ತುಂಗೆಯ ತೀರದಲ್ಲಿ ,,ಪ್ರಿಯಕರಿನಿಂದಲೇ ಕತ್ತು ಸೀಳಿಸಿಕೊಂಡು ಆಕೆ ಸಾವನ್ನಪ್ಪಿದ್ದಳು! ಅದೇ ಅವಳ ಪ್ರೇಮದ ಕೊನೆಯಾಸೆಯಾಗಿತ್ತು! ರಾಜ್ಯವೇ ಬೆಚ್ಚಿ ಬೀಳಿಸಿದ್ದ ನಿಸ್ವಾರ್ಥ ಪ್ರೇಮ ಕಥೆಯಿದು : JP STORY

ಆಕೆಯ ಪ್ರೀತಿ ನಿಸ್ವಾರ್ಥವಾದದ್ದು,ಅಮರವಾದದ್ದು, ಆಕೆಯ ಪ್ರೀತಿಯನ್ನು ಅಕ್ಷರಗಳಲ್ಲಿ ಬಣ್ಣಿಸೋದಕ್ಕೆ ಸಾಧ್ಯವಿಲ್ಲ. ತನ್ನ ಪ್ರಿಯಕರ ಬೇರೆಡೆ ನಿಶ್ಚಿತಾರ್ಥ ಮಾಡಿಕೊಂಡಾಗ ಆಕೆ ದ್ವೇಷಿಸಲಿಲ್ಲ. ಅಸೂಯೆ ಪಡಲಿಲ್ಲ. ನೀನು ಸಿಗದಿದ್ದ ಮೇಲೆ ನಾನು ಬದುಕಿದ್ದು ಏನು ಪ್ರಯೋಜನ ಗೆಳೆಯ, ನನಗೆ ಪ್ರಾಣಬಿಕ್ಷೆ ನೀಡು ಅಂದಳು..ಅಂಗಾಲಾಚಿದಳು. ನೀನು ಅಲ್ಲಾಹನನ್ನು ಪ್ರಾರ್ಥನೆ ಮಾಡಿ, ನನ್ನ ಕತ್ತನ್ನು ಕೊಯ್ದು ಬಿಡು, ನಾನು ಸ್ವರ್ಗ ಸೇರುತ್ತೇನೆ ಅಂದಾಗ ಪ್ರಿಯಕರ ಮುಂದೆ ಮಾಡಿದ್ದು,ಮನುಕುಲವೇ ತಲೆತಗ್ಗಿಸುವಂತ ಕೆಲಸ. ಮಲೆನಾಡಿನ ತುಂಗಾ ತೀರದಲ್ಲಿ 2014 ರಲ್ಲಿ ನಡೆದಿದ್ದ ಆ ಘಟನೆ ಇಡೀ ರಾಜ್ಯವನ್ನೆ ಬೆಚ್ಚಿಬೀಳಿಸಿತ್ತು. ಪ್ರೀತಿ ಎಂತಹ ಕೃತ್ಯವನ್ನಾದರೂ ಮಾಡಿಸುತ್ತೆ ಎಂಬುದಕ್ಕೆ ಘಟನೆ ಸಾಕ್ಷಿಯಾಗಿತ್ತು. 

ತುಂಗೆಯ ತೀರದಲ್ಲಿ ಚಿಗುರೊಡೆದಿತ್ತು ಅವರ ಪ್ರೀತಿ

ಇಷ್ಟಪಟ್ಟ ಪ್ರೀತಿ ಸಿಗದೇ ಹೋದಾಗ, ಅದರ ನೋವು ಎಷ್ಟು ಭೀಕರವಾಗಿರುತ್ತದೆ ಎಂಬುದ ಎಲ್ಲರಿಗೂ ಗೊತ್ತಿರುವುದೇ. ಆದರೆ ಆ ಪ್ರೀತಿಯ ನೋವು ಅತಿರೇಕಕ್ಕೆ ಹೋಗಬಾರದು. ಮನಸ್ಸು ಗಟ್ಟಿಯಿದ್ರೆ ಗೆದ್ದು ಸಾದಿಸಬೇಕು,  ಕ್ಷಮಾದಾನಿಯಾದ್ರೆ ..ಬದುಕು ಹೋಗು ಎಂದು ಬೆನ್ನಿಗೆ ನಿಂತು ಗುಡ್ ಬೈ ಹೇಳಬೇಕು.  ಇವೇ ಪ್ರೀತಿಯಲ್ಲಿ ಹೆಚ್ಚಾಗಿ ನಡೆಯುವ ಲಾಸ್ಟ್ ಕ್ಲೈಮ್ಯಾಕ್ಸ್​ಗಳು ಈ ಸ್ಟೋರಿಯ ನಾಯಕಿ ಒಬ್ಬ ಮುಸ್ಲಿಮ್ ಸಮುದಾಯ ಅಮಾಯಕ ಹೆಣ್ಣುಮಗಳು. ತೀರ್ಥಹಳ್ಳಿಯ ದಾರಿಯುದ್ದಕ್ಕೂ ಹರಿಯುವ ತುಂಗೆಯ ತೀರದಲ್ಲೊಂದು ಸಿಗುವ ಗ್ರಾಮದವಳು. ಮಲೆನಾಡಿನ ಹೆಣ್ಣಾಗಿ, ಸಮುದಾಯದ ಪ್ರತೀಕವಾಗಿ ಇದ್ದ ಆಕೆಯ ಬಾಳಲ್ಲಿ ಆಕೆಯ ಸಂಬಂಧಿಕನೇ ಎಂಟ್ರಿಯಾಗಿದ್ದ. 

ಆತನನ್ನ ರೆಹಮತ್ ಎಂದು ಕರೆಯೋಣ, ಆಕೆಯನ್ನ ಬೇಗಂ ಎನ್ನೋಣ( ಹೆಸರುಗಳು ನೈಜವಾದುವಲ್ಲ) ಬೇಗಂ ರೆಹಮತ್​ಗಿಂತಲೂ ದೊಡ್ಡವಳಾಗಿದ್ದಳು. ಆದರೂ ಇಬ್ಬರ ನಡುವೆ ಪ್ರೇಮ ಚಿಗುರೊಡೆದಿತ್ತು. ರೆಹಮತ್ ದುಬೈನಿಂದ ರಿಟರ್ನ್​ ಆಗಿ, ಬಿಸ್ಕೆಟ್ ಪ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡ್ತಿದ್ದ. 2014 ರಲ್ಲಿ ಇವರಿಬ್ಬರು ಅಪ್ಟಟ್ಟ ಪ್ರೇಮಿಗಳಾಗಿದ್ರು.  

ವರಸೆಯಲ್ಲಿ ಅಣ್ಣ-ತಂಗಿಯಾದವರು ಪ್ರೀತಿಸಿದ್ರು! ಆದರೆ ಬದುಕುಳಿಯಲಿಲ್ಲ! ಜೋಡಿ ಕೊರಳನು ಬಿಗಿದ ಹಗ್ಗದ ಹಿಂದಿದೆ ಪ್ರೀತಿ ಮಧುರ ತ್ಯಾಗ ಅಮರದ ಕಥೆ: JP FLASHBACK

