SHIVAMOGGA | Jan 17, 2024 | ಏಕವಚನದಲ್ಲಿ ಸಿಎಂಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದೂ ಅಲ್ಲದೇ, ಕೋಮು ಸಂಘಷಕ್ಕೆ ಪ್ರಚೋದನೆ ಹೇಳಿಕೆ ನೀಡಿರುವ ಸಂಸದ ಅನಂತ್‌ಕುಮಾರ್ ಹೆಗಡೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಯಿಂದ ಮಂಗಳವಾರ ಮಹಾವೀರ ವೃತ್ತದಲ್ಲಿ ಅನಂತ್ ಕುಮಾರ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಎಸ್.ಸುಂದರೇಶ್
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್.ಸುಂದರೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮುಂದೆ ಸಂಸದ ಅನಂತ್‌ಕುಮಾರ್‌ಹೆಗಡೆ ಬಚ್ಚ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಮನಸ್ಸು ಮಾಡಿದರೆ, ಅವರು ಓಡಾಡಲು ಆಗುವುದಿಲ್ಲ ಎಂದಿದ್ಧಾರೆ.
ಪ್ರಚೋದನಾತ್ಮಕ ಹೇಳಿಕೆ ನೀಡುತ್ತ ಜನರಲ್ಲಿ ಹಿಂಸಾ ಪ್ರವೃತ್ತಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ದೂರಿದ್ರು. ಅವರ ಕುಟುಂಬಸ್ಥರಾಗಲಿ, ಅವರಾಗಲಿ ಅಥವಾ ಈಶ್ವರಪ್ಪನವರ ಕುಟುಂಬದವರಾಗಲಿ ಎಂದು ಹೋರಾಟಕ್ಕೆ ಇಳಿದವರಲ್ಲ. ದಲಿತ ಹಿಂದುಳಿದ ಯುವಕರ ಕೈಯಲ್ಲಿ ಮಚ್ಚು ಲಾಂಗು ಹಿಡಿಯುವಂತೆ ಪ್ರಚೋದಿಸಿ ಹತ್ಯೆ ಮಾಡಿಸಿ ರಾಜಕೀಯ ಲಾಭ ಪಡೆಯುವ ದುರುದ್ದೇಶ ಅವರ ಹೇಳಿಕೆಯಲ್ಲಿ ಸ್ಪಷ್ಟವಾಗುತ್ತದೆ ಎಂದು ಟೀಕಿಸಿದ್ರು. ರಾಮ ಎಲ್ಲರಿಗೂಸೇರಿದವನು, ನಾವು ಕೂಡ ರಾಮನ ಭಕ್ತರೇ, ಆದರೆ, ಬಿಜೆಪಿಯವರ ಹಾಗೇ ಡೊಬ್ಲಿಕೇಟ್ ಭಕ್ತರಲ್ಲ ಎಂದು ಹರಿಹಾಯ್ದರು.
ಸಾಗರದಲ್ಲೂ ಪ್ರತಿಭಟನೆ
ಇನ್ನೂ ಈ ಸಂಬಂಧ ಸಾಗರ ತಾಲ್ಲೂಕು ನಲ್ಲಿಯು ಪ್ರತಿಭಟನೆ ನಡೆದಿದೆ. ಸಿಎಂ ಸಿದ್ದ ರಾಮಯ್ಯ ವಿರುದ್ಧ ನೀಡಿರುವ ಹೇಳಿಕೆ ಯನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು. ನಂತರ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ಸಂವಿಧಾನವು ನಮ್ಮ ನಮ್ಮ ಧರ್ಮವನ್ನು ಆಚರಣೆ ಮಾಡುವ ಹಕ್ಕನ್ನು ನೀಡಿದೆ. ದೇಶ ಕಟ್ಟುವಲ್ಲಿ ಎಲ್ಲ ಧರ್ಮದವರ ಸಮಾನ ಪಾಲು ಇದೆ. ಎಲ್ಲರೂ ಒಟ್ಟಾಗಿರುವಾಗ ಅದನ್ನು ಕದಡಿದರೆ ಅದು ದೇಶದ್ರೋಹ ಆಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮಸೀದಿಯನ್ನು ಕೆಡವಿ ಸೇಡು ತೀರಿಸಿ ಕೊಳ್ಳುತ್ತೇವೆ ಎಂದು ಹೇಳಿರುವ ಅನಂತಕುಮಾರ ಹೆಗಡೆ ಮಾತು ಸಂವಿಧಾನ ವಿರೋಧಿಯಾದುದು. ದೇಶದ್ರೋಹದ ಆರೋಪದ ಮೇಲೆ ರಾಜ್ಯ ಸರ್ಕಾರ ಅವರನ್ನ ಬಂಧಿಸಬೇಕು ಎಂದು ಆಗ್ರಹಿಸಿದ್ರು.
