ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ಕಾಂಗ್ರೆಸ್​ಗೆ ವಾಪಸ್​? ಮಂಡ್ಯದಲ್ಲಿ ಮೋದಿ ಭೇಟಿಗೂ ಮೊದಲೇ ರಾಜಕೀಯ ಸಂಚಲನ? ಏನಿದು

Shimoga district in-charge minister K.C. Narayana Gowda to return to Congress? Political turmoil ahead of MODI's visit in Mandya

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ಕಾಂಗ್ರೆಸ್​ಗೆ ವಾಪಸ್​? ಮಂಡ್ಯದಲ್ಲಿ ಮೋದಿ ಭೇಟಿಗೂ ಮೊದಲೇ ರಾಜಕೀಯ ಸಂಚಲನ? ಏನಿದು

ಶಿವಮೊಗ್ಗ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಕಾಂಗ್ರೆಸ್​ಗೆ ಪಕ್ಷಾಂತರ ಮಾಡ್ತಿದ್ಧಾರಾ? ಹೌದು ಎನ್ನುತ್ತಿದೆ ಮಂಡ್ಯ ಜಿಲ್ಲೆ. ಇದಕ್ಕೆ ಪೂರಕವಾಗುವಂತೆ ಉಸ್ತುವಾರಿ ಸಚಿವರ ಮಾತುಗಳು ಸಹ ಅದೇ ದಾಟಿಯಲ್ಲಿ ಕೇಳಿ ಬರುತ್ತಿದೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಸಚಿವ ನಾರಾಯಣಗೌಡ (kc narayana gowda) ಈ ಸಂಬಂಧ ಮಾತನಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಿಂದ ಆಹ್ವಾನ ಬಂದಿರೋದು ನಿಜ,  ಆದ್ರೆ ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದು ನಾರಾಯಣಗೌಡರು ಹೇಳಿದ್ಧಾರೆ ಎನ್ನಲಾಗಿದೆ. 

READ | Accident at Agumbe Ghat | ಆಗುಂಬೆ ಘಾಟಿಯಲ್ಲಿ ಅಪಘಾತ! 12 ನೇ ತಿರುವಿನಲ್ಲಿ ಬ್ರೇಕ್​ ಫೇಲ್​ ಆದ ಖಾಸಗಿ ಬಸ್! ಕೊಪ್ಪದಿಂದ, ಉಡುಪಿಗೆ ಹೋಗ್ತಿದ್ದವರಿಗೆ ಗಾಯ!

ಈ ವಿಚಾರದಲ್ಲಿ ಆಪ್ತರು ಹಾಗೂ ಹಿತೈಷಿಗಳ ಜೊತೆ ಚರ್ಚಿಸಿ ಅಭಿಪ್ರಾಯ ಕೇಳಬೇಕು, ಆನಂತರ ತೀರ್ಮಾನ ಕೈಗೊಳ್ಳಬೇಕು,  ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಒತ್ತಾಯವಿದೆ. ಕೆ.ಆರ್​ ಪೇಟೆಯಲ್ಲಿ ಕಾಂಗ್ರೆಸ್​ಗೆ ನಾಯಕತ್ವದ ಕೊರೆತೆ ಇದೆ ಎಂದು ನಾರಾಯಣಗೌಡರು ಹೇಳಿದ್ಧಾರೆ ಎನ್ನಲಾಗಿದೆ. ಇನ್ನೂ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರು ನಾರಾಯಣಗೌಡರನ್ನ ಸಂಪರ್ಕಿಸಿದ್ದಾರೆ ಎಂಬ ವದಂತಿ ಜೋರಾಗಿದೆ. ಇದರ ಬೆನ್ನಲ್ಲೆ ನಾರಾಯಣಗೌಡರು ಪ್ರತಿಕ್ರಿಯಿಸಿದ್ದು, ಮಂಡ್ಯದಲ್ಲಿ ಕೆಆರ್​ ಪೇಟೆಯಲ್ಲಿ ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಸುತ್ತಾರಾ ? ಎಂಬ ಮಾತುಗಳು ಕೇಳಿಬರುತ್ತಿದೆ. 

ಬಿಜೆಪಿಯಲ್ಲಿರುವ ನಾರಾಯಣಗೌಡರನ್ನ ಶಿವಮೊಗ್ಗ ಉಸ್ತುವಾರಿ ಮಾಡಲಾಗಿತ್ತು. ಅದಕ್ಕೂ ಮೊದಲು ಅವರು ಮಂಡ್ಯ ಜಿಲ್ಲೆಯ ಉಸ್ತುವಾರಿ ಆಗಿದ್ದರು. ಆದರೆ ಕ್ಷೇತ್ರದಲ್ಲಿ ಬಿಜೆಪಿ ಪರವಾದ ವಿಚಾರಗಳಲ್ಲಿ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು ಎಂಬ ವಾದವಿದೆ. ಆನಂತರದ ದಿನಗಳಲ್ಲಿ ಅವರಿಗೆ ಮತ್ತೆ ಮಂಡ್ಯ ಉಸ್ತುವಾರಿಯನ್ನು ನೀಡದಿರುವುದರ ಬಗ್ಗೆ ಶಿವಮೊಗ್ಗದಲ್ಲಿಯೇ ಸಚಿವರು ಮಾತನಾಡಿದ್ದರು, ಶಿವಮೊಗ್ಗದಲ್ಲಿ  ನಾನು ಮಾಡುವುದು ಏನೂ ಸಹ ಇಲ್ಲ, ಮಂಡ್ಯದಲ್ಲಿ ನನಗೆ ಸಾಕಷ್ಟು ಕೆಲಸಗಳಿವೆ ಎಂದಿದ್ದರು. ಇನ್ನೂ ಕ್ಷೇತ್ರದಲ್ಲಿ  ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೂ ಸಚಿವ ಸ್ಥಾನ ಸಿಗುವ ಭರವಸೆಯಿಲ್ಲ. ಮೇಲಾಗಿ ಮಂಡ್ಯದಲ್ಲಿನ ಸ್ಥಳೀಯ ವಾತಾವರಣ, ನಾರಾಯಣಗೌಡರನ್ನ ಕಾಂಗ್ರೆಸ್​ನತ್ತ ವಾಲಿಸ್ತಿದ್ಯಾ ಎಂಬ ಅನುಮಾನ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ನಾರಾಯಣಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸದ್ಯ ಈ ಮಾತುಗಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. 

READ |ಟ್ರೆಂಡು, ಫ್ಯಾಶನ್​, ಗತ್ತು , ಗಮತ್ತು ಅಂತಾ ಇಂತಹ ಕೆಲಸ ಮಾಡದಿರಿ! ಕೋರ್ಟ್​ನಿಂದಲೇ ಬೀಳುತ್ತೆ ದಂಡ! ಭದ್ರಾವತಿ ಯುವಕ ಕಟ್ಟಬೇಕಾಯ್ತು 6500 ಪೆನಾಲ್ಟಿ!

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga