SHIVAMOGGA | Dec 5, 2023 | ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕೆಲವು ಘಟನೆಗಳು ನಡೆದಿದ್ದು, ಅವುಗಳ ಸಂಕ್ಷಿಪ್ತ ವರದಿ ಇಲ್ಲಿದೆ
READ : ನಾಯಿ ಬೊಗಳಿದ್ದಕ್ಕೆ ಬೈಗುಳ! ಸಿಟ್ಟಾಗಿ ನೆರೆಮನೆಯವನ ಮೇಲೆ ಆ್ಯಸಿಡ್ ಎರಚಿದ ವ್ಯಕ್ತಿ!
ಅಡಿಕೆ ಮರ ಕಡಿದು ಮಗನ ಗಲಾಟೆ
ಶಿಕಾರಿಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬ ಮನೆಯಲ್ಲಿ ಹಣದ ವಿಚಾರಕ್ಕೆ ಗಲಾಟೆ ಮಾಡಿದ್ದಷ್ಟೆ ಅಲ್ಲದೆ ತೋಟದಲ್ಲಿ ಅಡಿಕೆ ಗಿಡಗಳನ್ನು ಕಡಿದು ಗಲಾಟೆ ಮಾಡಿದ್ದಾನೆ. ಈ ಸಂಬಂಧ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ದೂರದಾರರ ಮಗನಿಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಮಗಳಿಗೆ ಕಿರುಕುಳ ನೀಡ್ತಿದ್ದ ವ್ಯಕ್ತಿಯ ವಿರುದ್ಧ ದೂರು
ಇತ್ತ ಭದ್ರಾವತಿ ಹೊಸ ಮನೆ ಪೊಲೀಸ್ ಸ್ಟೇಷನ್ (hosamane police station ) ವ್ಯಾಪ್ತಿಯಲ್ಲಿ ತಾಯಿಯೊಬ್ಬರು ತಮ್ಮ ಮಗಳಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿದ್ದಾನೆ ಎಂದು ಪೊಲೀಸರ ಬಳಿ ಅಹವಾಲು ತೋಡಿಕೊಂಡಿದ್ದಾರೆ. ತಕ್ಷಣ ವಿಷಯದ ಬಗ್ಗೆ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಬಂದ ಪೊಲೀಸರು ತೊಂದರೆ ನೀಡುತ್ತಿದ್ದ ಆರೋಪಿಯನ್ನ ತಮ್ಮೊಂದಿಗೆ ಸ್ಟೇಷನ್ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.
READ : ಅರ್ಜುನನನ್ನ ಕೊಂದಿದ್ದು ಯಾರು? ಕಾಕನಕೋಟೆ ಆಪರೇಷನ್ ಖೆಡ್ಡಾ ಮತ್ತೆ ಬೇಕಿದೆ ! ಏಕೆ ಗೊತ್ತಾ ಜೆಪಿ ಬರೆಯುತ್ತಾರೆ
ಹೆಂಡತಿ ಮಗನಿಂದ ಗಲಾಟೆ
ಇನ್ನೊಂದೆಡೆ ಭದ್ರಾವತಿಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಹೆಂಡತಿ ಹಾಗೂ ಮಗ ಗಲಾಟೆ ಮಾಡಿ ತಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ಹೇಳಿಕೊಂಡಿದ್ದಾರೆ. ವಿಷಯ ತಿಳಿದು ಮನೆಗೆ ಬಂದ ಪೊಲೀಸರು ಕುಟುಂಬದ ಸದಸ್ಯರಿಗೆ ಎಚ್ಚರಿಕೆಯನ್ನು ನೀಡಿ ಗಲಾಟೆ ಮಾಡದಂತೆ ತಿಳುವಳಿಕೆ ನೀಡಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ
