ಶಿವಮೊಗ್ಗ ಸಿಟಿಯಲ್ಲಿ ಮುಂದುವರಿದ ರೌಡಿಗಳ ಪರೇಡ್! ಕಾರಣವೇನು?

MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ಪೊಲೀಸರು ರೌಡಿಗಳ ಪರೇಡ್ ಮುಂದುವರಿಸಿದ್ದಾರೆ. ಕೋಟೆ ಪೊಲೀಸ್ ಸ್ಟೇಷನ್​ನ ಪೊಲೀಸರ ಬಳಿಕ ಇದೀಗ ತುಂಗಾನಗರ ಪೊಲೀಸ್ ಠಾಣೆ ಪೊಲೀಸ್​ರು ರೌಡಿಗಳ ಪರೇಡ್​ ನಡೆಸಿ ಎಚ್ಚರಿಕೆ ನೀಡಿದ್ಧಾರೆ.  ದಿನಾಂಕ 23-02-2023 ರಂದು   ತುಂಗಾನಗರ ಪೊಲೀಸ್ ಠಾಣೆ ಪಿಎಸ್​ಐ ರಾಜುರೆಡ್ಡಿ ನೇತೃತ್ವದಲ್ಲಿ, ಠಾಣಾ ವ್ಯಾಪ್ತಿಯ ರೌಡಿ ಆಸಾಮಿಗಳನ್ನು ಪೊಲೀಸ್ ಠಾಣೆಗೆ ಕರೆಸಿ ರೌಡಿ ಪರೇಡ್ ಕೈಗೊಳ್ಳಲಾಗಿದೆ. 

Malenadu Today

READ |  ಎಂಥಾ..ಎಂಥಾ ಹಾರಾನೋ? ಅಡಿಕೆ ತಟ್ಟೆ, ನೀರಿನ ಬಾಟ್ಲಿ, ಕಲ್ಲಂಗಡಿ ! ಹಾರಗಳಲ್ಲೇ ಅಭಿಮಾನ ಮೆರೆದ ಕಾರ್ಯಕರ್ತರು| ವಿಡಿಯೋ ನೋಡಿ

ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ  ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೆ  ಇರುವಂತೆ ಎಚ್ಚರಿಕೆ ನೀಡಲಾಗಿದ್ದು, ಒಂದು ವೇಳೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ  ಭಾಗಿಯಾಗುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಗಡಿಪಾರು / ಗೂಂಡಾ ಕಾಯ್ದೆ ರೀತ್ಯಾ ಕ್ರಮ ಕೈಗೊಳ್ಳಲಾಗುವುದೆಂದು  ಎಚ್ಚರಿಕೆ ನೀಡಿರುತ್ತಾರೆ.

Malenadu Today

ಮುಂದುವರಿದ ಲಾಡ್ಜ್​ ವಿಸಿಟ್

ಇನ್ನೊಂದೆಡೆ ಪೊಲೀಸರು ಲಾಡ್ಜ್​ಗಳ ದಾಖಲಾತಿ ಪರಿಶೀಲನೆಯನ್ನು ಮುಂದುವರಿಸಿದ್ದಾರೆ. ನಿನ್ನೆ ದಿನಾಂಕಃ- 23-02-2023  ರಂದು  ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಪಿಎಸ್​ ಮಂಜುನಾಥ ಎಸ್ ಕೊಪ್ಪಲೂರು, ತಮ್ಮ ಠಾಣಾ ವ್ಯಾಪ್ತಿಯ ಲಾಡ್ಜ್ / ರೆಸಾರ್ಟ್ ಗಳಿಗೆ ಭೇಟಿ ನೀಡಿ, ಲಾಡ್ಜ್ ಮತ್ತು ರೆಸ್ಟೋರೆಂಟ್ ಗಳಿಗೆ ಭೇಟಿ ನೀಡುವ  ಗ್ರಾಹಕರ ವಿವರವನ್ನು ರಿಜಿಸ್ಟರ್ ನಲ್ಲಿ  ನಮೂದಿಸಿರುವ ಬಗ್ಗೆ  ಹಾಗೂ  ಲಾಡ್ಜ್ ಗಳಲ್ಲಿ  ಅಳವಡಿಸಲಾದ  ಸಿಸಿ ಟಿವಿ ಕ್ಯಾಮೆರಾಗಳ  ಕಾರ್ಯನಿರ್ವಹಣೆಯ  ಬಗ್ಗೆ ಪರಿಶೀಲಿಸಿದ್ದಾರೆ. 

READ | ವಿಮಾನದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಮಕ್ಕಳು ಓಡಾಡುತ್ತಾರೆ! ಹೆಚ್​ಡಿಕೆ ವಾಗ್ದಾಳಿ! ಕಟೌಟ್ ಹರಿದಿದ್ದಕ್ಕೆ ಶಾರದಾ ಅಪ್ಪಾಜಿ ಕಣ್ಣೀರು

Leave a Comment