳ ಪ್ರಕಾರ ಈ ಕಳ್ಳರು ಯಾರು ಮನೆಗೆ ಬೀಗ ಹಾಕಿರುತ್ತಾರೆಯೋ ಅವರ ಮನೆಗಳನ್ನೇ ಟಾರ್ಗೇಟ್​ ಮಾಡಿ ಕಳ್ಳತನ ಮಾಡುತ್ತಾರೆ. ಮನೆಯವರು ಬೀಗ ಹಾಕಿದಾಗ ಮಾತ್ರ ಅವರು ಮನೆ ಬಿಟ್ಟು ಬೇರೆಡೆಗೆ ಹೋಗಿದ್ದಾರೆ ಎಂದು ಕಳ್ಳರು ಅಂತಹ ಮನೆಗಳಲ್ಲಿ ಹೆಚ್ಚಾಗಿ ಕಳ್ಳತನ ಮಾಡುತ್ತಿದ್ದಾರೆ. ಇದೇ ಕಳ್ಳರು ಇನ್ನೆರಡು ಮನೆಯಲ್ಲೂ ಕಳ್ಳತನ ಮಾಡಲು ತೆರಳಿದ್ದು, ಅಲ್ಲಿ ಕಳ್ಳತನ ಮಾಡಲು ಸಾದ್ಯವಾಗದೆ ಹಿಂದಿರುಗಿದ್ದಾರೆ. ಎಂದು ಮಾಹಿತಿ ನೀಡಿದ್ದಾರೆ. 

ಮೊಬೈಲ್ ಕಳೆದುಹೋಗಿದೆಯೇ? ಈಗ ರಪ್ಪಾ ಸಿಗ್ತದೆ ಫೋನ್​! ಹೀಗಿದೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆ

Shivamogga Robbery 15 Lakh Looted in Vivekananda Layout  
Shivamogga Robbery 15 Lakh Looted in Vivekananda Layout  

Shivamogga Robbery 15 Lakh Looted in Vivekananda Layout