ಕನ್ನಡ ಮಾಧ್ಯಮ ಲೋಕದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಈ ನಡುವೆ ರಿಪಬ್ಲಿಕ್ ಕನ್ನಡ ಸುದ್ದಿ ಸಂಪಾದಕಿಯಾಗಿ ಸುವರ್ಣ ನ್ಯೂಸ್ನ ಶೋಭಾ ಮಳವಳ್ಳಿ ಆಯ್ಕೆಯಾಗಿದ್ದಾರೆ. ಇದು ಮಾಧ್ಯಮ ಲೋಕದಲ್ಲಿ ಸಾಕಷ್ಟು ಸಂಚಲನಕ್ಕೂ ಕಾರಣವಾಗಿದೆ. ಈ ಮೊದಲು ಚರ್ಚೆಯಾದಂತೆ, ರಿಪಬ್ಲಿಕ್ ಕನ್ನಡಕ್ಕೆ ಅಜಿತ್ ಹನುಮಕ್ಕನವರ್, ನಿಕಿಲ್ ಜೋಶಿ, ಚಂದನ್ ಶರ್ಮಾರವರ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಶೋಭಾ ಮಳವಳ್ಳಿಯವರು ರಿಪಬ್ಲಿಕ್ ಚಾನಲ್ ಸುದ್ದಿ ಸಂಪಾದಕಿಯಾಗಿ ಆಯ್ಕೆಯಾಗಿದ್ದಾರೆ.

republic tv and prajavani
ಇನ್ನೊಂದೆಡೆ ಹಿರಿಯ ಪತ್ರಕರ್ತೆ ಶ್ರೀಮತಿ ರಶ್ಮಿ ಎಸ್. ಅವರನ್ನು ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪ್ರಕಟಣಾ ಸಂಸ್ಥೆಯ ಸುಧಾ ನಿಯತಕಾಲಿಕೆಯ ಮುಖ್ಯಸ್ಥೆಯಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯನ್ನು ಅಲಂಕರಿಸಿದ ಉತ್ತರ ಕರ್ನಾಟಕದ ಅತ್ಯಂತ ಕಿರಿಯರು ಮತ್ತು ಮೊದಲಿಗರು ಎಂಬುದು ಖುಷಿಯ ಸಂಗತಿ. ಈ ಇಬ್ಬರೂ ಮಾಧ್ಯಮ ಅಕಾಡೆಮಿಯ ಸದಸ್ಯೆಯರು ಎಂಬುದು ಹೆಮ್ಮೆಯ ವಿಷಯವಾಗಿದೆ.