bagalkot :ತರಬೇತಿ ವೇಳೆ ಬಾಗಲಕೋಟೆ ಮೂಲದ ಯೋಧ ಹೃದಯಾಘಾತದಿಂದ ಸಾವು
bagalkot : ಚಂಡೀಗಢದ ಸೇನಾ ತರಬೇತಿ ಪಡೆಯುತ್ತಿದ್ದ ವೇಳೆ ಬಾಗಲಕೋಟೆ ಮೂಲದ ಉಪೇಂದ್ರ ಸೋಮನಾಥ ರಾಠೋಡ್ (23) ಎಂಬ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಚಿಂಚಲಕಟ್ಟೆ ಎಲ್ ಎಟಿ ಗ್ರಾಮದ ಯೋಧ ಉಪೇಂದ್ರ ಸೋಮನಾಥ ಕಳೆದ ಮಾರ್ಚ್ನಲ್ಲಿ ಅಸ್ಸಾಂ ರೈಫಲ್ಗೆ ಆಯ್ಕೆಯಾಗಿದ್ದರು. ಹಾಗೆಯೇ ಕಳೆದ ಮೂರು ತಿಂಗಳಿಂದ ತಿಂಗಳಿನಿಂದ ಚಂಡೀಗಢದಲ್ಲಿ ತರಬೇತಿ ಪಡೆಯುತ್ತಿದ್ದರು. ಇದೀಗ ತರಬೇತಿ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಬೆಳಿಗ್ಗೆ ವಿಮಾನದ ಮೂಲಕ ಬೆಳಗಾವಿಗೆ ತರಲಾಗುವುದು. ನಂತರ ಸೇನಾ ವಾಹನದ ಮೂಲಕ ಅದನ್ನು ಕೆರೂರ ಪಟ್ಟಣಕ್ಕೆ ಸಾಗಿಸಲಾಗುವುದು. ಗ್ರಾಮದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಸಕಲ ಸರ್ಕಾರಿ ಗೌರವದಿಂದ ಯೋಧನ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕೆರೂರ ಉಪತಹಶೀಲ್ದಾರ್ ವೀರೇಶ ಬಡಿಗೇರ್ ತಿಳಿಸಿದ್ದಾರೆ.
