shivamogga premier league : IPL ರೀತಿ ಶುರವಾಗಲಿದೆ SPL | ಯಾವಾಗ, ಏನು, ಎತ್ತ,

ಹಂಚಿಕೊಳ್ಳಿ
WhatsApp Facebook X Telegram
shivamogga premier league
shivamogga premier league ಸುದ್ದಿಗೋಷ್ಠಿಯಲದಲಿ ಮಾಹಿತಿ ನಿಡಿದ ಡಿಎಸ್​ ಅರುಣ್​

shivamogga premier league : ಮೇ 1ರಿಂದ 4ರವರೆಗೆ ಶಿವಮೊಗ್ಗದ ನವುಲೆಯಲ್ಲಿರುವ ಕೆಎಸಿಎ ಮೈದಾನದಲ್ಲಿ ಶಿವಮೊಗ್ಗ ಪ್ರಿಮೀ ಯರ್ ಲೀಗ್ (ಎಪಿಎಲ್)ನ ಮೂರನೇ ಆವೃತ್ತಿಯನ್ನು ಆಯೋಜಿಸಲಾಗಿದೆ ಎಂದು ಕೆಎಸಿಎ ಸದಸ್ಯರಾಗಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ತಮ್ಮದೇ ಆದ ಮಾಲೀಕತ್ವದಡಿ ಪಾಲ್ಗೊಳ್ಳಲಿವೆ. ಪ್ರತಿದಿನ ಎರಡು ಪಂದ್ಯಗಳು ಕೆಎಸಿಎ 1 ಮತ್ತು 2ನೇ ಮೈದಾನದಲ್ಲಿ ಬೆಳಗ್ಗೆ 9.30 ರಿಂದ 12.30 ರವರೆಗೆ ಮೊದಲ ಪಂದ್ಯ ಹಾಗೂ 1.30ರಿಂದ 4.30 ರವರೆಗೆ 2ನೇ ಪಂದ್ಯ ನಡೆಯಲಿದೆ. ಈ ಪಂದ್ಯಾವಳಿಗೆ ಏಪ್ರಿಲ್ 11 ರಂದು ಶಿವಮೊಗ್ಗದ ಕಂಟ್ರಿ ಕ್ಲಬ್‌ನಲ್ಲಿ ಪಾಯಿಂಟ್ಸ್ ಆಧಾರದ ಮೇಲೆ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಒಟ್ಟು 168 ಆಟಗಾರರು ಹರಾಜಿನಲ್ಲಿ ಭಾಗವಹಿಸಿ 140 ಆಟಗಾರರು ವಿವಿಧ ತಂಡಗಳಿಗೆ ಆಯ್ಕೆಯಾಗಿದ್ದಾರೆ ಎಂದರು.

shivamogga premier league : 20 ಓವರ್​ನ ಪಂದ್ಯ

ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್‌ ನೇತೃತ್ವದಲ್ಲಿ ಮಾಸ್ಟರ್ ಕನ್ಸಲೆನ್ಸಿ ಸರ್ವಿಸಸ್, ನಾರಾಯಣ ಹೆಲ್ತ್, ಮಲ್ನಾಡ್ ಅಲಾಯ್ ಕಾಸ್ಟಿಂಗ್ ಪ್ರೈ. ಲಿ. ಮತ್ತು ಇತರ ಪ್ರಮುಖ ಸಹಕಾರದೊಂದಿಗೆ ಪ್ರಾಯೋಜಕರ ಈ ಪಂದ್ಯಾವಳಿ ಆಯೋಜಿಸಲಾಗಿದೆ. ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್. ಟಿಪ್‌ಟಾಪ್ ಬೈಸನ್ಸ್, ಕಲ್ಯಾಣಿ ಶಿವಮೊಗ್ಗ ಬ್ಲಾಸ್ಟರ್ಸ್, ಸಿರಿ ಸಮೃದ್ಧಿ ಮಾಸ್ಟರ್ ಬ್ಲಿಸ್, ಸಹ್ಯಾದ್ರಿ ಸೈಕರ್ಸ್, ಮೈಟಿ ಟಸ್ಕರ್ಸ್, ದಿ ವಾಲ್ ಸಿಸಿ ಭದ್ರಾವತಿ. ಹಾಗೂ ತುಂಗಾತಂಡರ್ಸ್ ಮಾಲೀಕತ್ವದ ತಂಡಗಳು ಭಾಗವಹಿಸುತ್ತಿವೆ ಎಂದ ಅವರು, ಬಿಳಿ ಬಣ್ಣದ ಲೆದರ್ ಬಾಲ್ ನಲ್ಲಿ 20 ಓವರ್‌ನ ಪಂದ್ಯ ಇದಾಗಿದ್ದು, ಕಲರ್ ಡ್ರೆಸ್ ನಲ್ಲಿ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು. 

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor