shivamogga :  ಮಂಜುನಾಥ್ ಮನೆಗೆ ಸಾಂತ್ವನ ಹೇಳಲು ಬಂದ 103 ವರ್ಷದ ಅಜ್ಜಿ | ಮೋದಿ ಬಳಿ ಮಾಡಿದ ಮನವಿಯೇನು

prathapa thirthahalli
Prathapa thirthahalli - content producer

shivamogga : ಶಿವಮೊಗ್ಗ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ ರವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಈ ಹಿನ್ನಲೆ ಮಂಜುನಾಥ್ ಕುಟುಂಬಕ್ಕೆ ಸಾಂತ್ವನ ಹೇಳಲು ವಿವಿಧ ರಾಜಕಾರಣಿಗಳು ಸೇರಿದಂತೆ ಪ್ರಮುಖರು ಭಾಗವಹಿಸುತ್ತಿದ್ದಾರೆ. ಇದರ ನಡುವೆ ಅಚ್ಚರಿ ಎಂಬಂತೆ 103 ವರ್ಷದ ಅಜ್ಜಿಯೊಬ್ಬರು ತುಮಕೂರಿನ ತಿಪಟೂರಿನಿಂದ ಮಂಜುನಾಥ್ ರಾವ್ ರವರ ಕುಟುಂಬಕ್ಕೆ ಸಾಂತ್ವನ ತಿಳಿಸಲು ಬಂದಿದ್ದಾರೆ.

shivamogga : ತುಮಕೂರಿನಿಂದ ಬಸ್ಸಿನಲ್ಲಿ ಬಂದ ಅಜ್ಜಿ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಆದ ಉಗ್ರರ ಗುಂಡಿನ ದಾಳಿಯನ್ನು  ಟಿವಿಯಲ್ಲಿ ನೋಡಿದ 103 ವರ್ಷದ ಶಿವಮ್ಮ  ಅಜ್ಜಿ ಮಂಗಳವಾರ ತುಮಕೂರಿನ ತಿಪಟೂರಿನಿಂದ ಬಸ್ಸಿನಲ್ಲಿ ಶಿವಮೊಗಕ್ಕೆ ಆಗಮಿಸಿದ್ದಾರೆ. ನಂತರ ಮಂಜುನಾಥ್​ ಪತ್ನಿ ಪಲ್ಲವಿಯವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. 

ಈ ಕುರಿತು ಮಾತನಾಡಿದ ಅಜ್ಜಿ  ಸೈನಿಕರಿಗೆ ಬಲ ನೀಡಲು ಅಲ್ಲಿಂದ ಬಂದಿದ್ದೇನೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು  ಪಾಕಿಸ್ತಾನವನ್ನು ಸುಟ್ಟು ಹಾಕಬೇಕು. ಇಂದು ಈ ರೀತಿ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಿದರೆ ಏನು ಗತಿ. ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಿ  ಎಂದು ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ‌

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಂಜುನಾಥ್ ಪತ್ನಿ ಪಲ್ಲವಿ. ಈ ದುಃಖದ ಸಂದರ್ಭದಲ್ಲಿ ಆ ಅಜ್ಜಿ 103 ವರ್ಷದ ಅಜ್ಜಿ ಅಲ್ಲಿಂದ ಬಂದು ಸಾಂತ್ವನ ಹೇಳಿದಾಗ ಏನು ಹೇಳಬೇಕೆಂದು ತಿಳಿಯಲಿಲ್ಲ ಎಂದರು.

 

TAGGED:
Share This Article