realme : ರಿಯಲ್ ಮೀ ಇತ್ತೀಚೆಗೆ ಭಾರತದಲ್ಲಿ ತನ್ನಹೊಸ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ಗಳಾದ ಜಿಟಿ 7 ಮತ್ತು ಜಿಟಿ 7ಟಿ ಅನ್ನುಲಾಂಚ್ ಮಾಡಿದೆ. ಈ ಫೋನ್ಗಳುಹೈ-ಎಂಡ್ ಪರ್ಫಾರ್ಮೆನ್ಸ್ , ಅಡ್ವಾನ್ಸ್ ಡಿಸ್ಪ್ಲೇ ಮತ್ತು ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ಬಂದಿವೆ. ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ಗಾಗಿ ಆಪ್ಟಿಮೈಜ್ ಮಾಡಲಾದ ಈ ಫೋನ್ಗಳು ಬಜೆಟ್‌ಗೆ ಹೊಂದಾಣಿಕೆಯಾದ ಪ್ರೀಮಿಯಂ ಫೀಚರ್ಸ್ ನೀಡುತ್ತವೆ.
realme : ಮೊಬೈಲ್ನ ಬೆಲೆ ಎಷ್ಟು
8GB ರ್ಯಾಮ್ + 256GBಸ್ಟೋರೇಜ್ ಹೊಂದಿರುವ ರಿಯಲ್ಮಿ ಜಿಟಿ 7ನ ಬೆಲೆ 35,999ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಹಾಗೆಯೇ 12GB ರ್ಯಾಮ್ + 256GB ಸ್ಟೋರೇಜ್ ಹೊಂದಿರುವ
ಜಿಟಿ 7ಟಿ ಮಾಡೆಲ್ 37,999 ರೂಪಾಯಿಗಳಿಗೆ ಲಭ್ಯವಿದೆ.ಬ್ಯಾಂಕ್ ಆಫರ್ಗಳು ಮತ್ತು ಎಕ್ಸ್ಚೇಂಜ್ ಡಿಸ್ಕೌಂಟ್‌ಗಳ ಮೂಲಕ ಗ್ರಾಹಕರು ಈ ಫೋನ್ಗಳ ಮೇಲೆ ಹೆಚ್ಚಿನ ರಿಯಾಯಿತಿ ಪಡೆಯಬಹುದು.

realme :ಫೋನಿನ ಪ್ರಮುಖ ವಿಶೇಷತೆಗಳು
ಜಿಟಿ 7 ಸೀರಿಸ್ ಫೋನ್ಗಳು 6.78-ಇಂಚಿನ AMOLED ಡಿಸ್ಪ್ಲೇ ಹೊಂದಿವೆ, ಇದು 120Hz ರಿಫ್ಶ್ ರೆ ರೇಟ್ ಮತ್ತು 1.5K ರೆಸಲ್ಯೂಷನ್ನೊಂದಿಗೆ ಬರುತ್ತದೆ. ಇವುಗಳಲ್ಲಿ ಸ್ನ್ಯಾಪ್ಡ್ರಾಗನ್ 7+ ಜೆನ್3 ಪ್ರೊಸೆಸರ್ ಬಳಸಲಾಗಿದೆ, ಇದು ಹೆಚ್ಚಿನ ಪರ್ಫಾರ್ಮೆನ್ಸ್ ನೀಡುತ್ತದೆ. ಇದರಲ್ಲಿ 5,000mAh ಬ್ಯಾಟರಿ ಮತ್ತು 120W ಸೂಪರ್ವೂಕ್ ಚಾರ್ಜಿಂಗ್ ಸಪೋರ್ಟ್ ಇರುವುದರಿಂದ ಫೋನ್ ಕೇವಲ 20 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ಕ್ಯಾಮೆರಾ ವಿಭಾಗದಲ್ಲಿ 50MP ಸೋನಿ IMX890 ಸೆನ್ಸರ್, 8MP ಅಲ್ಟ್ರಾವೈಡ್ ಮತ್ತು 2MP ಮ್ಯಾಕ್ರೋ ಲೆನ್ಸ್ ಹೊಂದಿದೆ. ಆಂಡ್ರಾಯ್ಡ್ 14 ಆಧಾರಿತ ರಿಯಲ್ಮಿ UI 5.0 ಈ ಫೋನ್ಗಳಲ್ಲಿ ಇದೆ. ರಿಯಲ್ಮಿ ಜಿಟಿ 7 ಮತ್ತು ಜಿಟಿ 7ಟಿ ಫೋನ್ಗಳು ಪ್ರೀಮಿಯಂ ಫೀಚರ್ಗಳನ್ನು ಕೈಗೆಟಕುವ ಬೆಲೆಗೆ ನೀಡುತ್ತವೆ. ಹೆಚ್ಚಿನ ಪರ್ಫಾರ್ಮೆನ್ಸ್, ತ್ವರಿತ ಚಾರ್ಜಿಂಗ್ ಮತ್ತು ಅತ್ಯಾಧುನಿಕ ಡಿಸ್ಪ್ಲೇಯಿಂದ ಕೂಡಿದ ಈ ಫೋನ್ಗಳು ಗೇಮರ್ಸ್ ಮತ್ತು ಪವರ್ ಯೂಸರ್ಸ್‌ಗಾಗಿ ಸೂಕ್ತವಾಗಿವೆ. ಸೆಪ್ಟೆಂಬರ್ 5ರಂದು ಈ ಫೋನ್ಗಳು ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.