shivamogga central jail : ಶಿವಮೊಗ್ಗ ಸೆಂಟ್ರಲ್​ ಜೈಲ್ ಮೇಲೆ ಪೊಲೀಸ್ ದಾಳಿ!

ಹಂಚಿಕೊಳ್ಳಿ
WhatsApp Facebook X Telegram
Shivamogga Jail Security shivamogga central jail
Shivamogga Jail Security shivamogga central jail raid by shivamogga police

ಶಿವಮೊಗ್ಗ ಪೊಲೀಸ್ ಇಲಾಖೆ ಇವತ್ತು ಇದ್ದಕ್ಕಿದ್ದಂತೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದೆ. ಇವತ್ತು ಮಧ್ಯಾಹ್ನ ಅಡಿಷನಲ್​ ಎಸ್​ಪಿ ನೇತೃತ್ವದಲ್ಲಿ ದಾಳಿ ನಡೆದಿದೆ. ಸೋಗಾನೆಯಲ್ಲಿರುವ ಶಿವಮೊಗ್ಗ ಕೇಂದ್ರ ಕಾರಾಗೃಹದ  ( shivamogga  jail )ಮೇಲೆ ಪೊಲೀಸ್ ಇಲಾಖೆ ಇವತ್ತು ಮಧ್ಯಾಹ್ನ 2.20 ರ ಸುಮಾರಿಗೆ ದಾಳಿ ಮಾಡಿದೆ. ಸುಮಾರು ಎರಡು ಗಂಟೆಗಳ ಕಾಲ, ಕಾರಾಗೃಹದೆಲ್ಲೆಡೆ ಶೋಧ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ 4.20 ರ ಸುಮಾರಿಗೆ ರೇಡ್ ಮುಗಿಸಿ ಶಿವಮೊಗ್ಗ ಜೈಲ್​ನಿಂದ ಹೊರಕ್ಕೆ ಬಂದಿದೆ.

shivamogga central jail
shivamogga central jail old image

shivamogga central jail / ಶಿವಮೊಗ್ಗ ಕೇಂದ್ರ ಕಾರಾಗೃಹ

ಒಟ್ಟು ಐವತ್ತೈದು ಸಿಬ್ಬಂದಿಯನ್ನು ಹೊಂದಿದ್ದ ಪೊಲೀಸ್ ಟೀಂಗೆ ಅಡಿಷನಲ್ ಎಸ್​ಪಿಯವರ ನೇತೃತ್ವವಿತ್ತು. ಇನ್ನು ಈ ಟೀಂನಲ್ಲಿ ಇಬ್ಬರು ಡಿವೈಎಸ್​ಪಿ, ನಾಲ್ವರು ಸಿಪಿಐ, 8 ಪಿಎಸ್​ಐ ಸಹ ಇದ್ದರು. ಮಲೆನಾಡು ಟುಡೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಇದೊಂದು ರೊಟಿನ್​ ರೇಡ್ ಆಗಿದ್ದು, ಪೊಲೀಸರ ದಾಳಿಯ ಸಂದರ್ಭದಲ್ಲಿ ಯಾವುದೇ ಕಾನೂನು ಬಾಹಿರ ವಸ್ತುಗಳು ಲಭ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಆದಾಗ್ಯು ಈ ಕುರಿತಾಗಿ ಪೊಲೀಸ್ ಇಲಾಖೆಯಿಂದ ಇನ್ನಷ್ಟೆ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor