shikaripura police today ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದಿದ್ದ ಡೀಸಲ್ ಕಳ್ಳತನ ಪ್ರಕರಣದಲ್ಲಿ ಶಿವಮೊಗ್ಗದ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಪ್ರಕರಣದ ವಿವರವನ್ನು ಗಮನಿಸುವುದಾದರೆ, ಕಳೆದ ಏಪ್ರಿಲ್ 20 ರಂದು ಶನಿವಾರ ರಾತ್ರಿ ಶಿಕಾರಿಪುರ ತಾಲೂಕಿನ ವಿಜಯಲಕ್ಷ್ಮಿ ರೈಸ್ ಮಿಲ್ ಆವರಣದಲ್ಲಿ ನಿಲ್ಲಿಸಿದ್ದ ಮೂರು ಲಾರಿಗಳ ಡೀಸಲ್ ಟ್ಯಾಂಕುಗಳಿಂದ ಸುಮಾರು ೪೫೦ ಲೀಟರ್ ಡೀಸಲ್ (ಮೌಲ್ಯ ₹೪೫,೦೦೦) ಕಳ್ಳತನ ಮಾಡಲಾಗಿದೆ. ಮಾಲೀಕ ವಿಕ್ರಮ್ ಭಟ್ ರವರು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ, ಪೊಲೀಸರು ಬಿ.ಎನ್.ಎಸ್ ಕಾಯ್ದೆ ೩೦೩(೨) ರಂತೆ ಪ್ರಕರಣ ದಾಖಲಿಸಿದ್ದರು.
ಆನಂತರ ಶಿವಮೊಗ್ಗ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಶಿಕಾರಿಪುರ ಟೌನ್ ಸಿಪಿಐ ಸಂತೋಷ್ ಪಾಟೀಲ್ ಮತ್ತು ಪಿಎಸ್ಐ ಪ್ರಶಾಂತ್ ಕುಮಾರ್ ರವರ ನೇತೃತ್ವದ ತನಿಖಾ ತಂಡ ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದೆ.
ಇಬ್ಬರು ಪ್ರಮುಖ ಆರೋಪಿತರಾದ ಶಿವಮೊಗ್ಗದ ಸೋನು (೨೬) ಮತ್ತು ಸೈಯದ್ ಹುಸೇನ್ @ ಗಫಾರ್ (೨೫) ರನ್ನು ಬಂಧಿಸಿರುವ ಪೊಲೀಸರು ಅವರನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಿದೆ. ಅಲ್ಲದೆ ಆರೋಪಿಗಳಿಂಧ ₹೯ ಲಕ್ಷ ಮೌಲ್ಯದ ಟಾಟಾ ಇಂಟ್ರಾ ವಾಹನ, ₹೧೫,೦೦೦ ನಗದು ಮತ್ತು ೫ ಖಾಲಿ ಡೀಸಲ್ ಕ್ಯಾನ್ಗಳನ್ನು ಜಪ್ತಿ ಮಾಡಿದ್ದಾರೆ.

shikaripura police today ಅಧಿಕಾರಿಗಳ ಪ್ರಶಂಸೆ
ಇನ್ನೂ ಡೀಸಲ್ ಕಳ್ಳತನದ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡವನ್ನು ಎಸ್ಪಿ ಮಿಥುನ್ ಕುಮಾರ್ ರವರು ಪ್ರಶಂಸಿಸಿದ್ದಾರೆ. ಆರೋಪಿತರು ಇತರೆ ಜಿಲ್ಲೆಗಳಲ್ಲಿಯು ಡೀಸಲ್ ಕಳ್ಳತನದ ಸರಪಳಿಯಲ್ಲಿ ಭಾಗಿಯಾಗಿದ್ದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮುಂದುವರಿದ ತನಿಖೆಯಿಂದ ಹೆಚ್ಚಿನ ವಿವರಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.