ಪ್ರೀತಿಯನ್ನೇ ಪವಿತ್ರ ಎಂದು ಬಾವಿಸಿದ್ದಳು ಬೇಗಂ

ಇದರ ನಡುವೆ  ರೆಹಮತ್ ಗೆ ಬೇರೆ ಹುಡುಗಿಯೊಂದಿಗೆ ನಿಶ್ಚಿತಾರ್ಥವಾಗಿಬಿಡುತ್ತೆ. ಆಗ ಬೇಗಂಳ ಹೃದಯ ಅಕ್ಷರಶಃ ಒಡೆದುಹೋಗಿತ್ತು. ರೆಹಮತ್​ನನ್ನ ಕಾಡಿಬೇಡಿ, ಮದುವೆಯಾಗೋಣ, ಪ್ರೀತಿ ನಿರಾರಕಿಸಬೇಡ ಎಂದೆಲ್ಲಾ ಬೇಡುತ್ತಾಳೆ. ಈ ನಡುವೆ  ಇಲ್ಲಿ ಮತ್ತೊಂದು ಸಮಸ್ಯೆ ತಲೆದೋರುತ್ತೆ.ಅತ್ತೆ ಮಗಳನ್ನು ಮದುವೆಯಾಗೋಕೆ ಮುಸ್ಲಿಂ ಸಂಪ್ರದಾಯದಲ್ಲಿ ತೊಡಕು ಇರುತ್ತೆ. ಸಂಬಂಧದಲ್ಲಿ ನೋಡಿದರೆ ಇವರಿಬ್ಬರೂ ಅಕ್ಕ-ತಮ್ಮ ಆಗ್ಬೇಕಾಗುತ್ತೆ. ಈ ಮದುವೆ ಸಾಧ್ಯವಿಲ್ಲ ಅಂತಾ ರೆಹಮತ್ ಹಾಗೂ ಬೇಗಂ  ಮನೆಯಲ್ಲಿ ಚರ್ಚೆಗಳಾಗ್ತವೆ. ಅಂತಿಮವಾಗಿ ನಮ್ಮಿಬ್ಬರ ಪ್ರೀತಿಗೆ ಇಷ್ಟೆಲ್ಲಾ ಅಡ್ಡಿ ಆತಂಕಗಳು ಬರೋದಾದ್ರೆ ನಿನಗೆ ಮನೆಯಲ್ಲಿ ನೋಡಿದ ಹುಡುಗಿಯನ್ನೇ ಮದುವೆಯಾಗು ಅಂತಾ  ಬೇಗಂ ಹೇಳಿ ಬಿಡುತ್ತಾಳೆ. ಅಲ್ಲಿಗೆ ಎಲ್ಲರೂ ನಿರಾಳರಾಗುತ್ತಾರೆ. ಆದರೆ ಕೊನೆಯ ಮಾತಿನ ಜೊತೆ ಕೊನೆಯ ನಿರ್ಧಾರವೊಂದನ್ನ ಮೌನವಾಗಿ ತೆಗೆದುಕೊಂಡಿದ್ದು ಯಾರಿಗೂ ಗೊತ್ತಾಗಿರುವುದಿಲ್ಲ. 

ಪ್ರಿಯಕರನಲ್ಲಿ ಬೇಡ್ತಾಳೆ ಪ್ರಾಣಬಿಕ್ಷೆ,

ತನ್ನ ಪ್ರಿಯಕರ ಸಿಗದಿದ್ದಾಗ, ಬೇಗಂ ಆರಂಭದಲ್ಲಿ ಆಘಾತಕ್ಕೊಳಗಾದ್ರೂ, ಮನಸಿನ ಮೂಲೆಯೊಂದರಲ್ಲಿ ತಾನು ಸಾಯಬೇಕೆಂಬ ಕಟುನಿರ್ದಾರ ತೆಗೆದುಕೊಂಡು ಬಿಡ್ತಾಳೆ. ತನ್ನ ಮನದಾಳದ ಮಾತನ್ನು ರೆಹಮತ್ ಬಳಿ ಹೇಳ್ಕೋಳ್ತಾಳೆ. 2014 ಫೆಬ್ರವರಿ 7,ರಂದು ಬೇಗಂ  ಮತ್ತು ರೆಹಮತ್ ದಿನವಿಡೀ ಈ ಬಗ್ಗೆ ಮನದ ಮಾತುಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ. ತನ್ನ ನಿರ್ದಾರಕ್ಕೆ ಕಟಿಬದ್ಧವಾಗಿದ್ದ  ಬೇಗಂ ರೆಹಮತ್ ಭೇಟಿ ಮಾಡಿ ಸಾಂತ್ವನ ಹೇಳೋ ನಿರ್ದಾರಕ್ಕೆ ಬಂದಿರ್ತಾನೆ. ಅಂದು ಶುಕ್ರವಾರ ಸಂಜೆ ಅಂದರೆ 7.55 ರ ಹೊತ್ತಿನಲ್ಲಿ ರೆಹಮತ್ ಬೇಗಂ ಪೋನ್ ಮಾಡಿ ನಿಮ್ಮ ಮನೆ ಹತ್ತಿರ ಇದ್ದೇನೆ, ಭೇಟಿ ಮಾಡಬೇಕು ಅಂತಾ ಹೇಳ್ತಾನೆ. ಜೀವನದ ಅಂತಿಮಯಾತ್ರೆಗೆ ಅಣಿಯಾಗಿದ್ದ ಬೇಗಂ,ತನ್ನ ನಿರ್ದಾರದಂತೆಯೇ ಬುರ್ಖಾ ಧರಿಸಿ ಮನೆ ಹಿಂಬದಿ ಬಂದು ರೆಹಮತ್​ ನನ್ನು ಭೇಟಿಯಾಗಿದ್ದಾಳೆ. ಅಲ್ಲಿ ಮತ್ತದೇ ಮಾತುಕತೆ. ಇಲ್ಲಿ ಬ್ಯಾಡ ಅಂತಾ ಆಕೆ ತುಂಗಾ ತೀರದಲ್ಲಿರುವ ತೋಟದ ಬಳಿ ಕರೆದೊಯ್ಯುತ್ತಾಳೆ.ಅ ಲ್ಲಿ ಬೇಗಂ ಹೇಳಿದ ಮಾತುಗಳನ್ನು ಕೇಳಿ ರೆಹಮತ್ ಕೂಡ ತಲ್ಲಣಗೊಳ್ಳುತ್ತಾನೆ.

ವರಸೆಯಲ್ಲಿ ಅಣ್ಣ-ತಂಗಿಯಾದವರು ಪ್ರೀತಿಸಿದ್ರು! ಆದರೆ ಬದುಕುಳಿಯಲಿಲ್ಲ! ಜೋಡಿ ಕೊರಳನು ಬಿಗಿದ ಹಗ್ಗದ ಹಿಂದಿದೆ ಪ್ರೀತಿ ಮಧುರ ತ್ಯಾಗ ಅಮರದ ಕಥೆ: JP FLASHBACK

ಮನೆಯಿಂದಲೇ ಬೇಗಂ ತಂದಿರ್ತಾಳೆ ಚಾಕು

ಪೂರ್ವ ನಿರ್ಧಾರ ಮಾಡಿದಂತೆ ಬೇಗಂ ಸಾಯಲು ಏನೋ ನಿರ್ದಾರ ಮಾಡಿರ್ತಾಳೆ ನಿಜ. ಆದರೆ ಇದೇ  ರೀತಿಯೇ ನಾನು ಸಾಯಬೇಕೆಂದು ಆಕೆ ನಿರ್ಧರಿಸಿದಾಗ ರೆಹಮತ್ ಕೂಡ ವಿಚಲಿತನಾಗ್ತಾನೆ. ನೋಡು ರೆಹಮತ್, ನೀನಂತು ನನಗೆ ಸಿಗುವುದಿಲ್ಲ.ನಿನ್ನ ಬಿಟ್ಟು ನಾನು ಕೂಡ ಬದುಕುವುದಿಲ್ಲ. ನಾನು ಆತ್ಮಹತ್ಯೆ ಮಾಡಿಕೊಂಡರೆ ನನ್ನ ಆತ್ಮಕ್ಕೆ ನೆಮ್ಮದಿ ಸಿಗುವುದಿಲ್ಲ. ಸೈತಾನಳಾಗಿ ನಿನ್ನನ್ನು ಕಾಡಬಹುದು. ನೀನು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಹೇಗಿದ್ದರೂ ನಾನು ಸಾಯೋದಂತೂ ನಿಜ,ಅಲ್ಲಾಹನ ಹೆಸರಿನಲ್ಲಿ ನೀನೇ ನನ್ನನ್ನು ಜುಬಾ ಮಾಡಿ, ಸಾಯಿಸಿಬಿಡು,ನನಗೆ ಸ್ವರ್ಗ ಪ್ರಾಪ್ತಿಯಾಗುತ್ತೆ ಅಂತಾ ಹೇಳ್ತಾಳೆ. ಜುಬಾ ಅಂದರೆ ದೇವರ ಹೆಸರಿನಲ್ಲಿ ಬಲಿಕೊಡೊದು. ಇದೇ ರೀತಿ ಬೇಗಂ ಸಾಯೋದಕ್ಕೆ ಸಿದ್ದವಾಗಿದ್ದಳು

ಜುಬಾಗೆ ಪ್ರಿಯಕರನನ್ನು ಒಪ್ಪಿಸಿದ ಬೇಗಂ.

ಅಂದುಕೊಂಡಂತೆ ಬೇಗಂ ತನ್ನ ಧರ್ಮನಿಷ್ಟೆಯನ್ನು ರೆಹಮತ್ ಬಳಿ ಹೇಳಿಕೊಂಡಿದ್ದಾಳೆ. ನಾನು ನೆಮ್ಮದಿಯಾಗಿ ಮಲಗುತ್ತೇನೆ. ನಿನಗೆ ಯಾವ ತೊಂದರೆಯನ್ನು ಮಾಡುವುದಿಲ್ಲ.ನೀನು ನನ್ನ ಕತ್ತು ಕೊಯ್ದುಬಿಡು. ಬಳಿಕ ಮೊಬೈಲ್ ಚಾಕುವನ್ನು ನದಿಯಲ್ಲಿ ಎಸೆದುಬಿಡು. ನಂತರ ಮನೆಗೆ ಹೋಗು ವಿಷಯವನ್ನು ಯಾರಿಗೂ ಹೇಳಬೇಡ ಅಂತಾ ಕೈಯಲ್ಲಿ ಪ್ರಾಮಿಸ್ ಮಾಡಿಸಿಕೊಳ್ತಾಳೆ. ಅಂತೆಯೇ ಸಿದ್ದವಾಯಿತು. ಈ ಘನಘೋರ ವಧಾಸ್ಥಾನ. ಪ್ರೇಯಸಿ,ತಾನು ಸಾಯಬೇಕೆಂದು ಇಷ್ಟೆಲ್ಲಾ ಕಠೋರ ನಿರ್ದಾರ ತೆಗೆದುಕೊಂಡಾಗಲೂ, ರೆಹಮತ್ ನ ಮನಸ್ಸು ಕರಗಲಿಲ್ಲ. ಆಕೆಯನ್ನು ಮನವೊಲಿಸುವ ಪ್ರಯತ್ನವನ್ನು ಆತ ಮಾಡಲಿಲ್ಲ.ಅಷ್ಟಕ್ಕೂ ಬೇಗಂಗೂ ಅದು ಇಷ್ಟವಿರಲಿಲ್ಲ.ಬೇಗಂಳಾ ಕೊನೆ ಆಸೆಯನ್ನೇ ಆತ ನೆರವೇರಿಸುವ ಸ್ವಾರ್ಥ ಮೆರೆದುಬಿಟ್ಟ..

ತುಂಗೆಗೂ ಬಲಿದಾನ ಇಷ್ಟವಿರಲಿಲ್ಲವೇನೋ.

ಪ್ರಶಾಂತವಾಗಿ ಹರಿಯುತ್ತಿದ್ದ ತುಂಗಾ ತೀರದಲ್ಲಿ ಆ ಕ್ಷಣ ನೀರವ ಮೌನ ಆವರಿಸಿತ್ತು.ನಿಸರ್ಗಮಾತೆ ಆ  ಭೀಕರತೆಯ ಕ್ಷಣಕ್ಕೆ ಸಾಕ್ಷಿಯಾಗುವ ಆತಂಕದಲ್ಲಿದ್ದಳು.ಸುತ್ತಮುತ್ತಲ ಗಿಡಮರಗಳೆಲ್ಲಾ ಸ್ಥಬ್ದವಾದವು.ತುಂಗೆ ಹರಿವನ್ನೇ  ನಿಲ್ಲಿಸಿಬಿಟ್ಟಳೇನೋ ಎಂಬ ವಾತಾವರಣ ಅಲ್ಲಿ ಸೃಷ್ಟಿಯಾಗಿ ಹೋಯ್ತು. ನಾನು ಸ್ವರ್ಗಕ್ಕೆ ಹೋಗಬೇಕೆಂದು ಜುಬಾಗೆ ಸಿದ್ದವಾದ ಬೇಗಂ,ತುಂಗೆಯ ದಡದಲ್ಲಿ ಶಾಂತಳಾಗಿ ಮಲಗಿ,ತನ್ನನ್ನು ಅರ್ಪಿಸಿಕೋ ಅಲ್ಲಾ ಅಂತಾ ರೆಹಮತ್ ಗೆ ಕೊರಳೊಡ್ಡುತ್ತಾಳೆ.  ರೆಹಮತ್ ಆಕೆಯೇ ಮನೆಯಿಂದ ತಂದ ಚಾಕುವನ್ನು ಕೈಯಲ್ಲಿ ಹಿಡಿದು. ದೇವರ ವಾಕ್ಯ ಹೇಳಿ. ಬೇಗಂಳ ಕತ್ತನ್ನು ಕೊಯ್ಯಲು ಅಣಿಯಾಗುತ್ತಾನೆ.ಕೊನೆ ಕ್ಷಣದಲ್ಲಾದರೂ ರೆಹಮತ್​ ನನ್ನನ್ನು ಮದುವೆಯಾಗುವುದಾಗಿ ಹೇಳ್ತಾನಾ ಎಂಬ ಆಸೆ ಆಕೆಯ ಕಣ್ಣಂಚಿನಲ್ಲಿತ್ತೇನೋ..ಆದರೆ ರೆಹಮತ್ ಮನಸ್ಸು ಬದಲಿಸಲಿಲ್ಲ.ಪ್ರೇಯಸಿಯ ಇಚ್ಚೆಯನ್ನು ಈಡೇರಿಸಲು ಆತ ಅಣಿಯಾಗ್ತನೆ.ಚಾಕುವನ್ನು ತೆಗೆದುಕೊಂಡು  ಬೇಗಂಳಾ ಕುತ್ತಿಗೆಯನ್ನು ಕೊಯ್ಯುವ ಸಂದರ್ಭದಲ್ಲಿ ಆಕೆ ಮಿಸುಕಾಡಲಿಲ್ಲ.ಒದ್ದಾಡಲಿಲ್ಲ.ಪ್ರಾಣಹೋಗೋ ಕೊನೆಕ್ಷಣದವರೆಗೂ ರೆಹಮತ್ ನನ್ನೇ ಕಣ್ಗಳಲ್ಲಿ ನೋಡುತ್ತಾ ಪ್ರಾಣಬಿಡ್ತಾಳೆ. ಅಲ್ಲಿ ನಡೆದ ಎಲ್ಲಾ ಕ್ಷಣಗಳಿಗೂ ತುಂಗೆ ಮೂಕಸಾಕ್ಷಿಯಾಗಿದ್ದಳು.

ಕೇಳಿ ಪ್ರೇಮಿಗಳೇ, ಪ್ರೀತಿ ಪ್ರೇಮ ಪ್ರಣಯದಲ್ಲಿ ಮೈಮೆರತರೇ ದುರಂತವೇ ನಡೆಯಬಹುದು! ಮೊಬೈಲ್ ವಿಕೃತಿಗೆ ಜೀವ ಕಳೆದುಕೊಂಡ ಸಂಜು ಮತ್ತು ಗೀತಾಳ ರಿಯಲ್ ಕಥೆ JP ಬರೆಯುತ್ತಾರೆ ಓದಿ

ಕೊಲೆ ಮಾಡಿ ಬಂದವನು ಮಾಡಿದ್ದೇನು?

ಬೇಗಂಳನ್ನು ಕೊಲೆಮಾಡಿದ ರೆಹಮತ್ ,ಚಾಕುವನ್ನು ಆಕೆಯ ಮೊಬೈಲ್ ನ್ನು ತುಂಗಾ ನದಿಗೆ ಎಸೆಯುತ್ತಾನೆ.ನಂತರ ಒದ್ದೆಯಾದ ಪ್ಯಾಂಟನ್ನು ಮನೆ ಸನಿಹದ ತಿಪ್ಪೆಯೊಂದರಲ್ಲಿ ಅಡಗಿಸಿಡುತ್ತಾನೆ.ಅಲ್ಲಿಂದ ಮನೆಗೆ ಬರುವ ಆತ ಮನೆಯಲ್ಲಿಯೇ ಟಿವಿ ನೋಡ್ತಾ ಕೂರುರ್ತಾನೆ. ನಂತರ  ನಿಶ್ವಿತಾರ್ಥವಾಗಿದ್ದ ಹುಡ್ಗಿಯೊಂದಿಗೆ ಮಾತಾಡ್ತಾ ಕಾಲ ಕಳಿತಾನೆ.ಇತ್ತ ಶುಕ್ರವಾರ ಸಂಜೆ ಮನೆಬಿಟ್ಟ ಬೇಗಂ ಯಾಕೆ ಮನೆಗೆ ವಾಪಸ್ಸಾಗ್ಲಿಲ್ಲ ಅಂತಾ ಗಾಬರಿಗೊಳ್ಳೋ ಪೋಷಕರು,ಮಾಳೂರು ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ನೀಡ್ತಾರೆ. ಅಲ್ಲದೆ ಅನುಮಾನಗೊಂಡು ತುಂಗಾ ತೀರದಲ್ಲಿ ಒಂದು ಸುತ್ತು ಹಾಕ್ತಾರೆ. ಅದು ಭಾನುವಾರ ಬೆಳಿಗ್ಗೆ 11 ಗಂಟೆ ಹೊತ್ತಿಗೆ ತೆಪ್ಪದಲ್ಲಿ ತುಂಗಾ ತೀರದಲ್ಲಿ ಹುಡುಕಾಟದಲ್ಲಿದ್ದ ಗ್ರಾಮಸ್ಥರಿಗೆ ಮನೆ ಸನಿಹದ ತೋಟದ ಬಳಿಯ ತುಂಗಾ ತೀರದಲ್ಲಿ ಬುರ್ಕಾ ಧರಿಸಿದ್ದ,ಯುವತಿಯ ಮೃತದೇಹ ತೇಲುತ್ತಿರುವುದನ್ನು ಕಂಡಿದ್ದಾರೆ.ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸ್ತಾರೆ. ಮೃತದೇಹವನ್ನು ತುಂಗಾನದಿ ದಡದಿಂದ ಮೇಲೆ ತಂದಾಗ, ಗ್ರಾಮಸ್ಥರೆಲ್ಲರು ತಲ್ಲಣಗೊಂಡಿದ್ದರು..

ಆರಂಭದಲ್ಲಿ ಇದು ನಿಧಿಗಾಗಿ ನಡೆದಿರುವ ಕೊಲೆ ಅಂತೆಲ್ಲಾ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ರು.ಕೊಲೆಯಾದ ದಿನದಿಂದ ಗ್ರಾಮಸ್ಥರು ಸಂಜೆಹೊತ್ತು ಗ್ರಾಮದಲ್ಲಿ ಓಡಾಡೋದನ್ನೇ ಬಿಟ್ಟುಬಿಟ್ಟಿದ್ರು.ಕೊಲೆಯ ಭೀಕರತೆಯನ್ನೋ ನೋಡಿದ ಕೆಲವರಿಗೆ ಚಳಿಜ್ವರ ಕೂಡ ಬಂದಿತ್ತು ಅಂತಾರೆ ಗ್ರಾಮಸ್ಥರು. ಅಂದಿನ ತೀರ್ಥಹಳ್ಳಿ ಸರ್ಕಲ್ ಇನ್ ಸ್ಪೆಕ್ಟಕ್ ಬಸವರಾಜ್ ರವರು, ಬೇಗಂ ಉಪಯೋಗಿಸುತ್ತಿದ್ದ ಮೊಬೈಲ್ ನ ಕಾಲ್ ಡಿಟೇಲ್ ತೆಗೆದು ತನಿಖೆ ಆರಂಭಿಸ್ತಾರೆ. ಬೇಗಂ ಕಾಣೆಯಾದ ದಿನ ಮಾಡಿದ ಕೊನೆಯ ಕರೆಯ ಯಾರದಿತ್ತು ಎಂದು ಇನ್ ವೆಸ್ಟಿಗೇಷನ್ ಮಾಡಿದಾಗ, ರೆಹಮತ್ ಮಾಡಿದ ಕರೆಗಳು ಪತ್ತೆಯಾಗುತ್ತೆ.ಶುಕ್ರವಾರ ಇಡೀ ದಿನ ಫಾತಿಮ ಮತ್ತು ರೆಹಮತ್ ಮಾತ್ರ ಮಾತನಾಡಿರುವುದು ಮಾತ್ರ ಕಾಲ್ ಡಿಟೇಲ್ ನಲ್ಲಿ ಗೊತ್ತಾಗುತ್ತೆ.ತಕ್ಷಣ ರೆಹಮತ್ ನನ್ನು ವಶಕ್ಕೆ ಪಡೆಯುವ  ಪೊಲೀಸರು ವಿಚಾರಣೆಗೊಳಪಡಿಸ್ತಾರೆ,ರೆಹಮತ್ ನಡೆದ ಘಟನಾವಳಿಗಳನ್ನು ಎಳೆಎಳೆಯಾಗಿ ಬಿಡಿಸೇಳುತ್ತಾನೆ.ಆತ ಹೇಳಿಕ ಕಥೆ ಕೇಳಿ ಪೊಲಿಸರು ಅಕ್ಷರ ಬೆಚ್ಚಿಬೀಳ್ತಾರೆ.

ಈ ಪ್ರೇಮದ ಸಾವಿನಲ್ಲಿ ರೆಹಮತ್ ಚೂರು ಪ್ರೀತಿ ತೋರಿದ್ದರೇ, ಬೇಗಂ ಬದುಕುಳಿಯುತ್ತಿದ್ದಳು, ಅದೇ ರೀತಿ ಬೇಗಂ ಅಂತದ್ದೊಂದು ನಿರ್ಧಾರ ತನ್ನ ಕತ್ತು ಸೀಳುವ ರೆಹಮತ್​ಗಾಗಿ ತೆಗೆದುಕೊಳ್ಳಬಾರದಿತ್ತು. ಯಾವುದು ಸರಿ ಯಾರದ್ದು ತಪ್ಪು ಗೊತ್ತಿಲ್ಲ.. ಆದರೆ, ಪ್ರೀತಿಯಲ್ಲಿ ನಿಸ್ವಾರ್ಥ,ನಿಷ್ಕಳಂಕ,ನಿರ್ಮಲ ಮನಸ್ಥಿತಿಗೆ ಹೇಗೆ ಸ್ಥಳಾವಕಾಶ ವಿರುತ್ತೇ ಅನ್ನೋದಕ್ಕೆ ಬೇಗಂಳೆ ಸಾಕ್ಷಿ.

ಮೀನು ಹಿಡಿಯಲು ಬಂದವರ ಮೇಲೆ ಜೇನುನೊಣಗಳ ದಾಳಿ! 6 ಜನರಿಗೆ ಗಂಭೀರ ಪೆಟ್ಟು!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment