ವಾಟ್ಸ್ಯಾಪ್ ಗ್ರೂಪ್​ನಲ್ಲಿದ್ದವರಿಗೆ ಬಂತು ದುಡ್ಡು ಮಾಡಿಕೊಡುವ ಲಿಂಕ್​! ಕ್ಲಿಕ್ ಮಾಡಿದ ಇಂಜಿನಿಯರ್​ ಶಾಕ್!

This Article Written by / Malenadu Today / ಜನವರಿ 17, 2024

SHIVAMOGGA  |  Jan 17, 2024  | Cyber Crime Story Shimoga   ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಂಜಿನಿಯರ್ ಮತ್ತು ವೈದ್ಯಗೆ ಆನ್‌ಲೈನ್‌ನಲ್ಲಿ ಭಾರಿ ವಂಚನೆ ಮಾಡಲಾಗಿದೆ. ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿ ಲಾಭ ಪಡೆಯಲು ಹೋಗಿ ಭದ್ರಾವತಿಯ ಇಂಜಿನಿಯರ್‌ವೊಬ್ಬರು ಪ್ರಕಾ 5.75 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾರೆ. 

ಭದ್ರಾವತಿ 27 ವರ್ಷದ ಇಂಜಿನಿಯರ್ ಗೋಲ್ಡ್ ಟ್ರೇಡಿಂಗ್ ಗ್ರೂಪ್ ಹೆಸರಿನ  ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿದ್ದು ಹಣ ಹೂಡಿಕೆ ಬಗ್ಗೆ ಲಾಭ ಗಳಿಸುವ ಬಗ್ಗೆ ಮಾಹಿತಿಗಳನ್ನು ಗ್ರೂಪ್‌ ನಲ್ಲಿ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಈ ನಡುವೆ  ಗ್ರೂಪ್‌ನಲ್ಲಿದ್ದ ಇಂಜಿನಿಯರ್‌ಗೆ ಕ್ರಿಸ್ ಹೆಸರಿನ ವ್ಯಕ್ತಿ ಪ್ರತ್ಯೇಕವಾಗಿ ಚಾಟ್ ಮಾಡಿ ಹಣ ಹೂಡಿಕೆ ಮಾಡಿ ಲಾಭ ಪಡೆಯುವ ಬಗ್ಗೆ ಹೇಳಿ ಲಿಂಕ್ ಕಳುಹಿಸಿದ್ದರು.

ಆತನ ಮಾತು ನಂಬಿದ ಇಂಜಿನಿಯರ್ ಲಿಂಕ್‌ನಲ್ಲಿದ್ದ ಕ್ಯೂಆರ್ ಕೋಡ್‌ಗೆ ವಿವಿಧ ಹಂತದಲ್ಲಿ  ಐದು ಲಕ್ಷಕ್ಕೂ ಹೆಚ್ಚು ಅಮೌಂಟ್ . ಹೂಡಿಕೆ ಮಾಡಿದ್ದರು. ತದನಂತರ ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ  ಶಿವಮೊಗ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. 


ಮುಂದಿನ ಸುದ್ದಿ ಒದಿ

Leave a Comment