ಪತಿಯಿಂದಲೇ ಪತ್ನಿ ಮತ್ತಾಕೆಯ ಪ್ರೇಮಿಯ ಕೊಲೆ! ವಡ್ಡಿನಕೊಪ್ಪ ಮರ್ಡರ್​ ಕೇಸ್​ ತೀರ್ಪು ಏನಾಯ್ತು ಗೊತ್ತಾ!?

Shimoga court has sentenced a man and his friends to life imprisonment for murdering his wife and her lover. ಶಿವಮೊಗ್ಗ ಕೋರ್ಟ್​, ಪತ್ನಿ ಹಾಗೂ ಆಕೆಯ ಪ್ರೇಮಿಯನ್ನು ಕೊಲೆ ಮಾಡಿದ ಪತಿ ಹಾಗೂ ಆತನ ಗೆಳಯರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಪತಿಯಿಂದಲೇ ಪತ್ನಿ ಮತ್ತಾಕೆಯ ಪ್ರೇಮಿಯ ಕೊಲೆ! ವಡ್ಡಿನಕೊಪ್ಪ ಮರ್ಡರ್​ ಕೇಸ್​ ತೀರ್ಪು ಏನಾಯ್ತು ಗೊತ್ತಾ!?

KARNATAKA NEWS/ ONLINE / Malenadu today/ Aug 10, 2023 SHIVAMOGGA NEWS

ಹೆಂಡತಿ ಹಾಗೂ ಆಕೆಯ ಪ್ರೇಮಿಯನ್ನು ಕೊಲೆ ಮಾಡಿದ ಗಂಡ ಮತ್ತು ಆತನ ಗೆಳೆಯರಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಮತ್ತು ತಲಾ ರೂ.1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

ಏನಿದು ಪ್ರಕರಣ?

ಶಿವಮೊಗ್ಗ ನಗರದ ವೆಂಕಟೇಶ್ವರ ನಗರದ ನಿವಾಸಿ ಕಾರ್ತಿಕ್​ ಎಂಬಾತ ರೇವತಿ ಎಂಬವರನ್ನ  ದಿನಾಂಕ: 04-09-2017 ರಂದು ಮದುವೆಯಾಗಿದ್ದರು. ತದನಂತೆ ದಾಂಪತ್ಯದಲ್ಲಿ ಬಿರುಕು ಉಂಟಾಗಿ, ರೇವತಿ ಮನೆಬಿಟ್ಟು ಹೋಗಿದ್ದರು. ಈ ವಿಚಾರವಾಗಿ ತನ್ನ ಪತ್ನಿ ಇನ್ನೊಬ್ಬನ ಜೊತೆ ಹೋಗಿದ್ದಾಳೆ ಎಂದು ಕಾರ್ತಿಕ್​ ಆರೋಪಿಸಿದ್ದ. 

ವಡ್ಡಿನಕೊಪ್ಪಕ್ಕೆ ಕರೆಸಿ ಮರ್ಡರ್​

ಇದೇ ಕಾರಣಕ್ಕೆ  ಕಾರ್ತಿಕ್​,  ತನ್ನ ಗೆಳೆಯರಾದ ಭರತ್ ವಿ, 23 ವರ್ಷ, ಸತೀಶ್ 26 ವರ್ಷ ಮತ್ತು  ಸಂದೀಪ 21 ವರ್ಷ ಸೇರಿಕೊಂಡು ತನ್ನ ಪತ್ನಿ ಮತ್ತು ವಿಜಯ ಎಂಬವರನ್ನ ವಡ್ಡಿನಕೊಪ್ಪಕ್ಕೆ ಕರೆಸಿಕೊಂಡು ಮಚ್ಚು, ಲಾಂಗು ಮತ್ತು ಕಲ್ಲಿನಿಂದ ಕೊಲೆ ಮಾಡಿದ್ದರು

ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ 

ಈ ಬಗ್ಗೆ ಶಿವಮೊಗ್ಗ ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖಾಧಿಕಾರಿ ಮಹಾಂತೇಶ್ ಬಿ ಹೊಳಿ, ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ರವರು ಶಿವಮೊಗ್ಗ ಕೋರ್ಟ್​ಗೆ ಚಾರ್ಜ್​ ಶೀಟ್​ ಸಲ್ಲಿಸಿದ್ದರು. 

ಕೋರ್ಟ್​ನಿಂದ ಹೊರಬಿತ್ತು ತೀರ್ಪು

ಪ್ರಕರಣವು ಶಿವಮೊಗ್ಗದ  3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ (In the 3rd Additional District and Sessions Court) ದಾಖಲಾಗಿ ವಿಚಾರಣೆ ನಡೆದು, ಆರೋಪಗಳು ದೃಢಪಟ್ಟಿದೆ. 

ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಆರೋಪಿತರಿಗೆ 1ನೇ ಮತ್ತು 3ನೇ ಅಪರ ಜಿಲ್ಲಾ ಮತ್ತು ನ್ಯಾಯಾಧೀಶರಾದ ಕೆ.ಎಸ್. ಮಾನು ರವರು ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಹಾಗೂ ತಲಾ ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಈ ಪ್ರಕರಣದ 3ನೇ ಆರೋಪಿ ಸತೀಶ್ ಬಿನ್ ಗೋವಿಂದರಾಜ ತಲೆಮರೆಸಿಕೊಂಡಿರುವುದರಿಂದ ಈತನನ್ನು ಪ್ರಕರಣದಿಂದ ಪ್ರತ್ಯೇಕಿಸಿ, ಪ್ರತ್ಯೇಕ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದು ಈತನ ಮೇಲಿನ ವಿಚಾರಣೆ ಬಾಕಿ ಉಳಿದಿದೆ. ಸರ್ಕಾರಿ ಅಭಿಯೋಜಕರಾದ ಜೆ.ಶಾಂತರಾಜ್ ಸರ್ಕಾರದ ಪರವಾಗಿ ಸಾಕ್ಷಿಗಳ ವಿಚಾರಣೆ ಮಾಡಿ ವಾದವನ್ನು ಮಂಡಿಸಿದ್ದರೆಂದು ಪ್ರಕಟಣೆ ತಿಳಿಸಲಾಗಿದೆ. 

 

ಇನ್ನಷ್ಟು ಸುದ್ದಿಗಳು



 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು