ಭೂಮಿ ಕೊಡಿಸುವುದಾಗಿ ರೈತರಿಗೆ ವಂಚನೆ! ಬೇಳೂರು ಗೋಪಾಲ ಕೃಷ್ಣ ಎಚ್ಚರಿಕೆ ಮತ್ತು ಸಾಗರ ಟೌನ್ ಸ್ಟೇಷನ್​ ವಿಚಾರ

ajjimane ganesh

ನವೆಂಬರ್, 06, 2025 ರ ಮಲೆನಾಡು ಟುಡೆ ಸುದ್ದಿ : ಸಾಗರ ಟೌನ್​ ಪೊಲೀಸ್ ಸ್ಟೇಷನ್​ ರಾಷ್ಟ್ರಿಯ ಹೆದ್ಧಾರಿ ಅಗಲೀಕರಣದಲ್ಲಿ ಶಿಫ್ಟ್ ಆಗಲಿದೆಯಾ? ಶಿವಮೊಗ್ಗದಲ್ಲಿ ಕೆಪಿಸಿ ಭೂಮಿ ಕೊಡಿಸುವ ವಹಿವಾಟು ನಡೆಸ್ತಿದ್ದಾರಾ? ಹೌದು ಎನ್ನುತ್ತಿದೆ ಶಾಸಕ ಬೇಳೂರು ಗೋಪಾಲಕೃಷ್ಣರವರ ಮಾತು

Sagar MLA Gopalakrishna
Belur Gopalakrishna ,Sagar MLA Gopalakrishna

ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಬಿ.ಎಸ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ

- Advertisement -

ಶಾಸಕ ಗೋಪಾಲಕೃಷ್ಣ ಬೇಳೂರು  (Sagar MLA Gopalakrishna ) ಸಾಗರದಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆಸಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 

ಕೆಪಿಸಿಗೆ ಸಂಬಂಧಿಸಿದ ಭೂಮಿಯನ್ನು ಮಂಜೂರು ಮಾಡಿಸಿಕೊಡುವುದಾಗಿ ಹೇಳಿ ಕೆಲವು ಮಧ್ಯವರ್ತಿಗಳು ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದು ಮೋಸದ ವಹಿವಾಟು, ರೈತರು ಇಂತಹವರಿಗೆ ಹಣ ನೀಡಿ ಮೋಸ ಹೋಗಬಾರದು ಅಂಥಾ ಎಚ್ಚರಿಸಿದ್ದಾರೆ.

ತುಮರಿ ಭಾಗದ ಕೆಲವು ರೈತರಿಂದ ಭೂ ಮಂಜೂರಾತಿ ಮಾಡಿಸಿಕೊಡುವುದಾಗಿ ಕುಂದಾಪುರ ಮೂಲದ ವ್ಯಕ್ತಿಯೊಬ್ಬರು ಹಣ ಎತ್ತಿರುವ ಬಗ್ಗೆ ಮಾಹಿತಿ ಇದೆ ಎಂದು ಶಾಸಕರು ಸಭೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ರೀತಿ ವಂಚನೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಜಲ ವಿದ್ಯುತ್ ಯೋಜನೆಗಾಗಿ ಅಣೆಕಟ್ಟು ನಿರ್ಮಿಸಿದಾಗ ಕರ್ನಾಟಕ ವಿದ್ಯುತ್ ನಿಗಮದ ವಶಕ್ಕೆ ನೀಡಲಾದ ಪ್ರದೇಶವನ್ನು ಮರಳಿ ಸಂತ್ರಸ್ತರಿಗೆ ನೀಡುವ ಯಾವುದೇ ಪ್ರಸ್ತಾವ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ ಎಂದು ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. 

ಅಡಿಕೆ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಕೆ ವೈರೈಟಿಗಳ ದರ!? ಅಡಿಕೆ ರೇಟು, ವಿವರ

ರಸ್ತೆ ಅಗಲೀಕರಣ/Sagar MLA Gopalakrishna 

ಸಾಗರ-ಶಿವಮೊಗ್ಗ ರಸ್ತೆಯ ತ್ಯಾಗರ್ತಿ ವೃತ್ತದಿಂದ ಜೋಗ ರಸ್ತೆಯ ಎಲ್.ಬಿ. ಕಾಲೇಜು ವೃತ್ತದವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆ ಕಾಮಗಾರಿ ಇನ್ನಷ್ಟು ವೇಗವಾಗಿ ನಡೆಯಬೇಕು ಎಂದ ಶಾಸಕರು, ಸಾಗರ ಟೌನ್​ ಪೊಲೀಸ್ ಠಾಣೆಯ ಕಟ್ಟಡವಿರುವ ಪ್ರದೇಶವು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುತ್ತದೆ. ರಸ್ತೆ ವಿಸ್ತರಣೆ ಕಾರಣದಿಂದ ಠಾಣಾ ಕಟ್ಟಡವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಈಗಾಗಲೇ ಭೇಟಿ ಮಾಡಿ ಚರ್ಚಿಸಲಾಗಿದೆ  ಅಂಥಾ ತಿಳಿಸಿದ್ದಾರೆ. 

Belur Gopalakrishna
Belur Gopalakrishna

ನಿಮ್ಮ ರಾಶಿಭವಿಷ್ಯದ ಇವತ್ತಿನ ವಿಶೇಷಗಳೇನು ಗೊತ್ತಾ! ಇಲ್ಲಿದೆ ದಿನಭವಿಷ್ಯ

ನಗರದ ಅಭಿವೃದ್ಧಿ ದೃಷ್ಟಿಯಿಂದ, ಮಾರ್ಕೆಟ್ ರಸ್ತೆ ವಿಸ್ತರಣೆಯ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಶಾಸಕರು ಸೂಚಿಸಿದರು. ಜೊತೆಗೆ ರೈಲ್ವೆ ನಿಲ್ದಾಣ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಅಗ್ರಹಾರ ಮತ್ತು ಶಿವಪ್ಪನಾಯಕ ವೃತ್ತಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

Sagar MLA Gopalakrishna Beloors warning to farmers regarding middlemen collecting money for KPTCL reservoir land regularization. Also, get updates on Sagar road widening project status, Police station relocation, and his cabinet berth expectations.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

 

Share This Article