Shivamogga | Feb 1, 2024 | Dysp ಬಾಲರಾಜ್ ವರ್ಗಾವಣೆಯಾಗಿ ಇನ್ನೂ 10 ದಿನವೂ ಕಳೆದಿಲ್ಲ. ಅದಾಗಲೇ ಶಿವಮೊಗ್ಗದ ರೌಡಿಶೀಟರ್ಗಳು ಬಾಲ ಬಿಚ್ಚಲು ಆರಂಭಿಸಿದ್ದಾರೆ. ಈ ಮಾತನ್ನ ನಾವು ಹೇಳುತ್ತಿಲ್ಲ ಪೊಲೀಸ್ ಇಲಾಖೆಯ ಒಡಲಾಳಲದಲ್ಲಿಯೇ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿ ಘಟನೆ ನಡೆದಿದೆ. ಘಟನೆ ಸಂಬಂಧ ಐಪಿಸಿ ಸೆಕ್ಷನ್ IPC 1860 (U/s-504,506,189,342,353,149 ಅಡಿಯಲ್ಲಿ ಕೇಸ್ ಸಹ ದಾಖಲಾಗಿದೆ.
ಕೋಟೆ ಪೊಲೀಸ್ ಸ್ಟೇಷನ್
ಕೋಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ಘಟನೆ ನಡೆದಿದ್ದು, ಪೂರ್ವ ಸಂಚಾರಿ ಠಾಣೆಯ ಸಿಬ್ಬಂದಿ ಈ ಸಂಬಂಧ ದಾಖಲಿಸಿದ ದೂರಿನಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ನಡೆದಿದ್ದು ಏನು ಎನ್ನುವುದನ್ನ ನೋಡುವುದಾದರೆ, ಶಿವಮೊಗ್ಗದ ಡಯಟ್ ಸಮೀಪ ಪೂರ್ವ ಸಂಚಾರಿ ಪೊಲೀಸ್ ಸ್ಟೇಷನ್ ಸಿಬ್ಬಂದಿ ವೀರಭದ್ರೇಶ್ವರ ಸರ್ಕಲ್ನಲ್ಲಿ ಟ್ರಾಫಿಕ್ ಫೈನ್ ಹಾಕಲು ನಿಂತಿದ್ದರು.
ಈ ವೇಳೆ ಅಲ್ಲಿಗೆ ರೌಡಿಶೀಟರ್ ಒಬ್ಬ ಬೈಕ್ನಲ್ಲಿ ಇನ್ನೊಬ್ಬನನ್ನು ಕೂರಿಸಿಕೊಂಡು ಬಂದಿದ್ದಾನೆ. ಅದನ್ನ ಪೊಲೀಸರು ಗಮನಿಸುತ್ತಲೇ ಆತ ಯೂಟರ್ನ್ ತೆಗೆದುಕೊಳ್ಳಲು ಮುಂದಾಗಿ ಕೆಳಕ್ಕೆ ಬಿದ್ದಿದ್ದಾನೆ. ಈ ಘಟನೆ ನಂತರ ಅಲ್ಲಿಯ ಸೀನ್ ಬದಲಾಗಿದೆ. ಕೆಳಕ್ಕೆ ಬಿದ್ದವನನ್ನ ಆತನನ್ನ ಪೊಲೀಸ್ ಪೇದೆ ಹೊಡೆದು ಬೀಳಿಸಿದ್ದಾನೆ ಎಂದು ಅಲ್ಲಿದ್ದ ಇನ್ನೊಬ್ಬ ರೌಡಿಶೀಟರ್ ಕಿರಿಕ್ ತೆಗೆದಿದ್ದಾನೆ.
ಪೊಲೀಸರಿಗೆ ವಾರ್ನಿಂಗ್
ರೌಡಿಶೀಟರ್ ಯಾಸಿನ್ ಕೆಳಕ್ಕೆ ಬಿದ್ದು ಅಸ್ವಸ್ಥನಾಗಿದ್ದ. ಆತನನ್ನ ಪೊಲೀಸರೇ ಅಲ್ಲಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ. ಅಲ್ಲಿಯೇ ಇದ್ದ ಆ್ಯಂಬುಲೆನ್ಸ್ ಒಂದರಲ್ಲಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಇದಕ್ಕೂ ಆಸ್ಪದ ಕೊಡದ ಕಡೆಕಲ್ ಅಬೀದ್ ಇವನದ್ದು ಫೋಟೋ ತೆಗಿ, ನಿನ್ನ ಬಿಡೋದಿಲ್ಲ, ಸೀನಣ್ಣ, ಇವನು ಮರ್ಡರ್ ಆಗ್ತಾನೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ ಯಾರಿಗೋ ಫೋನ್ ಮಾಡಿ ಪೊಲೀಸರು….. ಡ್ಯಾಶ್ ಹೊಡೆದು ಬಿಟ್ಟಿದ್ದಾರೆ ಹುಡುಗರನ್ನ ಕರೆದುಕೊಂಡು ಬನ್ನಿ ಎಂದಿದ್ದಾನೆ. ಇದೆಲ್ಲದರ ದೃಶ್ಯ ಅಲ್ಲಿದ್ದ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.
ಕ್ಯಾಮರಾದ ದೃಶ್ಯದಲ್ಲಿ ಕಾಣುವಂತೆ ಕಡೆಕಲ್ ಅಬೀದ್ ನೇರವಾಗಿಯೇ ಪೊಲೀಸರನ್ನ ಅವಾಚ್ಯ ಶಬ್ಧಗಳನ್ನ ನಿಂದಿಸಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಯುವಕನೊಬ್ಬ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಇಷ್ಟೆಲ್ಲಾ ನಡೆದ ಬಳಿಕವೂ ತಾಳ್ಮೆ ಕಳೆದುಕೊಳ್ಳದ ಅಲ್ಲಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅಸ್ವಸ್ಥಗೊಂಡಿದ್ದವನನ್ನ ಸ್ಥಳೀಯರೊಂದಿಗೆ ಆಸ್ಪತ್ರೆಗೆ ಶಿಫ್ಟ್ ಮಾಡಿ ಟ್ರೀಟ್ಮೆಂಟ್ ಕೊಡಿಸಿದ್ದಾರೆ.
ಘಟನೆ ವೇಳೆ ಜನರು ಪೊಲೀಸರ ಸಹಾಯಕ್ಕೆ ಬಂದರೆ. ಅವರಿಗೂ ಸಹ ಇಲ್ಲಿಂದ ಹೋಗಬೇಕು ಎಂದು ರೌಡಿಶೀಟರ್ ಅವಾಜ್ ಹಾಕಿದ್ದಾನೆ. ಇದಿಷ್ಟೆ ಅಲ್ಲದೆ, ಹೆಣ ಹೋಗುತ್ತೆ ಇಲ್ಲಿಂದ… ಟೂಲ್ಸ್ ತಗೊಂಡು ಬರ್ರೋ.. ಎಲ್ಲೂ ಹೋಗುವಂತಿಲ್ಲ ಎಂದೆಲ್ಲಾ ನಿಂದಿಸಿದ್ದ ರೌಡಿಶೀಟರ್. ಹಿರಿಯ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ಗೂ ಸಹ ಸುಮ್ಮನೇ ಇರಬೇಕು..ಇಲ್ಲಾಂದ್ರೆ ಎಂದು ಬೆದರಿಕೆ ಹಾಕಿದ್ದಾನೆ. ನಡು ರಸ್ತೆಯಲ್ಲಿ ಹೀಗೆ ನಡೆದಿರುವುದಕ್ಕೆ ಪೊಲೀಸ್ ಇಲಾಖೆ ಖಡಕ್ ಆಗಿ ಉತ್ತರ ನೀಡಿಲ್ಲ ಎಂಬುದು ಸ್ಥಳೀಯರ ಆರೋಪ
ಇನ್ನೂ ಎರಡು ದಿನದ ಹಿಂದೆ ನಡೆದ ಘಟನೆಯ ದೃಶ್ಯ ಮೊಬೈಲ್ಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ರೌಡಿ ಗ್ಯಾಂಗ್ಗಳ ನಡುವೆ ಬೆದರಿಕೆ, ಹೊಡೆದಾಟ, ಮಾರಾಮಾರಿ ನಡೆಯುತ್ತಲೇ ಇರುತ್ತವೆ. ಆದರೆ ಪೊಲೀಸ್ ಇಲಾಖೆ ಸಿಬ್ಬಂದಿಯನ್ನೆ ಕೊಲೆ ಮಾಡುತ್ತೇವೆ ಎಂದು ಬಹಿರಂಗವಾಗಿ ಆವಾಜ್ ಹಾಕಿರುವುದು ಅಚ್ಚರಿ ಮತ್ತು ಆತಂಕವನ್ನ ಮೂಡಿಸುತ್ತಿದೆ.
ಡಿವೈಎಸ್ಪಿ ಬಾಲರಾಜ್
ಡಿವೈಎಸ್ಪಿ ಬಾಲರಾಜ್ ರೌಡಿಶೀಟರ್ಸ್ಗೆ ವಾರ್ನಿಂಗ್ ಲೆಟರ್ ಆಗಿದ್ರು. ಅವರಿರುವಷ್ಟು ದಿನ ಶಿವಮೊಗ್ಗ ಸಿಟಿಯ ರೌಡಿಗಳು ಬಾಲ ಬಿಚ್ಚಿರಲಿಲ್ಲ. ಇದಕ್ಕೆ ಹೊರತಾಗಿ ಪೊಲೀಸರ ಮೇಲೆ ಹವಾ ತೋರಿಸಲು ಹೋಗಿ ಹಲ್ಲೆಗೆ ಮುಂದಾದವರು ಕಾಲಿಗೆ ಬುಲೆಟ್ ತಿಂದಿದ್ದರು. ಇದೀಗ ಅವರು ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ. ಅದರ ಬೆನ್ನಲ್ಲೆ ನಡೆದ ಈ ಘಟನೆಯು ಬದಲಾದ ಸಂದರ್ಭಕ್ಕೆ ಸಾಕ್ಷಿಯಾಗ್ತಿದೆ.
ಹಾಗೊಂದು ವೇಳೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಓಡುತ್ತಿರುವ ವಾಹನ ಸವಾರರನನ್ನ ಹಿಡಿಯಲು ಹೋಗಿ ಪೊಲೀಸರೇ ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನೂ ಕೇಳುವುದಾದರೆ. ಘಟನೆ ನಡೆದ ಮೇಲೆ ನಡೆದುಕೊಂಡ ನಡವಳಿಕೆಯೇ ಇಲ್ಲಿ ಅಪರಾಧವಾಗಿದೆ. ಪೊಲೀಸರನ್ನ ಪ್ರಶ್ನಿಸುವುದಕ್ಕೆ ಅದರದ್ದೆಯಾದ ದಾರಿಗಳಿವೆ. ಅದರ ಹೊರತಾಗಿ ನಡುರೋಡಿನಲ್ಲಿ ಪೊಲೀಸರ ಸ್ಟೈರ್ಯವನ್ನ ದೃತಿಗೆಡಿಸುವ ಪ್ರಯತ್ನದ ಪೊಲೀಸ್ ಇಲಾಖೆಯನ್ನ ಆತಂಕಕ್ಕೆ ದೂಡುತ್ತದೆ.
ಎಸ್.ಪಿ.ಮಿಥುನ್ ಕುಮಾರ್ ಎಸ್ಪಿಯಾಗಿ ಘಟನೆ ಸಂಬಂದ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಅಧಿಕಾರಿಗಳಿಗೆ ಸೂಚಿಸಬೇಕಾದ ಇನ್ಸ್ಟ್ರಕ್ಷನ್ಗಳ ಸಹ ನೀಡಿದ್ದಾರೆ. ಎಲ್ಲದಕ್ಕಿಂತಲೂ ಮೊದಲು ಪೊಲೀಸರ ಸೇಫ್ಟಿ ಮುಖ್ಯ. ಈ ಹಿಂದೆ ಎಸ್ಪಿಯಾಗಿದ್ದ ರಮಣಗುಪ್ತರವರು ಇದನ್ನ ಕಠಿಣ ಸಂದರ್ಭದಲ್ಲಿಯೇ ಹೇಳಿದ್ದರು. ಆನಂತರ ಎಸ್ಪಿಯಾಗಿದ್ದವರು ಸಹ ಇದೇ ಪಾಲಿಸಿಯನ್ನು ಅನುಸರಿಸಿದ್ದರು.ಈಗಲು ಅದೇ ಪಾಲಿಸಿಯನ್ನು ಅನುಸರಿಸಬೇಕಿದೆ. ಕೆಲ ಸ್ಟೇಷನ್ ಅಧಿಕಾರಿಗಳು ಎಲ್ಆ್ಯಂಡ್ಒ ವಿಚಾರದಲ್ಲಿ ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆ ಎಂಬ ಅಭಿಪ್ರಾಯಗಳಿವೆ. ಕೆಲವು ಸ್ಟೇಷನ್ಗಳಲ್ಲಿ ಎಲ್ಆ್ಯಂಡ್ಒ ಅನುತ್ಪಾದಕ ಶ್ರಮ ಎಂದೇ ನೋಡಲಾಗುತ್ತಿದೆ ಎಂಬುದು ಮೇಲಾಧಿಕಾರಿಗಳಿಗೂ ಗೊತ್ತಿಲ್ಲದ ವಿಚಾರವೇನಲ್ಲ.
ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಮೊದಲ ಆದ್ಯತೆ ಕೊಡಲಾಗುತ್ತದೆ. ಈ ವಿಚಾರದಲ್ಲಿ ಸದ್ದಿಲ್ಲದೆ ಶಿವಮೊಗ್ಗದ ಪ್ರತಿ ಏರಿಯಾದಲ್ಲಿಯು ಡ್ಯೂಟಿ ಮಾಡುವ ಪೊಲೀಸ್ ಸಿಬ್ಬಂದಿಯಿದ್ದಾರೆ. ಅವರದ್ದು ಡ್ಯೂಟಿ ಏನೇ ಇರಲಿ, ಏರಿಯಾಗಳ ಮೇಲೆ ನಿಗಾ ಇಡುವ ಸಿಬ್ಬಂದಿ ತಮ್ಮದೇ ಆದ ನೆಟ್ವರ್ಕ್ನಲ್ಲಿ ಕ್ರೈಂ ಚಟುವಟಿಕೆಗಳನ್ನ ತಡೆಯುತ್ತಿದ್ದಾರೆ. ಯಾವುದೇ ಪಲಾಪೇಕ್ಷೆ ಇಲ್ಲದೇ ತಾವು ತೊಟ್ಟಿರುವ ಸಮವಸ್ತ್ರಕ್ಕಾಗಿ ದುಡಿಯುತ್ತಿರುವ ಶಿವಮೊಗ್ಗ ನಿಷ್ಟಾವಂತ ಪೊಲೀಸ್ ಸಿಬ್ಬಂದಿಗೆ ಮೇಲಾಧಿಕಾರಿಗಳು ರಕ್ಷಣಾತ್ಮಕವಾಗಿ ನಿಲ್ಲಬೇಕಿದೆ. ಅದರಲ್ಲಿಯು ಅಪರಾಧ ಲೋಕದ ನಿರ್ವಹಣೆಯಲ್ಲಿ ಕಠಿಣ ಕ್ರಮ ಕೈಗೊಳ್ಳದಿದ್ದರೇ ಅಪಾಯ ಕಟ್ಟಿಟ್ಟಬುತ್ತಿ.