ಶಿವಮೊಗ್ಗ ಡೈಲಿ ನ್ಯೂಸ್|ಜೈಲಲ್ಲಿ ಹೊಡೆದಾಟ! ಅಸಲಿಗೆ ನಡೆದಿದ್ದೇನು? ಆನಂದಪುರದಲ್ಲಿ ಮಹಿಳೆ ಸಾವು! ರಿಪ್ಪನ್​ ಪೇಟೆಯಲ್ಲಿ ನೀರು ಹಾಯಿಸಲು ಹೋದವ ಶವವಾಗಿ ಮರಳಿದ

Shimoga News  | ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನ ಸಂಕ್ಷಿಪ್ತವಾಗಿ ವಿವರಿಸುವ ಇವತ್ತಿನ ಶಿವಮೊಗ್ಗ ರೌಂಡ್ ಅಪ್​ ನ್ಯೂಸ್​ ಇಲ್ಲಿದೆ. ಶಿವಮೊಗ್ಗದಲ್ಲಿ ನಿನ್ನೆದಿನದ ಪ್ರಮುಖ ಮೂರು ಘಟನೆಯ ಬಗ್ಗೆ ವರದಿಯಾಗಿದೆ. ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಎರಡು ಗುಂಪುಗಳ ನಡುವೆ ಹೊಡೆದಾಡಿಕೊಂಡಿರುವ ಬಗ್ಗೆ ಎಫ್​ಐಆರ್ ದಾಖಲಾಗಿದ್ದು, ಜೈಲಿನ ಅಧಿಕಾರಿಗಳು ದೂರು ಕೊಟ್ಟಿರುವ ಹಿನ್ನೆಲೆಯಲ್ಲಿ ವಿಷಯ ವರದಿಯಾಗಿದೆ. ಇನ್ನೊಂದೆಡೆ ಸಾಗರ ಹಾಗೂ ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಹಾವು ಕಚ್ಚಿ ಮಹಿಳೆಯೊಬ್ಬರು ಹಾಗೂ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. 

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಹೊಡೆದಾಟ

ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಹೊಡೆದಾಟವಾಗಿದೆ. ಜೈಲಿನ ಶರಾವತಿ ವಿಭಾಗದಲ್ಲಿರುವ ಕೈದಿ ಸೊಹೈಲ್ ಅಹ್ಮದ್ ಮತ್ತು ಮೊಹ್ಮದ್ ಜುನೈದ್ ಟವರ್ ವಿಭಾಗದ ಬಳಿ ಅನ್ವರ್ ಎಂಬಾತನೊಂದಿಗೆ ಕಿರಿಕ್​ ತೆಗೆದಿದ್ದಾರೆ. ಆನಂತರ ಕೈದಿ ಅನ್ವರ್ ಮತ್ತು ಆತನ ಸಹಚರರು ಭದ್ರಾ ವಿಭಾಗದ ಕೊಠಡಿಗೆ ನುಗ್ಗಿ ಸೊಹೈಲ್ ಮತ್ತು ಜುನೈದ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡವರನ್ನು ಕಾರಾಗೃಹದ ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿಯೂ ತನ್ವೀರ್, ಅನ್ವರ್, ಸೈಯದ್ ಇಷಾಖ್ ಹಾಗೂ ವಸೀಂ ಅಕ್ರಂ ಆಸ್ಪತ್ರೆಯ ಬಾಗಿಲ ಬಳಿ ಬಂದು ದಾಂಧಲೆ ನಡೆಸಲು ಯತ್ನಿಸಿದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಜೈಲಿನ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಕಾರಾಗೃಹದಲ್ಲಿ ಹೊಡೆದಾಡಿದ ಆರೋಪದ ಅಡಿಯಲ್ಲಿ ಅಧೀಕ್ಷಕಿ ಪ್ರೀತಿ ಆರ್ ನೀಡಿದ ದೂರಿನನ್ವಯ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ. 

ಶಿವಮೊಗ್ಗ ಸುದ್ದಿ: ಜೈಲಿನಲ್ಲಿ ಕೈದಿಗಳ ಬಡಿದಾಟ, ಸಾಗರದಲ್ಲಿ ಹಾವು ಕಚ್ಚಿ ಮಹಿಳೆ ಸಾವು, Shimoga News Prisoners Clash in Central Jail, Snake Bite Death in Sagar and Heart Attack in Ripponpet
ಶಿವಮೊಗ್ಗ ಸುದ್ದಿ: ಜೈಲಿನಲ್ಲಿ ಕೈದಿಗಳ ಬಡಿದಾಟ, ಸಾಗರದಲ್ಲಿ ಹಾವು ಕಚ್ಚಿ ಮಹಿಳೆ ಸಾವು, Shimoga News Prisoners Clash in Central Jail, Snake Bite Death in Sagar and Heart Attack in Ripponpet

ಶಿವಮೊಗ್ಗ ಸುದ್ದಿ ರೌಂಡ್ಸ್​ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್​ ಕುಮಾರ್|ಕಾಶಿಪುರ ಗೇಟ್​ ಬಳಿ ವೃದ್ಧನ ಸಾವು!

ಹಾವು ಕಚ್ಚಿ ಆನಂದಪುರದಲ್ಲಿ ಮಹಿಳೆ ಸಾವು

ಸಾಗರ ತಾಲೂಕಿನ ಆನಂದಪುರ ಹೋಬಳಿಯ ಬಳ್ಳಿಬೈಲು ಗ್ರಾಮದಲ್ಲಿ ಹಾವು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಪುಟ್ಟಪ್ಪ ಅವರ ಪತ್ನಿ 65 ವರ್ಷದ ಲಕ್ಷ್ಮಮ್ಮ ಎಂದು ಗುರುತಿಸಲಾಗಿದ್ದು, ಇವರು ತಮ್ಮ ಜಮೀನಿಗೆ ಗೊಬ್ಬರ ಹಾಕುವ ಕೆಲಸದಲ್ಲಿ ನಿರತರಾಗಿದ್ದಾಗ ಹಾವು ಕಚ್ಚಿದೆ. ತಕ್ಷಣವೇ ಅವರನ್ನು ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. 

ಶಿವಮೊಗ್ಗ ಮಾರುಕಟ್ಟೆಯಲ್ಲಿ ಏರಿದ ಅಡಿಕೆ ದರ! ಶಿವಮೊಗ್ಗದಿಂದ ಶಿರಸಿಯವರೆಗೆ, ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ಧಾರಣೆ ವಿವರ

ರಿಪ್ಪನ್​ಪೇಟೆಯಲ್ಲಿ ವ್ಯಕ್ತಿ ಸಾವು

ರಿಪ್ಪನ್‌ಪೇಟೆ ಸಮೀಪದ ಕೊಡೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತೋಟದಲ್ಲಿ ಕೆಲಸ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೊಡೂರು ಗ್ರಾಮದ ನಿವಾಸಿ ಶ್ರೀನಿವಾಸ್ ಭಟ್ಟರ ಪುತ್ರ 41 ವರ್ಷದ ರಾಮ್‌ ಪ್ರಸಾದ್ ಮೃತ ದುರ್ದೈವಿ. ಇವರು ತಮ್ಮ ತೋಟಕ್ಕೆ ನೀರು ಹಾಯಿಸಲು ತೆರಳಿದ್ದರು. ತಿಂಡಿ ಸಮಯವಾದರೂ ಮಗ ಮನೆಗೆ ಬಾರದಿರುವುದನ್ನು ಗಮನಿಸಿದ ತಂದೆ ತೋಟಕ್ಕೆ ಹೋಗಿ ನೋಡಿದಾಗ ರಾಮ್ ಪ್ರಸಾದ್ ಕುಸಿದು ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ನೆರೆಹೊರೆಯವರ ಸಹಾಯದಿಂದ ಅವರನ್ನು ಮನೆಗೆ ಕರೆತಂದು ಉಪಚರಿಸುವ ಪ್ರಯತ್ನ ಮಾಡಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು. 

ಶಿವಮೊಗ್ಗ ಸುದ್ದಿ: ಜೈಲಿನಲ್ಲಿ ಕೈದಿಗಳ ಬಡಿದಾಟ, ಸಾಗರದಲ್ಲಿ ಹಾವು ಕಚ್ಚಿ ಮಹಿಳೆ ಸಾವು, Shimoga News Prisoners Clash in Central Jail, Snake Bite Death in Sagar and Heart Attack in Ripponpet
ಶಿವಮೊಗ್ಗ ಸುದ್ದಿ: ಜೈಲಿನಲ್ಲಿ ಕೈದಿಗಳ ಬಡಿದಾಟ, ಸಾಗರದಲ್ಲಿ ಹಾವು ಕಚ್ಚಿ ಮಹಿಳೆ ಸಾವು, Shimoga News Prisoners Clash in Central Jail, Snake Bite Death in Sagar and Heart Attack in Ripponpet

ಶಿವಮೊಗ್ಗದಲ್ಲಿ  ಬೆಳ್ಳಿ 3 ಲಕ್ಷ! ಬಂಗಾರ 1.5 ಲಕ್ಷ! ಬಾನಿಗೇರಿದ ಬೆಲೆ, ಬಸವಳಿದ ಗ್ರಾಹಕ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಶಿವಮೊಗ್ಗ ಸುದ್ದಿ: ಜೈಲಿನಲ್ಲಿ ಕೈದಿಗಳ ಬಡಿದಾಟ, ಸಾಗರದಲ್ಲಿ ಹಾವು ಕಚ್ಚಿ ಮಹಿಳೆ ಸಾವು, Shimoga News Prisoners Clash in Central Jail, Snake Bite Death in Sagar and Heart Attack in Ripponpet