ಹೆಚ್ಚಿನ ಲಾಭಾಂಶ ನೀಡುತ್ತೇವೆಂದು ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 6.99 ಲಕ್ಷ ರೂಪಾಯಿ ಹಣವನ್ನು ವಂಚಿಸಿರುವ ಘಟನೆ ನಡೆದಿದೆ. ಈ ಹಿನ್ನೆಲೆ ಶಿವಮೊಗ್ಗದ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಮಾಲೀಕರು ಶಿವಮೊಗ್ಗದಲ್ಲಿದ್ದಾಗ ಆನವಟ್ಟಿಯಲ್ಲಿ ನಡೀತು ಈ ಘಟನೆ
Shimoga Investment Scam ಪ್ರಕರಣದ ಹಿನ್ನೆಲೆ
ದೂರುದಾರರು ಜುಲೈ 2025 ರಲ್ಲಿ ಗೂಗಲ್‌ನಲ್ಲಿ LF Workಎಂಬ ಕಂಪನಿಯ ಶೇರು ಹೂಡಿಕೆಯ ಬಗ್ಗೆ ಮಾಹಿತಿ ಪಡೆದಿದ್ದರು. ಹೂಡಿಕೆ ಮಾಡಿದ ಕೇವಲ ಹತ್ತು ದಿನಗಳಲ್ಲಿ ಶೇ.50 ರಷ್ಟು ಲಾಭಾಂಶ ನೀಡುವುದಾಗಿ ಕಂಪನಿ ನಂಬಿಸಿತ್ತು. ಇದನ್ನು ನಂಬಿದ ದೂರುದಾರರು, ಕಂಪನಿಯ ವೆಬ್‌ಸೈಟ್‌ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ನೀಡಿ ಐಡಿ ಕ್ರಿಯೇಟ್ ಮಾಡಿಕೊಂಡಿದ್ದರು.
ನಂತರ ಕಂಪನಿಯ ಸೂಚನೆಯಂತೆ ಶೇರುಗಳನ್ನು ಖರೀದಿಸಲು ಆ್ಯಪ್‌ನಲ್ಲಿ ನೀಡಲಾಗಿದ್ದ ಕ್ಯೂಆರ್ ಕೋಡ್ ಮೂಲಕ ಹಂತ ಹಂತವಾಗಿ ಹಣ ಪಾವತಿಸಿದ್ದಾರೆ. ಜುಲೈ 2024 ರಿಂದ ನವೆಂಬರ್ 2025 ರ ಅವಧಿಯಲ್ಲಿ ದೂರುದಾರರು ಒಟ್ಟು 6,99,310 ರೂ. ಹಣವನ್ನು ವರ್ಗಾಯಿಸಿದ್ದಾರೆ (Transaction). ಈ ಎಲ್ಲಾ ವ್ಯವಹಾರದ ಮಾಹಿತಿಯನ್ನು ವಾಟ್ಸ್‌ಆಪ್ ಸಂಖ್ಯೆಯೊಂದಕ್ಕೆ ರವಾನಿಸುತ್ತಿದ್ದರು.
ಕೆಲವು ದಿನಗಳ ನಂತರ ತಮ್ಮ ಖಾತೆಯಲ್ಲಿದ್ದ ಹಣವನ್ನು ವಿತ್‌ಡ್ರಾ (Withdraw) ಮಾಡಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಿಲ್ಲ. ಕಂಪನಿಯ ವೆಬ್‌ಸೈಟ್ ಕೂಡ ಓಪನ್ ಆಗದಿದ್ದಾಗ ತಾನು ಮೋಸ ಹೋಗಿರುವುದು ದೂರುದಾರರಿಗೆ ಅರಿವಾಗಿದೆ. ಈ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ದುರನ್ನು ದಾಖಲಿಸಿದ್ದಾರೆ.
Shimoga Investment Scam Man Loses 7 Lakhs

